ಜಯತು ಕನ್ನಡ ಮಾತೆ
ಜಯತು ಕನ್ನಡ ಪುನೀತೆ
ಜಯತು ಜಯತು ಜನನಿ ಕನ್ನಡ ಮಾತೆ||
ನಿನ್ನ ಒಡಲ ಮಮತೆಯ
ಸಿರಿಯಲಿ ಪವಡಿಸಲೆನಿತು ಸುಖವು
ನಿನ್ನ ಆಲಿಂಗದ ಅನುರಾಗ ಗಾನ
ಭಾವತೆಯ ಗುಡಿಯಂದದ ಸೊಬಗು||
ನಿನ್ನ ನುಡಿಯ ಮಾಧುರ್ಯತೆಯಲಿ
ಕಸ್ತೂರಿ ಶ್ರೀಗಂಧ ಚಂದನ ಚೆಲುವು
ನಿನ್ನ ಔದಾರ್ಯತೆಯ ಬಾನಂಗಳದಿ
ಮುಡಿಪಾಗಿಹುದು ನನ್ನ ತನುವು||
ನಿನ್ನ ಹೃದಯದಂಗಳದ
ಸೋಪಾನದಲಿ ಸುಂದರ ಸ್ವಪ್ನಗಳ ತಾಣ
ನಿನ್ನ ಚರಣ ಕಮಲದೊಳಗಣಾ ಭಕುತಿಯಲಿ
ನಮಿಸಿ ಜಯಕಾರವ ಮೊಳಗಿಹುದು ನನ್ನ ಮನವು||
*****