ಮೂಲ: ವಿಲಿಯಂ ಬಟ್ಲರ್ ಏಟ್ಸ್
ಹಕ್ಕಿ ಮಿಡುಕುತಿದೆ ಗಾಳಿಗೆ,
ಯೋಚನೆ, ಎಲ್ಲಿಗೊ ಅರಿಯೆ.
ಬೀಜ ತುಡಿಯುತಿದೆ ಬಸಿರಿಗೆ.
ಮನಸಿನ ಮೇಲೆ, ಗೂಡಿನ ಮೇಲೆ
ರತಿಯಲಿ ಬಳಲುವ ತೊಡೆಗಳ ಮೇಲೆ
ಜಿನುಗಿ ಇಂಗುತಿದೆ ಅದೇ ಪ್ರಶಾಂತತೆ
ಮೆಲ್ಲಗೆ ಮೆಲ್ಲಗೆ ಮೆಲ್ಲಗೆ.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್
ಹಕ್ಕಿ ಮಿಡುಕುತಿದೆ ಗಾಳಿಗೆ,
ಯೋಚನೆ, ಎಲ್ಲಿಗೊ ಅರಿಯೆ.
ಬೀಜ ತುಡಿಯುತಿದೆ ಬಸಿರಿಗೆ.
ಮನಸಿನ ಮೇಲೆ, ಗೂಡಿನ ಮೇಲೆ
ರತಿಯಲಿ ಬಳಲುವ ತೊಡೆಗಳ ಮೇಲೆ
ಜಿನುಗಿ ಇಂಗುತಿದೆ ಅದೇ ಪ್ರಶಾಂತತೆ
ಮೆಲ್ಲಗೆ ಮೆಲ್ಲಗೆ ಮೆಲ್ಲಗೆ.
*****