ಚೀನಾದ ಬೀಜಿಂಗ್‌ನಲ್ಲಿ ಒಂದೇ ಕಡೆ ೯೭ ಅಸ್ಥಿಪಂಜರಗಳು ಅದು ಸಣ್ಣ ಮನೆಯಲ್ಲಿ ಸಿಕ್ಕಿವೆ….! ಅಲ್ಲಿಯ ಜನರೇನು ಪುರಾತತ್ವ ಶಾಸ್ತ್ರಜ್ಞರು ದಂಗು ಬಡಿದು ಹೋಗಿರುವರು.
ಈ ೯೭ ಅಸ್ಥಿಪಂಜರಗಳು ತಮ್ಮ ಕತೆ ವ್ಯಥೆಯನ್ನು ಈಗೀಗ ಅಂದರೆ.. ಆಗಸ್ಟ್ ೨೦೧೫ರಲ್ಲಿ ಹೇಳುತ್ತಿವೆ.
ಈ ೯೭ ಅಸ್ಥಿಪಂಜರಗಳು ಸುಮಾರು ಐದು ಸಾವಿರ ವರ್‍ಷಗಳಷ್ಟು ಹಳೆಯದಾದ ಸಣ್ಣ ಮನೆಯೊಂದರಲ್ಲಿದ್ದವುಗಳನ್ನು ಪುರಾತತ್ವ ಶಾಸ್ತ್ರಜ್ಞರು ಎಲ್ಲವನ್ನು ಹೊರಗೆಳೆದಿರುವರು.
ಇವೆಲ್ಲ ಭಾರಿ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರನ್ನು ಈಶಾನ್ಯ ಚೀನಾದ ಸಣ್ಣ ಮನೆಯಲ್ಲಿ ಒಟ್ಟಿಗೆ ಮಲಗಿಸಿ ಸುಡುತ್ತಿದ್ದರು. ಅದು ಉಳಿದವರಿಗೆ ಹರಡದಿರಲೆಂದು ಬಾಗಿಲು, ಕಿಟಕಿ, ಗವಾಕ್ಷಿ ಏನೆಲ್ಲ ಮುಚ್ಚಿ ಜಾಗ್ರತೆ ಮಾಡುತ್ತಿದ್ದರೆಂದು ಪುರಾತತ್ವ ಶಾಸ್ತ್ರಜ್ಞರು ವಿವರಿಸಿರುವರು.
ಈ ರೀತಿ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರಲ್ಲಿ ಹದಿಹರೆಯದವರು ಯುವಕರು-ಮಧ್ಯ ವಯಸ್ಕರು ಬಾಲಕರು ಎಲ್ಲ ರೀತಿಯ ವಯಸ್ಕರು ಇರುತ್ತಿದ್ದರೆಂದು ಅಸ್ಥಿಪಂಜರ ತಲೆಬುರುಡೆ ಇತ್ಯಾದಿಗಳನ್ನು ತೋರಿಸಿ ಅಲ್ಲಿದ್ದವರಿಗೆಲ್ಲ ವಿವರಿಸುತ್ತಿದ್ದರು.
ಈಶಾನ್ಯ ಚೀನಾದ ಈ ಭಾಗದಲ್ಲಿ ಲಿಪಿ ಇಲ್ಲದಾಗ ಇಲ್ಲಿನ ಜನರೆಲ್ಲ ಗುಂಪುಗುಂಪಾಗಿ ಸಣ್ಣ ಸಣ್ಣ ಮನೆಗಳಲ್ಲಿ ನೆಲೆಸಿದ್ದರೆಂಬುದನ್ನು ಸಂಶೋಧನೆಗಳು ಹೊರಗೆಡವಿಯಲ್ಲದೆ, ಆಹಾರಕ್ಕಾಗಿ ಮುಖ್ಯವಾಗಿ ಬೇಟೆಯಾಡುತ್ತಿದ್ದರೆಂಬುದನ್ನು ತಜ್ಞರು ಸಂಶೋಧಿಸಿರುವರು.
– ಹೀಗೆ ಸಂಶೋಧನೆಗಳು ತೀವ್ರಗೊಳ್ಳುತ್ತಾ ಹೋದಂತೆಲ್ಲ ಏನೆಲ್ಲ ರಹಸ್ಯಗಳು ಹೊಸ ಹೊಸ ಆವಿಷ್ಕಾರಗಳು ಹೊರಗೆ ಬೀಳಬಹುದೆಂದು ಕಾದು ನೋಡೋಣವಲ್ಲವೇ?
*****