(ಕೋಲಾಟದ ಪದ)
ತಾನತನ್ನನಾಲೋ ತಂದನ್ನಾನಾ
ತನನ ತಂದನ್ನಾಲೋ ತಂದನ್ನಾನಾ || ಪಲ್ಲವಿ ||
ಯಜಮನ ಗೌಡಾ ರಾಯನಲ್ಲೋ (ಲಂಬೊ ರಾಯ)
ಮಗನಿಗೆ ಮದಿಯ ಮಾಡಬೇಕಂದ || ೧ ||
ಮಗನಿಗೆ ಮದಿಯ ಮಾಡಬೇಕಂದ
ಬಾಜರ ಮನೆಗೆ ಹೋಗವನಲ್ಲೋ
ಬಾಜರ ಮನೆಗೆ ಹೋಗವನಲ್ಲೋ
ಬಾಜರ ಹೆಣ್ಣ ಕೇಳವನಲ್ಲೋ || ೨ ||
ಬಾಜರ ಹೆಣ್ಣ ಕೇಳವಾಗೆ
ಹೆಣ್ಣ ಕೇಳಿ ಭರವಸೆ ಮಾಡಿ
ಹೆಣ್ಣ ಕೇಳಿ ಭರವಸೆ ಮಾಡಿ
ತಿರಗಿ ಮನೆಗೆ ಬರುವಾನಲ್ಲೋ || ೩ ||
ತಿರಗಿ ಮನೆಗೆ ಬಂದೆಕಂಡೇ
ಹೇಳುಲೂರಿಗೆ ಹೇಳಿಕೆ ಮಾಡಿ
ಹೇಳುಲೂರಿಗೆ ಹೇಳಿಕೆ ಮಾಡಿ
ಹೇಳದಿದ್ದ ಊರಿಗೆ ಡಂಗರ ಶರದ || ೪ ||
ದೂರಿನೂರಿಗೆ ಡಂಗರ ಹೋ ಡದಿ
ಕೂಡಿಸೂರಿಗೆ ವಾಲಿ ಬರೆದ
ಕೂಡಿಸೂರಿಗೆ ವಾಲಿ ಬರೆದ
ಬೇಳೆಬೆಲ್ಲ ಶಾಮನ ಕೂಡೇ || ೫ ||
ಬೇಳೆಬೆಲ್ಲ ಶಾಮನ ಕೂಡೇ
ಬಾಕಲ ಮುಂದೆ ತೋರಣಗೈದ
ಬಾಕಲ ಮುಂದೆ ತೋರಣಗೈದ
ಬಾಗಿಲಿಗೆ ಮುತ್ತೆಲ್ಲಾ ಸುರದ || ೬ ||
ಬಾಗಿಲಿಗೆ ಮುತ್ತೆಲ್ಲಾ ಸುರದ
ದೊಣಪೆಗೆ ತೋರಣವ ಗೈದ
ದೊಣಪೆಗೆ ತೋರಣವ ಗೈದ
ಮದಿವಿಗೆ ಶೃಂಗಾರಗೈದ (ಶುಂಗಾರ) || ೭ ||
ಯಜಮಾನಗೌಡ ರಾಜನಲ್ಲೋ
ಬಾವನೆಂಟರ ಸೇರುವಾಗೇ (ಸೇಯ್ಯು)
ಬಂದು ಬಳಗ ಸೆಯ್ಯುವಾಗೆ
ಬಂದು ಬಳಗ ಸೆಯ್ಯುವಾಗೆ || ೮ ||
ಮುತ್ತಿನ ಬಾಸಿಂಗ ಸೂಡೇ
ಯಜಮಾನಗೌಡ ರಾಜನಲ್ಲೋ
ಯಜಮಾನಗೌಡ ರಾಜನಲ್ಲೋ
ಮಗನಿಗೆ ಮದಿವೆಯ ಮಾಡಬೇಕೆಂದೆ
ದಿಬ್ಬಣ ಶೋವನ ಹೋಗುವಾಗೆ || ೯ ||
ದಿಬ್ಬಣ ಶೋವನ ಹೋಗುವಾಗೆ
ವಾದಿ ಪೇಪೆ ಹೊಡವರಲ್ಲೋ
ವಾದಿ ಪೇಪೆ ಹೊಡವರಲ್ಲೋ
ಮದ್ದುಗುಂಡು ಶುಡುವಾರಲ್ಲೋ || ೧೦ ||
ದರಕಿಕ್ರೇದರ ಮುರದಂಗಲ್ಲೋ
ಆಕಾಶಬಾಣ ಬಿಡುವಾಗ
ದರಕಿತ್ರೇದರ ಮುರದಂಗಲ್ಲೋ
ಹಗಲುಬತ್ತಿ ನೋ ಡಿದರೆ || ೧೧ ||
ಹಗಲು ಇರುಳುಲಾದರಲಾಗೇ
ಕೋಣನ ಕೊಂಬ ನೋಡಿದರೆ
ದರಕಿತ್ರೇದರ ಮುರದಂಗಲ್ಲೋ
ಯಜಮಾನಗೌಡ ರಾಜನಲ್ಲೋ || ೧೨ ||
ದಿಬ್ಬಣ ಶೋವನ ಹೋಗುವಾಗೇ
ಪಟ್ಟಣದೊಳಗಿನ ಪಟ್ಟಣಶೆಟ್ಟಿ
ದಂಡು ದಾವುಳಿ ಬರತಿದಂದೇ
ಪಟ್ಣ ಬಿಟ್ಟಾಕಿ ಓಡಿಹೋದ || ೧೩ ||
*****
ಹೇಳಿದವರು: ದೇವು ನಾಗು ಗುನಗ, ಅಡಲೂರು
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.