ಕನ್ನಡ ನಾಡು ಪ್ರತಿಭಾವಂತರ ಬೀಡು. ಅದರಲ್ಲಿಯೂ ಕೊಡಗು ಎಂದಾಕ್ಷಣ ಕಣ್ಣ ಮುಂದೆ ಕಾಶ್ಮೀರ ಬಂದು ಹೋಗುವುದು. ವೀರ ಸೇನಾನಿಗಳ ನಾಡು ಕೆಚ್ಚೆದೆಯ ಬೀಡು.
ಕೊಡಗು ದೇಶ ಸೇವೆಗೂ ಮುಂದೆ ಪ್ರತಿಭಾವಂತರಿಗೆ ಮುಂದೆ ಎನ್ನುವುದಕ್ಕೆ ಸುಪ್ರಿಯಾ ದಯಾನಂದ್ ಅವರು ನಮಗೆಲ್ಲ ಇಂದು ಹಿರಿಸಾಕ್ಷಿಯಾಗಿರುವರು. ಸುಪ್ರಿಯಾ ದಯಾನಂದ್ ಕೊಡಗಿನ ಸೋಮವಾರ ಪೇಟೆ ತಾಲ್ಲೂಕಿನ ಗೆಜ್ಜೆ ಹಣಕೋಡು ಗ್ರಾಮದ ಹೆಮ್ಮೆಯ ಸುಪುತ್ರಿ.ತಂದೆ- ಸಿದ್ಧಿ ಪ್ರಸಿದ್ಧಿ ಕಾಫಿ ಬೆಳೆಗಾರರಾದ ದಯಾನಂದ್ ತಾಯಿ- ಅಮ್ಮ ಕಾವೇರಮ್ಮನ ವರಪುತ್ರಿ ಕವಿತಾ.
ಸುಪ್ರಿಯಾ ದಯಾನಂದ್ ಈಗ ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್ಸಿ ಕೃಷಿ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ.
ದಿನಾಂಕ ೧೨-೦೮-೨೦೧೫ ರಿಂದ ೨೨-೦೮-೨೦೧೫ ರವರೆಗೆ ಫ್ರಾನ್ಸ್‌ನ ಪ್ಯಾರೀಸ್‌ನಲ್ಲಿ ಜರುಗಲಿರುವ ಜಾಗತಿಕ ಮಟ್ಟದ ಆಹಾರ ಪದ್ಧತಿ ಕುರಿತು ಬೃಹತ್ ವಿಚಾರ ಸಂಕೀರ್ಣಕ್ಕೆ ಭವ್ಯ ಭಾರತದಿಂದ ಏಕೈಕ ಪ್ರತಿನಿಧಿಯಾಗಿ ಇವರು ಹೋಗಿ ಬರಲಿದ್ದಾರೆ.
ಇಲ್ಲಿ ವಿಶ್ವದ ೫೦ ದೇಶದ ಪ್ರತಿನಿಧಿಗಳು ತಮ್ಮ ತಮ್ಮ ದೇಶಗಳಲ್ಲಿನ ಆಹಾರ- ಬೀಜ-ದವಸ-ಧಾನ್ಯ-ತಳಿಗಳ ಉತ್ಪಾದನೆ, ಆಮದು, ರಫ್ತು ಗುಣಮಟ್ಟ, ಮಾರುಕಟ್ಟೆಯ ಬಗ್ಗೆ ವ್ಯಾಪಕ ಚರ್ಚೆ, ಪ್ರಬಂಧ ವಿಚಾರ ವಿನಿಮಯ ನಡೆಯಲಿದೆ.
ದಿನಾಂಕ ೧೬-೦೯-೨೦೧೫ ರಿಂದ ೨೦೧೬ ರ ಫೆಬ್ರವರಿವರೆಗೆ ಬೆಲ್ಲಿಯಂನ ಗೆಂಟ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳುವ ಸುವರ್ಣಾವಕಾಶವನ್ನು ಸುಪ್ರಿಯಾ ದಯಾನಂದ್ ಅವರು ಪಡೆದುಕೊಂಡಿರುವರು.
ಹೀಗೆ ಸುಪ್ರಿಯಾ ದಯಾನಂದ್ ತಾನುಟ್ಟಿದ ಊರಿಗೆ, ತಂದೆತಾಯಿಗೆ, ಕಲಿತ ಶಾಲೆ ಕಾಲೇಜಿಗೆ ಕೀರ್ತಿ ತಂದಿರುವರು. ಇವರ ಪ್ರತಿಭೆ, ಉತ್ಪತ್ತಿ, ವಿದ್ವತ್ ಉಳಿದವರಿಗೆ ಸ್ಫೂರ್ತಿದಾಯಕ ಹರ್ಷದಾಯಕವಾಗಿದೆ.
ಕಲಿತರೆ ಇದ್ದರೆ ಇರಬೇಕು ಸುಪ್ರಿಯಾ ದಯಾನಂದ್‌ವರಂತೆ, ಪ್ರತಿಭಾವಂತ ಮಕ್ಕಳು ಅಲ್ಲವೇ?
ನಾವು ನೀವು ಎಲ್ಲರೂ ಸುಪ್ರಿಯಾ ದಯಾನಂದ್ ಅವರಿಗೆ ಆಲ್ ದಿ ಬೆಸ್ಟ್, ಹೇಳೋಣವಲ್ಲವೇ?
*****