ನಂಬಲೆಂತು?

ರಾಗ ಧನ್ಯಾಸಿ- ಆದಿ ತಾಳ

ನಂಬಲೆಂತು ನಾ ನೋಡುವ ಮುನ್ನ
ಯದುಕುಲದಾ ಲೀಲೆಯ ನಿನ್ನ? ||ಪಲ್ಲ||
ನೋಡದೆ ನಂಬಲು ಬಲ್ಲವನಲ್ಲ,
ನೋಡಿಸಿ ನಂಬಿಸೊ ಬಲ್ಲವ ನಲ್ಲ! ||ಅನು||

೧ನನ್ನ ಮನದ ಮೋಹಮೇಕೆ ಹೀರೆ?
೨ಏಕೆದೆಯಾನೆಯ ಮದ ಮುರಿಯೆ?
೩ಏಕೆ ಕನಲ ಕುದುರೆಯ ಕೊಲಲೇರೆ?
೪ಬಿಗಿತದ ಕತ್ತೆಯ ತಿರ್ರನೆ ತರಿಯೆ? ||೧||

೫ಎದೆಯ ಬೆದೆಯ ಹಿಳಿಲನೇಕೆ ಹಿಳಿಯೆ ?
೬ಕಪಟದೇಕೆ ರೆಕ್ಕೆಯ ಕೀಳೆ?
೭ಹಗೆಯ ಹಾವಿನೇತಕೆ ಹೆಡೆ ತುಳಿಯೆ?
೮ಸೆಳೆಯಾಸೆಯ ಸುಳಿಯನೇಕೆ ಸೀಳೆ? ||೨||

ನಿನ್ನಡಿ ಹಂಬಲ ಹಸವ ಮೇಸೆಯ?
ಕೊಳಲಾಗದೆ ಬಿದಿರೆದೆಯೆನ್ನ?
೯ಆಲ ಸಾಲದೇನೆನ್ನೆದೆಯಾಸೆಯ ?
೧೦ಎತ್ತೆ ಏಕೆ ಪಾಪದ ಮಲೆಯನ್ನ? ||೩||

ಡಂಬ ಭಕ್ತಿಯೆನ್ನೆದೆಯಿಂ ಮಾಣದೆ,
೧೧ಮಘವನ್ಮಖ ಮಾಣಿಸಿ ಗುಣವೇಂ?
ನನ್ನ ನಯನದಿ ಸದಾ ನಿನನಾನದೆ,
೧೨ಯಮುನೆಯ ತೇಲಿನ ನೆಳಲಲಿ ತಣಿವೇಂ? ||೪||

೧೩ಹೂವಿನಾಸೆಯೇ? ಪ್ರೇಮದ ಮೊಗಸನೆ
ಸೂಸಿ ಹೂವಿಸೇಕೆದೆಯೆನ್ನ?
೧೪ನನ್ನೆದೆಯೊಗೆಯದೆ ಪಾತಕಿಯಗಸನೆ?
೧೫ಬಾಗಿಹೆ, ನೆಟ್ಟನೆ ನೆಗಹೇಕೆನ್ನ? ||೫||

ನನ್ನೆದೆಯಾನ್ಮೆಯ ೧೬ಮಲ್ಲನ ಮುರಿಯದೆ,
೧೭ಹರಿಯದೆದೆಯ ಹಿಂಸೆಯ ಬಿಲ್ಲ,
ಪಾಪಪುರುಷ ಕಂಸನಿರವನಿರಿಯದೆ,
ಬಲ್ಲೆನೆ ಬಿಲ್ಲಿನ ಹಬ್ಬದ ಗೆಲ್ಲ? ||೬||

ಗೊಲ್ಲ ಗೊಲ್ಲತಿಯರಲ್ಲಿಯೆ ಸಾಕೆನೆ
ಸಲ್ಲಿಸಿದೆಯೊ ೧೮ಮಲ್ಲಣಿಯೆಲ್ಲ?
ಹೊಲ್ಲ ಹೊಲ್ಲದಲಿ ತಲ್ಲಣಿಪೇಕೆನ
ಗೂಲ್ಲೆ ಮೆಲ್ಲಡಿಯ ಪಲ್ಲನದೊಲ್ಲ? ||೭||

ಆದೆಯ ರಾಧೆಯ ಹೃದಯಾರಾಧನ?
ಈಯೆಯೇಕೆ ನಿನ್ನಡಿ ಸಾರೆ?
ಕಂಬನಿಯಿಂಬಿಗನೆಂಬುದೆ ಸಾಧನ-
ಅಂಗಲಾಚಿ ಕರೆವೆನೇಕೆ ಬಾರೆ? ||೮||

ನನ್ನೆದೆ ಯದುಕುಲದಲಿ ಕಂಬನಿಯಾ
ಕೂಲದಿ ಬಾಲಲೀಲೆಯ ನಿನ್ನ
ಮರಳಿ ಮೆರಸದಿರೆ, ಕನಸಿನ ಗನಿಯಾ
ಕಾಲನನಗೆಯಲಳನವೆ ಅಕಟೆನ್ನ? ||೯||
*****
೧ ಪೂತನಿ
೨ ಕುವಲಯಾನಪೀಡನೆಂಬ ಆನೆ
೩ ಕೇತಿ ಎಂಬ ಕುದುರೆ
೪ ಧೇನುಕನೆಂಬ ಕತ್ತೆ
೫ ಅರಿಷ್ಟನೆಂಬ ಗೂಳಿ
೬ ಬಕಾಸುರ
೭ ಕಾಲಿಯನೆಂಬ ನಾಗ
೮ ತೃಣಾವರ್‍ತ
೯ ಭಾಂಡೀರವೆಂಬ ಆಲದ ಮರ
೧೦ ಗೋವರ್ಧನೋದ್ಧಾರ
೧೧ ಇಂದ್ರಯಜ್ಞ ನಿಷೇಧ
೧೨ ಆಕ್ರೂರನಿಗೆ ಯಮುನಾ ನದಿಯಲ್ಲಿತ್ತ ದರ್‍ಶನ
೧೩ ಮಾಲಾಕಾರನಿಂದ ಹೂವನ್ನು ಕೊಂಡುದು
೧೪ ಮಥುರೆಯಲ್ಲಿ ಅಗಸನನ್ನು ಎದುರ್‍ಗೊಂಡುದು
೧೫ ಕುಬ್ಜೆ
೧೬ ಜಾಣೂರ
೧೭ ಧನುರ್‍ಭಂಗ
೧೮ ರಾಸಕ್ರೀಡೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎತ್ತ ಸಾಗಿದೆಯೊ ಕನ್ನಡ ರಥವು
Next post ನಂಬಿಕೆಯೇ ದೇವರು

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…