ಒಬ್ಬ ಶಿಲ್ಪಿ ದೇವತಾ ವಿಗ್ರಹಗಳನ್ನು ಕೆತ್ತುತ್ತ ಇದ್ದ. ವಿಗ್ರಹದದಲ್ಲಿ ಸೌಂದರ್‍ಯ ಜ್ಯೋತಿಯನ್ನು ಹುಡುಕುತ್ತಿದ್ದ. ಅತೃಪ್ತಿ ಆದಾಗ, ಕೆತ್ತಿದ ಶಿಲ್ಪಗಳನ್ನು ಬೆಂಕಿಯಲ್ಲಿ ಹಾಕಿ ದಹಿಸುತಿದ್ದ.
ಇದನ್ನು ನೋಡಿದ ಜನ ಬೆರಗಾಗಿ “ಇದೇನು ಸುಂದರ ಶಿಲ್ಪಗಳನ್ನು ಹೀಗೆ ಭಸ್ಮ ಮಾಡುತ್ತಿದ್ದೀ?” ಎಂದು ಕೇಳುತಿದ್ದರು.
ಮರದ ವಿಗ್ರಹದಲ್ಲಿ ಅಡಗಿದ ಜ್ಯೋತಿಯನ್ನು ನಾಕೆತ್ತಲಾರೆ. ಅದಕ್ಕೆ ಶಿಲ್ಪವನ್ನು ಬೆಂಕಿಗೆ ಹಾಕಿ ಜ್ಯೋತಿ ಕಂಡು ತೃಪ್ತನಾಗುತ್ತಿರುವೆ” ಎಂದ.
“ಕೈಯಲ್ಲಿ ಶಿಲ್ಪ ಕೆತ್ತಬಹುದು. ಜ್ಯೋತಿ ಕೆತ್ತಲಾದೀತೆ?” ಎಂದೆನಿಸಿದಾಗ ಅಂತರಂಗದಲ್ಲಿ ಜ್ಯೋತಿಯನ್ನು ಕಂಡ.
*****