ಕನ್ನಡದಾ ಕಸ್ತೂರಿ ನೀನಾಗಿ ಬೆಳೆದು
ಕನ್ನಡದಾ ಹೊನಲ ಬಾಳಿನಂದದಿ ನಲಿದು
ಒಂದಾಗಿ ಹಾಡೋಣ ಕನ್ನಡವೇ
ಉಸಿರು ಮನ ಅಭಿಮಾನದಿ ||
ಮೂಡಣದಾ ರವಿಕಿರಣವು
ಧರೆಗೆ ಮುಖ ಚೆಲ್ಲಿ ನಿಂದು
ಬೆಳದಿಂಗಳ ಹೊತ್ತಿಕೆಯ ಮಡಿಲಲ್ಲಿ
ಒಂದಾಗಿ ಬೆಸೆದು ಹಾಡೋಣ
ಕನ್ನಡವೇ ಉಸಿರು ಮನ ಆಭಿಮಾನದಿ ||
ಕಡಲ ತೀರ ಅಲೆಗಳ ಮೈತ್ರಿಕೂಟ
ಕೆಳೆಯಾಗಿ ಅಪ್ಪಿ ಆನಂದ ನೀಡುವಲ್ಲಿ
ಸಂಧ್ಯಾ ಸಮಯದ ಒಡಲ ಸೆರೆಯಲ್ಲಿ
ಒಂದಾಗಿ ಬೆಸೆದು ಹಾಡೋಣ
ಕನ್ನಡವೇ ಉಸಿರು ಮನ ಅಭಿಮಾನದಿ ||
*****