ಮೂಲ: ವಿಲಿಯಂ ಬಟ್ಲರ್ ಏಟ್ಸ್
ಪ್ರದರ್‍ಶನಕ್ಕಿಟ್ಟ ಮೂಕಮೃಗದಂತೆ
ಸುತ್ತ ತಿರುಗುವೆನು ನಾನು,
ನಾನು ಯಾರು ಎನ್ನುವುದೆ ತಿಳಿಯದು,
ಎಲ್ಲಿ ಹೊರಟಿರುವೆ ಏನು?
ನನಗೆ ಗೊತ್ತಿರುವುದೊಂದೇ ಮಾತು
ಪ್ರೇಮಿಸಿರುವೆ ನಾನು, ನಾಚಿಕೆ –
ಗೇಡಿ ಪೂರ ನಾನು.
ನನ್ನ ಆತ್ಮ ಆರಾಧಿಸುತ್ತಿದೆ
ತನಗೇ ಆಗದ್ದನ್ನು,
ನಾಲ್ಕೂ ಊರಿ ನಡೆಯುವ ಮೃಗಕ್ಕೆ
ತಕ್ಕದು ಅನಿಸಿದ್ದನ್ನು.
*****