ಮಲ್ಲಿ – ೧೫

ಮಲ್ಲಿ – ೧೫

ಬರೆದವರು: Thomas Hardy / Tess of the d’Urbervilles

ನಾಯಕನು ಒಂದು ಸುತ್ತು ತೆಗೆದಿದ್ದಾನೆ ನೋಡಿದವರು “ಅಷ್ಟಿಲ್ಲದೆ ಹೇಳುತ್ತಾರೆಯೇ ರಾಜದೃಷ್ಟಿ ಬೀಳಬಾರದು ಅಂತ” ಎಂದು ಕೊಳ್ಳುವರು. ಆದರೂ ನಾಯಕನು ಆ ನಗುವಿನಲ್ಲಿ ಎಲ್ಲವನ್ನೂ ತೇಲಿಸುವನು.

ನಾಯಕನಿಗೆ ಹೆಂಡತಿಯಲ್ಲಿ ಬಹಳ ಅಭಿಮಾನ. ಅವಳಿಗೂ ಅಷ್ಟೆ, ! ಗಂಡನು ಕೃಶನಾಗುತ್ತಿರುವನೆಂದು ಅವಳಿಗೆ ಬಹಳ ಚಿಂತೆ. “ಆಗ ಬೇಟೆಗೆ ಹೋಗಿ ಬಂದಲಾಗಾಯಿತು ಬುದ್ಧಿಯವರು ಇಳಿದು ಹೋಗುತವರೆ. ದೃಷ್ಟಿಯೇ ತಾಕಿತೋ? ಆ ಕಾಡಿನಲ್ಲಿ ಏನಾದರೂ ಮೆಟ್ಟಿಕೊಂಡಿತೋ ? ಏನಾದರೂ ಮಾಡಬೇಕು” ಎಂದು ಕೊಳ್ಳುವಳು. ಅಡಿಗೆಯೆ ಮಾದಮ್ಮನನ್ನು ದಿನಕ್ಕೊಂದು ಸಲವಾದರೂ ಕರಿದು ” ಅಮ್ಮೀ, ಆದಿನ ಬೇಟೆಗೆ ಹೋಗಿ ಬಂದ ಬುದ್ಧಿ ಯೋರಿಗೆ ಇಳೀ ತೆಗೆದೆಯಾ ? ” ಎಂದು ಕೇಳುವಳು. ಇನ್ನು ಯಾರು ಅಂತಃಪುರದಲ್ಲಿರುವ ಅವಳಿಗೆ ಕುಳಿತು ಕತೆಯನ್ನು ಹೇಳು ವವರು? ಅವಳಿಗೆ ಬೇಸರವಾದಕ್ಕೆ ಮಲ್ಲೀಗೆ ಬಂತು ಬುಲಾವ್ !

ಅರಮನೆಗೆ ಮಗಳನ್ನು ಕರೆದುಕೊಂಡು ಹೋಗುವಾಗ ಕೆಂಪಿಯು ಬಹು ಪ್ರಯತ್ನದಿಂದ ಮಲ್ಲೀಗೆ ಜಡೆಯನ್ನು ಹಾಕಿ ಮೊಕ ಒರೆಸಿ ಕುಂಕುಮದ ಬೊಟ್ಟು ಚೆನ್ನಾಗಿಟ್ಟು ಕರೆದುಕೊಂಡು ಹೋಗುವಳು. ಆದರೂ ನಾಯಕನ ಅಟ “ಸುಂದರಬುದ್ಧಿಯವರಿಗೆ ” ಅದು ಸೊಗಸದು. ಅವಳ ಜಡೆಯನ್ನು ಬಿಚ್ಚಬೇಕು : ತಾನು ಮತ್ತಿ ಅದನ್ನು ಹೆಣೆಯ ಬೇಕು. ಸೊಗಸಾಗಿ ಅಲಂಕಾರ ಮಾಡಿ, ಅವಳನ್ನು ಎತ್ತಿಕೊಂಡು ಹೋಗಿ ನಾಯಕರ ಮುಂದೆ ಅವಳನ್ನು ಬೊಂಬೆಯ ಹಾಗೆ ಹಿಡಿದು “ಬುದ್ದಿ, ನೋಡಿದಿರಾ ಈ ಮಲ್ಲೀನ?” ಎನ್ನಬೇಕು. ಅವರು ಅವಳನ್ನು ಎತ್ತಿಕೊಂಡು ಮಲ್ಲೀಗೆ ಒಂದು ಮುತ್ತು ಕೊಟ್ಟರೆ ಸುಂದರಬುದ್ಧಿಗೆ ಎಷ್ಟೋ ಸಂತೋಷ. ಅವಳೇ ಒಂದು ದಿನ ಹೇಳಿದಳು: “ಲೇ ಮಲ್ಲಿ! ನಮ್ಮ ಬುದ್ಧಿಯೋರ್ನೇ ಮದುವೆಯಾಗಿ ಬುಡೇ! ನಮ್ಮ ಜೊತೆಯಲ್ಲಿಯೇ ಇದ್ದು ಬಿಡೋವಂತೆ* ಎಂದು. ಮಲ್ಲಿಯು “ಅಮ್ಮ! ಸುಂದರಬುದ್ದಿಯವರು ಇಲ್ಲೇ ಇರು ಅಂತಾರೆ. ಇದ್ದು ಬಿಡಲಾ?? ಎಂದು ಕೇಳುವಳು.

ಕೆಂಪೀಗೆ ಒಳಗಿನ ಮನಸ್ಸು “ಸುಂದರಬುದ್ದಿಯೆನರ ಬಾಯ ಹರಕೆ ನಿಜವಾದರೆ, ನಮ್ಮ ಅದ್ದಷ್ಟ !” ಎನ್ನುವುದು.

ಸುಂದರಬುದ್ದಿಯು ಒಂದೊಂದುದಿನ ಮಲ್ಲಿಯನ್ನು ಅಲ್ಲಿಯೇ ಇಟ್ಟುಕೊಳ್ಳುವಳು. ಆದಿನ ಆ ಗಂಡಹೆಂಡಿರ ಜೊತೆಯಲ್ಲಿ ಅವಳಿಗೂ ಆ ಶಯ್ಯೆಯಲ್ಲಿ ಎಡೆಯು ಸಿಗುವುದು.

ನಾಯಕನಿಗಂತೂ ಒಂದು ವಿಚಿತ್ರವಾಗಿತ್ತು. ಆದಿನ ರಾಜ ಕುಮಾರನ ಸನ್ನಿಧಿಯಲ್ಲಿ ಬೇಟೆಗೆ ಹೋಗಿಬಂದು ಆಗಿದ್ದ ಆಯಾಸವೆಲ್ಲ ಪರಿಹಾರವಾಗಿ ಮೈಯ್ಯು ಹಗುರವಾದಂತೆ, ಮಲ್ಲಿಯನ್ನು ತಬ್ಬಿ ಕೊಂಡಾಗಲೆಲ್ಲ ಆಗುವುದು. ಈಚೆಗೆ ಎಸ್ಟೋ ಸಲ ಬೇಟಿಗೆ ಹೋಗಿ ಬಂದು, ತನಗೆ ಆಗುವ ಅನುಭವವು ನಿಜವೇ ಎಂದು ಪರೀಕ್ಷಿಸಿಕೊಂಡಿ ದ್ದನು. ನಿಜ ಎಂದು ಆತನಿಗೆ ನಂಬಿಕೆಯಾಗಿತ್ತು. ಅಂದಿನಿಂದ ಬೇಟೆಗೆಹೋಗಿ ಬಂದದಿನ ತಪ್ಪದೆ ಅರಮನೆಯಿಂದ ಮಲ್ಲಿಗೆ ಕರೆಬಂದು ಅವಳು ಅಲ್ಲಿಯೇ ನಿಲ್ಲುತ್ತಿದ್ದಳು.

ಒಂದು ದಿನ ನಾಯಕನು ತಡೆಯಲಾರದೆ ಹೆಂಡತಿಯನ್ನು ಏಕಾಂತದಲ್ಲಿ ಕೇಳಿದ. ಕೇಳಿದಾಗ ಅವನಿಗೆ ಏನೋ ಕೇಳಬಾರದ ಮಾತು ಕೇಳುವಂತೆ ಒಳದಿಗಲು. “ಅಲ್ಲಾ, ಈ ಹುಡುಗಿ ನೋಡಿ ದಿರಾ? ಇವಳ ಮಗ್ಗುಲಲ್ಲಿ ಮಲಗಿದರೆ ಏನೋ ಸೊಂಪು ಅಲ್ಲವಾ? ”

ರಾಣಿಯು ನಕ್ಳು ಹೇಳಿದಳು: “ಅದೂ ನಾನು ಕಂಡಿವ್ನಿ ಅದಕ್ಕೇ ಇವಳ್ನ ಬುದ್ದಿಯೋರಿಗೆ ಮೀಸಲು ಮಾಡೋವಾ ಅಂತಲೂ ಅಂದುಕೊಂಡಿವ್ನಿ. ಅಲ್ಲದೆ, ಇನ್ನೇನು ಆರುವರ್ಷ. ಇನ್ನು ಆರೇಳು ವರ್ಷದಲ್ಲಿ ಅವಳೂ ಮೈ ನೆರೀತಾಳೆ. ಆ ವೇಳೆಗೆ ನಾವು ದೊಡ್ಡಮ್ಮ ನೋರಾಗಿ, ಚಿಕ್ಕಮ್ಮನೋರು ಇನ್ನೊಬ್ಬರಿದ್ದರೇನೆ ಸರಿ, ಅಂತ. ಆದರೆ ಈ ಮುಂಡೇದರ ರೂಪಗೀಪ್ಕ, ಗುಣಗಿಣ, ಇರೋ ಅಂಗೇ ಕುಲವೂ ಇದ್ದಿದ್ದರೆ, ಅನ್ನಿಸ್ತದೆ. ಇನ್ನೊಂದುಸಲ, ಬುದ್ದಿಯೋರಿ ಗೇನಂತೆ ಕುಲನಿದ್ದರೆ ತಾಳಿ, ಇಲ್ಲದಿದ್ದರೆ ಬಂದಿ, ಅಂದುಕೋತೀನಿ. ”

” ಅಂತೂ “ಬುದ್ದಿ ಯೋರಿಗೆ. ಮಲ್ಲಿ ಕಟ್ಟಬೇಕು ?”

“ನಾ ಕಟ್ಟದಿದ್ದರೂ ಇದನ್ನ ಇನ್ನು ಯಾರಾದರೂ ಮುಟ್ಟಿ ಬದುಕಾರಾ? ಆದರೂ ದೇವರು ಇಂಥ ಹೆಣ್ಣ ಇನ್ನು ಹುಟ್ಟಿಸಾನೋ ಇಲ್ಲವೋ? ಇದು ನಮ್ಮ ಹೊಟ್ಟೆೇಲಾದರೂ “ಹುಟ್ಟಿದ್ದರೆ? ಮುಕ್ಕ ನಿಗೆ ಏನೇನು ಮಾಡಿಬಿಡುತ್ತಿದಸದ್ದೆವೋ? ಈಗಲಾದರೂ ಹೋಕ್ಕೊಳ್ಳಿ, ನಮ್ಮನೇಗಾದರೂ ಸೇರಿಕೊಂಡು ಬದುಕಲಿ. ”

“ಅಲ್ರೀ ಇಂತಾ ರೂಪಸಿ ಮನೆಗೆ ಬಂದರೆ ನಿಮ್ಮ ಗತಿ?”

” ನಮ್ಮ ಗತಿಯೇನು? ಬುದ್ದಿಯೋರು ಊರೂರು ತಿರುಗೋ ದಾದರೂ ನಿಲ್ಲುತ್ತದೆ. ಮಾರಾಯರು ಎತ್ತೋದರೋ ಏನೋ ಅಂತ ನಿದ್ದೆಯಿಲ್ಲದೆ ರಾತ್ರಿಯೆಲ್ಲಾ ಒದ್ದಾಡೋದಾದರೂ ತಪ್ತದೋ? ”

” ಹೆಂಗಾನರೆ ನಮ್ಮಿಂದ ನಿಮಗೆ ಬೋ ಒದ್ದಾಟ ಅನ್ನಿ. ”

“ಅಂಯ್ ! ಬುಡಿ ಅಂದ್ರೇ! ಗಂಡಸರು ಅಂದರೆ ಇನ್ನೇನು ಒಂದೇ ನಂಬ್ಯೊಂಡು ಕಣ್ಣು ಪಿಳೀ ಪಿಳೀ ಅಂತ, ನಾನೂ ನನ್ನ ಕಣ್ಗೊ೦ಬೆ ಅಂತೆ ಕುಂತಿರಬೇಕಾ? ಹೆಣ್ಣು ಮನೇಲಿರಬೇಕು. ಗಂಡು ಹತ್ತು ಯಮುನೆ ಬಾಗಿಲಾದರೂ ಹೆತ್ತಿಳೀದತದ್ದರೆ, ಆ ಮುಕ್ಕನ್ನ ಏನು ಹೇಳಲೋ ?”

“ಅಂಗಾದರೆ ನಾವು ಮಾಡೋದು ಒಪ್ಪಿಕೆ ಅಂತ ಆಯಿತು. ?

“ಹಸಾ ಆದರೆ ಮನೇಲಿ ಕಟ್ಟಬೋದು. ಹುಲಿ, ಹಂದಿ, ಜಿಂಕೆ, ಕಾಟಿ ಅನ್ನೆಲ್ಲ ಹಿತ್ತಲಲ್ಲಿಡೋಕಾದೀತಾ ಬುದ್ದಿ ! ಅವೆಲ್ಲಾ ಕಾಡಲ್ಲೇ ಇರಬೇಕು. ಬೇಕೂ ಅಂದಾಗ ಬ್ಯಾಟೆಗೆ ಹೋಗೋಕಿಲ್ವಾ! ಅಂಗೇ! ! ಅದಕ್ಕೆ ನಾವು ಅಡ್ಡಿ ರೆ, ಆದೀತಾ

ಹೆಣ್ಣು ಹುಟ್ಟಿ ರೋದು ಗಂಡನ ಪಾದ ತೊಳೆಯೋಕೆ. ಗಂಡು ಹುಟ್ಟಿರೋದು ಮೆರೆಯೋಕೆ. ?

“ಆಯಿತು. ಕೊನೆಗೆ ಮಲ್ಲೀದು ಏನು ಮಾಡೀರೋ ??

“ಒಡೇರು ಆಗಬೋದು ಅಂದರೆ ನಾಳೆಯೇ ಬಂದಿಮಾಡೋಕೆ ಹಾಕೋದೇ. ?

“ಊರೋರು ಈ ಸೂಳೇಮಗನ್ನ ನೋಡಪ್ಪ; ತನ್ನ ಹೊಟ್ಟೀಲಿ ಹುಟ್ಟಿದ ಮೊಗೀನಂಗೆ ಇರೋ ಮೊಗೀಗೆ ಬಂದ ಹಾಕದ ಅನ್ದೆ ಬುಟ್ಟಾರಾ !? ”

“ಆ! ಏನೇಳ್ಫೋ ಈ ಊರೋರ್ನ ! ಚಪ್ಪನ್ನಾರು ದೇಶದ ಮೇಲೆ ತಾನೇ ನಮ್ಮ ಬುದ್ದಿಯೋರು ಮಾಡಿದ್ದು ಒಪ್ಪದೆ, ಅಂಯ್ ಅಂದು ಬದುಕೋ ಗಂಡಾದರೂ ಉಂಟಾ ! ಬುದ್ದಿಯೋರ ಇಚಾರ ಉಸ್ ಅಂದ್ರೆ, ನಮ್ಮ ಹಿಂದುಗಳಾದರೂ ಒಂದುಸಲ ಹಿಂದುಮುಂದು ನೋಡಿ ಲೇ ಅಂದಾರು, ಅವ ಇದಾನಲ್ಲ ನಿಮ್ಮ ಹಕೀಂ ಅವನು ಒಂದೇ ಏಟಿಗೆ ಹಾರಿಬುಟ್ಟಾನು : ಸೀಳ್ನಾಯಿ ಬಿದ್ದಂಗೆ ಮೇಲೆ ಬಿದ್ದು ಸಿಗಿದು ಬಿಟ್ಟಾನು. ಅವನು ಬಾಯಲ್ಲಿ ಅಲ್ಲಾ ಆಲ್ಲಾ ಅಂದರೂ ಅವನಿಗೆ ನಿಮ್ಮ ಮೇಲೆ ಪಂಚಪ್ರಾಣ ಅಲ್ಲವಾ?”

“ಅಂಗಾದರೆ ಈಗ ಮಲ್ಲೀ ನಿಮ್ಮ ಮಗ್ಗುಲಲ್ಲಿ ದಿನಾ ಮಲಗೋಕೆ ಅವಳ ಕುಲ ಅಡ್ಡಿ ಅನ್ನಿ”

“ನೀವು ಸಾವಿರ ಏಳಿ. ಇಂತಾ ಹೆಣ್ಣು ಕುಲಹೀನರ ಮನೇಲಿ ಹುಟ್ಟೋಕಿಲ್ಲ. ಏನೋ ಅವಳ ಹೀನ ಅದೃಷ್ಟಾ. ಎಲ್ಲಿಂದಲೋ ಬಂದು, ವನವಾಸ ಬಂದ ಗೌರಮ್ಮನಂಗೆ ಇವರ ಮನೆ ಸೇರವಳೆ.”

“ಇರಲಿ ಬುಡಿ. ನಾಳೆನಾಳಿದ್ದರಲ್ಲಿ ಇನ್ಸ್ಪೆಕ್ಟರ್ ರಜಾಕ್: ಸಾಬರು ಬರುತಾರೆ. ಆಗ ಎಲ್ಲಾ ತಿಳೀತದೆ! ಹೋಗಲಿ, ಕೆಂಪೀಗೂ ಮಲ್ಲಣ್ಣನಿಗೂ ಹೇಳಿ ಇಲ್ಲೇ ಇಟ್ಟೊಂಡೇ ಬುಡಿ ಅಷ್ಟು ಆಸೆಯಾದರೆ!?

“ತಮ್ಮ ಅಪ್ಪಣೆ ಆಗಲಿ ಅಂತ ನಾನೂ ತಡದೇ! ಇರಲಿ, ಸುಮ್ಮನಿರಿ. ಇದಕೂ ದಿನದಿನ ಆ ಅಲಂಕಾರ, ಈ ಅಲಂಕಾರ, ಅಂತ ಮಾಡಿ ನಾನೂ ಒಡವೆಗಿಡವೆ ಹೇರಿ ಪುಸಲಾಯಿಸಿತಿದ್ದೀನಿ. ಅಲ್ಲದೆ, ಆ ಬುದ್ಧಿ ಅದೇನು ಬುದ್ಧಿ ಅಂದೀರಿ, ಇನ್ನೂ ಆ ಮುಕ್ಕ ಆರು ವರ್ಷ ತುಂಬದೋ ಇಲ್ವೋ ಆಗಲೇ ಪುಸ್ತಕ ಓದುತದಲ್ಲ

ಅದ್ಯೂ ಅರಮನೆ ಸಂಬಳ ಆಗದೆ; ಮೈಸೂರಲ್ಲಿ ಮನೆ ಮಾಡ್ಬುಟ್ಟು ಇಟ್ಟು ಎಲ್ಲಿವರೆಗಾದರೂ ಸೈ ಓದಿಸೇಬುಟ್ಟರೋ ಅನ್ನಸ್ತದೆ.”

“ಅಲ್ಲಾ ಕಣ್ರೀ, ಅವಳು ಓದಿದರೆ, ಓದುಬರಾ ಬರದಿದ್ದ ನಿಮ್ಮ ಕೈ ಹಿಡಿದು ಸುಖವಾಗಿದ್ದಾಳಾ ! ನಿಮ್ಮ ಮಾತು ಕೇಳಿ ಬಂದೀನೂ ಹಾಕಿಬುಡೋದು, ಓದಿಸಿಬುಡೋಡು, ಆಮೇಲೆ ಎಲ್ಲಾದರೂ ನಮ್ಮ ಬುಡಕೇ ನೀರು ತಿದ್ದಿದರೆ ”

“ಮಡಕೆ ಒಡೆದರೆ ಮೂರೇಕಾಸು. ಓದಿದ ಮೇಲೆ ಐಲುಬಂದು ದಾರಿ ದಾರಿ ಹಿಡೀತು ಅನ್ನಿ. ಆಗತಾನೆ ಏನು ನಿಮ್ಮ ಎಂಜಲು ತಿನ್ನೋ ನಾಯಿಗಳು ಅನ್ನೋದು, ಆದಕ್ಕೆ ಈ ಜಾತಿ ಹೆಂಗಾಗೋಕಿಲ್ಲ. ಇಲ್ನೋಡಿ, ಈ ಕೈರೇಕೆ ಇರೋರು ನಿಯತ್ತಾಗಿರ್ತಾರಂತೆ. ನಂಗೆ ನಮ್ಮಪ್ಸಾಜಿ ಹೇಳ್ತಿದ್ದರು. ಈ ರೇಕೆ ನಂಗಿಂತಲೂ ಮುದ್ದಾಗಿದೆ ಅದರ ಕೈಲಿ,?

“ಅಂಗಾದರೆ, ರೇಕೆಗೀಕೆ ಎಲ್ಲಾ ನೋಡಿದೀರಿ ಅನ್ನಿ.”

“ಅಂಯ್ ಬುಡಿಬುದ್ದಿ.”

ನಾಯಕನಿಗೆ ಹೆಂಡತಿಯ ಮಾತು ಪ್ರಿಯವೂ ಆಗಿತ್ತು. ಪಥ್ಯವೂ ಆಗಿತ್ತು. ಆದರೂ, ಎಳೇ ಮಗು, ಕಂದಮ್ಮ ಹೋಗಲಿ ಬೇಡ ಅಂದಾನೇ ? ಸಾಧ್ಯವಿಲ್ಲ. ಅಂತೂ ವೈದ್ಯ ಹೇಳಿದ್ದೂ ಹಾಲೂ ಅನ್ನ ರೋಗಿ ಬಯಸಿದ್ದುದೂ ಹಾಲೂ ಅನ್ನ ಎಂಬಂತೆ ಆಯಿತು. “ಆಗಲಿ, ಏನೇನಾಯ್ತದೋ ನೋಡೋವ, ಮಾತು ಹಂಗಂದು ಕಣ್ಣಿಗೆ ನಿದ್ದೆ ಕೊಡೀಬನ್ನಿ” ರಾಣಿಯು ಇನ್ನೂ ಹೆತ್ತಿರಕ್ಕೆ ಬಂದು ತಬ್ಬಿಕೊಂಡು ನಂಬಿಸುತ್ತಾ ಕೇಳಿದಳು : “ಬುದ್ದಿ ಋಣವಿದ್ದು ಈ ಮುಕ್ಕ ತಮ್ಮ ಕೈಹಿಡಿದರೆ,

ಮಲ್ಲಿಗೆ ಪಾದರಿ ಹೂವಿನ ಸರದಂಗೆ ಇರದಿದ್ದರೆ ನಾ ನಮ್ಮ ತಾಯಿ ಮಗಳಲ್ಲ” ಅನ್ಸಿ.”

ನಾಯಕನಿಗೆ ಆ ಸರಳತೆಯು ಕಣ್ಣಿನಲ್ಲಿ ನೀರು ತಂದಿತು. ಚೊಕ್ಕ ವಾಗಿ ಅವಳಿಗೊಂದು ಮುತ್ತು ಕೊಟ್ಟು ” ನಿನ್ನಂಥಾ ಚಿನ್ನ ಇದ್ದೂ ಈ ಹಾಳು ಮನಸ್ಸು ಕಾಗೇಬಂಗಾರದ ಬೆಮೆ ಬಿಡೊಲ್ಲದಲ್ಲಾ ; ಹಾಳು ಹಣೇಬರಕ್ಕೇನು ಹೇಳಲಿ ?” ಎಂದು ಅವಳನ್ನು ಇನ್ನೂ ಗಾಢವಾಗಿ ತೆಕ್ಕೆಯಲ್ಲಿ ಹಿಡಿದನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ಲೀಲೆ
Next post ಸುಗ್ಗಿ ಪದಗಳು: ತುಂಡು ಪದಗಳು

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…