ತಾಯಿ ತಂದಿಽ ಸತ್ತು ಇಂದಿಽಗ್ಹನ್ನೆರಡೊ ವರುಷ ||
ಇಂದಽ ನಮ ನೀಲ-ಗಂಗನ ಭಾವ ಬಂದಾನಽ | ಸೂಯಿ||
ಇಂದಽ ನಿಮ ನೀಲ-ಗಂಗನ ಖಳುವಬೇಕವ್ವಾ| ಸೂಯಿ||
* * *
ಅಚ್ಚೀ ಬಿಂಡಿಽ ಬಿಽಡು ಇಚ್ಚಿ ಬಿಂಡಿಽ ಬಿಽಡು||
ನಡುವಿಽನ ಬಿಂಡ್ಯಾನ ಸೀರಿ ಉಟಿಗ್ವಾ ನಿಲಗಂಗಾ| ಸೂಯಿ||
ಅಚ್ಚೀ ಭರಣೀ ಬಿಽಡು ಇಚ್ಚೀ ಭರಣೀ ಬಿಽಡು||
ನಡುವಿನ ಭರಣ್ಯಾನ ವಸ್ತಾ ಇಟಿಗ್ವಾ ನಿಲಗಂಗಾ| ಸೂಯಿ||
ಎಡಕೊಮ್ಮ ಹೊಳ್ಳವ್ವಾ ಬಲಕೊಮ್ಮ ಹೊಳ್ಳೆವ್ವಾ ||
ನಿಂತ ಗೆಳದ್ಯಾರಿಗಿ ಹೇಳವ್ವಾ ತಂಗಿಽ| ಸೂಯಿ||
ಬಿಸಲಽ ಬಡಿದರ ಶೆಲ್ಲ್ಯಾ ಮುಸುಕ ಹಾಕಣ್ಣಾ| ಸೂಯಿ||
ನೀರಡಿಕ್ಯಾದರ ಗಿಂಡಿಲಿ ನೀರ ಕುಡಿಸಣ್ಣ| ಸೂಯಿ||
* * *
ತೆವರಿಗ್ಹೊಡಿಯುವ ಕುದುರಿ ತೆಗ್ಗೀಗಿ ಹೊಡೆದಾನ||
ಮೈಯ ಕೈಯಗಳು ಮುಟ್ಟಿಲ್ಹೋಗ್ಯಾನ| ಸೂಯಿ||
ಸಿಟ್ಟೀಲಿ ನೀಲಗಂಗಾ ಮಡವ ಧುಮಕ್ಯಾಳ| ಸೂಯಿ||
* * *
ಆ ಊರ ಹಾದೀಲಿ (ಬತ್ತಲ) ಕುದರಿಽ ಬರತದ||
ಆಣ್ಣಾ ಸಹದೇವಣ್ಣಾ ಒಬನೇ ಬರತಾನ| ಸೂಯಿ||
ಮಡದೀ ನೀಲಗಂಗಾನ ಖಳುವಲಿಲ್ಲೇನ| ಸೂಯಿ||
ಆ ಊರ ಹಾದೀಲಿ ಏಳ್ಮಂದಿ ಕಳ್ಳಽರು||
ಮೈಯಽ ಕೈಯಗಳು ಮುಟ್ಟಲ್ಹೋಸಗ್ಯಾರೋ| ಸೂಯಿ||
ಸಿಟ್ಟೀಲಿ ನೀಲಗಂಗಾ ಮಡವ ಧುಮಕ್ಯಾಳೋ| ಸೂಯಿ||
ಮೊನ್ನಿಽನ ರಾತುರಲಿ ಸಪನಽವು ಬಿಽದ್ದಿತೊ||
ಮುತ್ತಿನ ತೂರಾಯಿಗಿ ಬೆಂಕಿ ಹೆತ್ತಿತ್ತೊ| ಸೂಯಿ||
ಇಽವು ಸುದ್ದಿಗಳವರಕ್ಕಽಗ ಒಯ್ಯೋ| ಸೂಯಿ||
* * *
ತಂಗಿಽ ನೀಲಗಂಗಾ ಏನ ಹೇಳ್ಯಾಳೊ| ಸೂಯಿ||
ಆ ಊರ ಹಾದೀಲಿ ಏಳ್ಮಂದಿ ಕಳ್ಳಽರ||
ಮೈಯ ಕೈಯಗಳು ಮುಟ್ಟಲ್ಹೋಗ್ಯಾರೊ || ಸೂಯಿ||
ಸಿಟ್ಟೀಲಿ ನೀಲಗಂಗಾ ಮಡವ ಧುಮಕ್ಯಾಳೊ| ಸೂಯಿ||
ತಾಯ್ತಂದಿ ಸಾಯಾಽಗ ಐಯ್ದಿನದ ಕೂಸಿದ್ದ್ಯ|
ಖಾರಿಕ ತೆಯ್ದ್ಹಾಕಿ ಸಲಹಿದನಲ ತಂಗಿಽ| ಸೂಯಿ||
ತಾಯ್ತಂದಿ ಸಾಯಾಗ ಏಳ್ದಿನದ ಕೂಸಿದ್ದಿ||
ಅಂಜರದ್ಹಣ್ಹಾಕಿ ಸಲವಿದನಲ ತಂಗಿ| ಸೂಯಿ||
*****