ಬದುಕು ಇದು ಭವದ ಕಾರ್‍ಮುಗಿಲು
ನರಜನ್ಮವಿದು ಹರನ ಮರೆತಿಹುದು
ನಿತ್ಯ ಮನುಜನಿಗೆ ಮನಸೆ ಸಂಚಾಲಕ
ಆಸೆ ನಿರಾಸೆಗಳೊಳಗೆ ತೊಳಲಾಡುತಿಹುದು
ನೂರು ವರುಷ ಆಯಸ್ಸು ಇದೆಯೋ ಗೊತ್ತಿಲ್ಲ
ಕೋಟಿ ವರುಷಕ್ಕಾಗುವಷ್ಟು ಧನವು ಸಂಚಯನ
ಬಂಧು ಮಿತ್ರರು ಸಮಯಕ್ಕುಂಟೊ ಗೊತ್ತಿಲ್ಲ
ಅವರ ಬದುಕಿಗಾಗಿ ನಿತ್ಯ ರಾಮಾಯಣ
ದೇಹ ಭಾವಗಳಲಿ ಮರೆತು ಮರೆದವರು
ಒಡನಾಡಿಗಳ ನಡುವೆ ತಾವೇ ವೀರಮತಿ
ತಮ್ಮೊಳಗಿನ ಆತ್ಮ ಹೇಗಿರುವನೋ ಅರಿಯದವರು
ವೇದಾಂತಗಳ ಉದ್ಧರಿಸುವ ತಾವೆಯತಿ
ಯಾವಕ್ಷಣಕಕ್ಕೂ ಬಂತು ಈ ಜೀವ ಲೋಕಕ್ಕೆ
ಆ ಗಳಿಗೆಯಿಂದಲೇ ಹುಟ್ಟಿತ್ತು ಸ್ವಾರ್ಥ ವಂಚನೆ
ಕ್ಷಣಕ್ಕೂ ಮಾಡಿದುಕ್ಕೆಲ್ಲ ಕೊಡಬೇಕಲ್ಲವೆ ಲೆಕ್ಕ
ಮಾಣಿಕ್ಯ ವಿಠಲನಾಗಿ ಬೇಡ ಆತ್ಮ ವಂಚನೆ
*****