ಮೂಲ: ವಿಲಿಯಂ ಬಟ್ಲರ್ ಏಟ್ಸ್
ಮಿದುಳಿನಲ್ಲೇ ಜನರು ಮಾಡುವ ಎಲ್ಲ ವಿಚಾರ –
ದಿಂದ ರಕ್ಷಿಸು ನನ್ನ ದೇವ;
ಅಮರಗೀತೆಯ ಹಾಡುವಾತ ಅದನ್ನು ತನ್ನ
ಮೂಳೆ ಮಜ್ಜೆಗಳಲ್ಲಿ ಬಗೆವ;
ಈತ ಬಹಳ ವಿವೇಕಿ ಮುದುಕ ಎಂದೆಲ್ಲರೂ
ಹೊಗಳುವೆಲ್ಲದರಿಂದ ರಕ್ಷಿಸು;
ನಾನೊಲ್ಲದವನೇನು ಹಾಡಿನ ಸಲುವಾಗಿ
ಅವಿವೇಕಿಯಂತೆ ಕಾಣಿಸಲು?
ಹೇ ದೇವ ಪ್ರಾರ್‍ಥಿಸುವೆ (ಈಚೆಗೀ ಶಬ್ದ
ಬಳಕೆಯಲ್ಲಿದೆ ಅದಕ್ಕಾಗಿ);
ಮೋಹ ತುಂಬಿದ ಮೂರ್‍ಖನಂತೇ ಕಾಣಲಿ ನಾನು
ಮುದುಕನಾಗಿಯೆ ಸತ್ತರೂನು.
*****