ಎತ್ತರದ ತೆಂಗು, ಗಿಡ್ಡನೆಯ ತಾಳೆಮರಗಳೆರಡು ಪಕ್ಕ ಪಕ್ಕದಲ್ಲಿ ಬೆಳೆದಿದ್ದವು, ತಾಳೆ ಮರ ಕೇಳಿತು.
“ನಿನ್ನ ಉದ್ದನೇಯ ದೇಹ ಕಾಪಾಡಲು ಆಗಸವಿರುವಾಗ ಅದೆಷ್ಟು ಗರಿಯ ಕೈಗಳು ನಿನಗೆ?” ಎಂದು ಪ್ರಚೋದಿಸಿತು.
ತೆಂಗಿನಮರ ಒಂದು ಕ್ಷಣ ಮೌನ ತಾಳಿ, ತಾಳೆ ಮರವನ್ನು ಕೇಳಿತು.
“ಅದು ಸರಿ, ಸದಾ ಗಾಳಿ ಬೀಸುತ್ತಿರುವಾಗ ನೀನೇಕೆ ಮೈ ಎಲ್ಲಾ ಬೀಸಣಿಕೆ ಹೊತ್ತಿರುವೆ?” ಎಂದಿತು.
ತಾಳೆ ಮರ ಉತ್ತರವಿಲ್ಲದೆ ಮೂಕಾಗಿ ನಿಂತಿತು.
ತೆಂಗು ತಾಳೆ, ಮೌನದಲ್ಲಿ ಕಂಡುಕೊಂಡ ಉತ್ತರಕ್ಕೆ ಆಗಸ, ಗಾಳಿ ಸಾಕ್ಷೀಭೂತವಾಗಿ ನಿಂತಿತ್ತು.
*****