ಗಗನ ಹಕ್ಕಿಯು ಗಾನ ತುಂಬಿತು
ಪ್ರೇಮ ಪರ್‍ವತ ನಗಿಸಿತು
ಮುಗಿಲು ಹನಿಹನಿ ಗಂಧ ತೂರಿತು
ಪ್ರೀತಿ ಗಮಗಮ ಹರಡಿತು
ಬೀಜ ಒಡೆಯಿತು. ಚಿಗುರು ಚಿಮ್ಮಿತು
ಮೊದಲ ಚುಂಬನ ನೀಡಿತು
ರಸದ ಮಾವಿನ ಮಧುರ ಸೋನೆಯು
ತುಟಿಯ ಮೇಲಕೆ ಇಳಿಯಿತು
ಗುಡ್ಡ ಆಡಿತು ಬೆಟ್ಟ ಚಾಚಿತು
ಶಿಖರ ಮುಗಿಲಿಗೆ ನುಗ್ಗಿತು
ಗಗನದೆತ್ತರ ಭೂಮಿ ಹತ್ತರ
ಮಧುರ ಉತ್ತರ ಪಡೆಯಿತು
ಅತ್ತ ಇತ್ತಲು ಸುತ್ತಮುತ್ತಲು
ತೇರು ಶಿವಶಿವ ಎಳೆಯಿತು
ಮುಗಿಲ ಕಳಸಾ ಎದೆಯ ಸರಸಾ
ಮಿಲನ ಸಮರಸವಾಯಿತು
*****