Home / ಕವನ / ಕವಿತೆ / ಆನೆ ಆನೆ ಆನೆ

ಆನೆ ಆನೆ ಆನೆ

ಆನೆ ಆನೆ ಆನೆ
ಆನೆ ಬಂತೊಂದಾನೆ
ಪರಿಕಿಸಿದರದು ಭಾರೀ ಸೊನ್ನೆ

ಯೇ ಗುಲಾಮ ಹೇ ಗುಲಾಮ ಇದು ಏನು ಆನೆ
ಎಲ್ಲ ಮುಗಿದ ಮೇಲೂ ಏನು ನಿನ್ನಾನ
ಚೇಳು ಸತ್ತರೂನು ಅದರ ಕೊಂಡಿಯಾನೆ
ಹಿಂಗೆ ಯಾಕೆ ಇಲ್ಲಿ ಕೂತು ಕೊಂಡಾನೆ

ರಾಜ ಮೊದಲು ತಲೆ ಕೊಟ್ಟು ಹೋದಾನೆ
ನಂತ್ರ ಮಂತ್ರಿ ಅವ್ನ ಹಿಂದೆ ಹೊಂಟು ಹೋದಾನೆ
ರಾಣಿಯರು ನಾಶವಾದ ಅಂತಃಪುರದಾನೆ
ಊರು ಕೇರಿ ವಾಸ ವೊಸಿ ವಾಸಿಯಾದಾನೆ

ಕೋಟೆ ಗೀಟೆ ಗೋಡೆ ಗೀಡೆ ಮುರಿದು ಬಿದ್ದಾನೆ
ಒಂದಿರುಳು ಕೊತವಾಲನೆ ಓಟಕಿತ್ತಾನೆ
ಹಾಸ್ಯಗಾರ ಮೊದಲೆ ಮೊಸಳೆ ಬಾಯ್ಗೆ ಸಿಕ್ಕಾನೆ
ಯಾರಿಲ್ಲ ಈಗಲ್ಲಿ ಸುತ್ತಮುತ್ತಾನೆ

ಹಚ್ಚಡವ ಬಿಚ್ಚಿಟ್ಟು ಓಡಿದಾನೆ
ನೀನದರ ಕೆಳಗೆ ಬಚ್ಚಿಟ್ಟಾನೆ
ಯುದ್ಧ ಮುಗಿದ ಮೇಲೆದ್ದು ಬರುವಾನೆ
ಎಲ್ಲಿ ರಾಜ್ಯವೆಂದು ಘೀಳಿಟ್ಟಾನೆ

ಗುಲಾಮ ನೋಡು ಈಗ ನಿನ್ನ ಕಾಲಾನೆ
ಇನ್ನು ಯಾರೂ ನಿನ್ನ ಬಾಲವಿಲ್ಲಾನೆ
ಗೋವು ಗೋಪಾಲ ಎರಡು ನೀನಾನೆ
ನೀನೆ ತೇರು ನೀನದನು ಎಳೆವಾನೆ

ಆನೆ ಮೇಲಂಬಾರಿ ಕುಂತುಕೊಂತಾನೆ
ಕುದುರೆ ಮೇಲೆ ಏರಿದ್ಮಲೆ ರಾವುತಾನೆ
ಪಲ್ಲಕಿಯೊಳಗೂ ಹತ್ತಿ ಕೂತ ಮುದ್ದಾನೆ
ಅದ ಹೊತ್ತು ಹೊರಟಿತೋ ಮದ್ದಾನೆ

ಎಲ್ಲದರ ಮೊದಲಿದ್ದ ಶುದ್ಧಾನೆ
ಎಲ್ಲದರ ಕೊನೆ ಕಂಡ ಖುದ್ದಾನೆ
ಮೊದಲ ದುಃಖ ಕೊನೆಯ ನಗು ಆದಾನೆ
ಆಟ ಮುಗಿಸಿ ಊಟ ಮಾಡಿ ಹೋದಾನೆ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...