ಸಂಪಿಗೆಯ ವೃಕ್ಷದ ಕೆಳಗೆ ಕುಳಿತ ಗುರುವಿನ ಸಾನಿಧ್ಯಕ್ಕೆ, ಒಬ್ಬ ಸಾಧಕ ಬಂದು ‘ದೀಕ್ಷೆ’ ಕೊಡಲು ಕೇಳಿಕೊಂಡ.
ಗುರು ಹೇಳಿದರು- “ಅರಳಿದ ಸ್ವರ್ಣ ಸಂಪಿಗೆ, ಬುದ್ಧದೇವನ ಸಂದೇಶವ ಸಾರುತ್ತಿದೆ. ಗಿಡವು ಗುರುವಾಗಿರುವಾಗ, ನೀನು ದೀಕ್ಷೆ ಕೊಡುವ ಗುರುವನ್ನು ಏಕೆ ಹುಡುಕುತ್ತಿರುವೆ?”
“ಇಲ್ಲಿ ನೋಡು, ಈ ಮಲ್ಲಿಗೆ ಬಳ್ಳಿ. ಮೆಲ್ಲಗೆ ಬಳಿಯಲ್ಲಿ ಕುಳಿತುಕೊ. ಈ ಬಳ್ಳಿ ಮಲ್ಲಿಗೆ ಗಂಧ ನಿನ್ನ ಸುತ್ತಿ ಬಳಿಸುತ್ತದೆ. ನಿನಗೆ ದೀಕ್ಷೆ ಕೊಡುತ್ತದೆ.” ಮಲ್ಲಿಗೆಯ ಮುಗಳನ್ನು ನೋಡುತ್ತ ಶಿಷ್ಯನ ಮೊಗದಲ್ಲಿ ಮುಗಳ ಮಲ್ಲಿಗೆ ಅರಳಿತು.
*****