ರಾಮರಾಯರ ಮಗಳನ್ನು ಜಹಗೀರ್ದಾರ ಶಂಕರರಾಯರ ಮಗ ನಿಗೆ ಕೊಢುತ್ತಾರಂತೆ– ಎಂಬ ವದಂತಿಯು ಊರಲ್ಲೆಲ್ಲಾ ಹರಡಿಕೊಂಡಿತು. ರಾಮರಾಯನ ಮನೆಗೆಹೋಗಿ ಕನ್ಯೆಯನ್ನೂ ವರನನ್ನೂ ನೋಡಿಕೊಂಡು ಬಂದಿದ್ದ ಹೆಂಗಸರು ಅಲ್ಲಲ್ಲಿ ತಮ್ಮ ಪರಿಚಿತರೊಡನೆ ವರಸಾಮ್ಯವನ್ನು ವರ್ಣಿಸತೊಡಗಿದರು.
ಒಂದನೆಯವಳು.-ಏನು ಪುಣ್ಯವಂತಳಮ್ಮಾ ಕಮಲೆ ! ಅಂತಹ ಗಂಡನನ್ನು. ಪಡೆಯಬೇಕಾದರೆ ಪೂರ್ವಜನ್ಮ ದಲ್ಲಿ ಎಷ್ಟು; ಒಳ್ಳೆಯ ಪೂಜೆಯನ್ನು ಮಾಡಿದ್ದಳೊ !
ಎರಡನೆಯವಳು–ಅಲ್ಲವೇನಮ್ಮ–ಮತ್ತೆ ! , ಕಮಲೆ ಆ ಹುಡುಗನ ಉಂಗುಷ್ಪವನ್ನೂ ಹೋಲಲಾರಳು.
ಮೊರನೆಯವನಳು _ ಹಾಗುಂಟಿ ? ಕಮಲೆಯು ಸೌಂದರ್ಯ ದಲ್ಲೇನು ಈಡಿಮೆ ? . ಈ ಜರತಾರಿ ಸೀರೆಯನ್ನುಟ್ಟು ಕೊಂಡು ಸೋಫಾದ ಮೇಲೆ ಕೂತಿದ್ದರೆ ಸುಮ್ಮನೆ ವರಲಕ್ಷ್ಮಿಯಹಾಗೆ ಕಾಣುತ್ತಿದ್ದಳಲ್ಲ ! ಅವಳ ವಜ್ರದ ಬುಲಾಕೊಂದೇ ಸಾಲದೆ?
ನಾಲ್ಟ್ರನೆಯವಳು~-ಸರಿ ! ಸರಿ ! ನೀವು ಹೇಳಿದ್ದು ನಿಜವೆ ; ಕಲಾಬತ್ತಿನ ಪೀತಾಂಬರ, ವಜ್ರದ ಬುಲಾಕು, ಕೆಂಪಿ ನೋಲೆ, . ಅಡ್ಡಿಕೆ, ವಂಕಿ. ಇವುಗಳಲ್ಲವೂ ಬಹು ಚೆನ್ನಾಗಿದ್ದವು.
ಐದನೆಯವಳು—- ನೀವೇನು ಬೇಕಾದರೂ ಹೇಳಿ, ಭಾಗ್ಯವೇ ಸೊಬಗು.
ಹೀಗೆಲ್ಲರೂ ಮಾತನಾಡುತ್ತಿರುವಾಗ್ಗೆ ರಮಾಬಾಯಿ ಅಲ್ಲಿಗೆ ಬಂದಳು . ಆಕೆಯ ಮನೆಯ ಎದುರುಮನೆಯಲ್ಲಿ . ಈ ಮಾತು ಗಳು ನಡೆಯುತ್ತಿದ್ದವು, ಅವಳು ಬರುವ ಹೊತ್ತಿಗೆ ಸರಿಯಾಗಿ ಕಮಲೆಯ ಸೌಂದರ್ಯ ಪ್ರಶಂಸೆಯಾಗುತ್ತಿತ್ತು. ಕಮಲೆಯ ಮಾತು ಬರಲು ಕಾರಣವೇನೆಂದು ಪುನಹೆಯಲ್ಲಿರುವ ಜಹಗೀರ್ದಾರ ಶಂಕರ ರಾಯರ ಮಗನಿಗೆ ಆಕೆಯನ್ನು ಕೊಡುತ್ತಾರೆಂದು ತಿಳಿಯಬಂದಿತು.
ಆ ಹುಡುಗನ ಹೆಸರೇನು ? ಎಂದು ರಮಾಬಾಯಿ ಕೇಳಿ ದಳು, “ಅದೇನೋಮ್ಮ ನಮಗೆ ತಿಳಿಯದು. ಗಂಗಾಬಾಯಿಯ ಅಕ್ಕನ ಮಗನಂತೆ. ಆಕೆಯ ಮನೆಯಲ್ಲಿ ಇಳಿದುಕೊಂಡಿದ್ದಾನಂತೆ. ಅದುಸರಿ, ರಮಾಬಾಯಿ! ನಾನು ಆ ಹುಡುಗನನ್ನು ಚೆನ್ನಾ ಗಿ ನೋ ಡಿದೆ. ಎಷ್ಟು ನೋಡಿದರೂ ತೃಪ್ತಿಯಾಗಲಿಲ್ಲ. ಕಮಲೆಯನ್ನೂ ನೋ ಡಿದೆ. ಅವನಿಗೂ ಅವಳಿಗೂ ಸಾಮ್ಯವೆ ಇರಲಿಲ್ಲ. ಹಾಗೆಯೆ ಅಲ್ಲಿ ನಿಮ್ಮ ಸುಭದ್ರೆಯನ್ನು ಯಾವ ಒಡವೆವಸ್ತು ಇಲ್ಲವೆ ಕುಳ್ಳಿರಿಸಿದ್ದರೂ ಎಷ್ಟೊ ಜೆನ್ನಾಗಿರುತ್ತಿತ್ತು ಎಂದಂದುಕೊಂಡೆ. ನೀವು ಏನೇ ಹೇಳಿ. ಆ ಹುಡುಗನಿಗೆ ಸುಭದ್ರೆಯನ್ನು ಬಿಟ್ಟರೆ ಸರಿಯಾದ ಕನ್ನೆಯೇ ಇಲ್ಲ“,
ರಮಾಬಾಯಿ-ಹೌದ್ರಮ್ಮಾ ! ನೀವು ಹೇಳಿದುದೆಲ್ಲಾ ಸರಿಯೆ. ನಮ್ಮಂತಹ ಬಡವರನ್ನು ಅವರು ಕಣ್ಗೆತ್ತಿ ನೋಡುವರೆ ? ನೀವೇಹೇಳಿ.
ನಾಗೂಬಾಯಿ– ಅದೇನೋ ನಿಜ. ಹಲ್ಲಿದ್ದರೆ ಕಡಲೆಯಿಲ್ಲ, ಕಡಲೆಯಿದ್ದರೆ ಹಲ್ಲಿಲ್ಲ, ಎಂಬುವ ಗಾಧೆಗೆ ಸರಿಯಾ ಗಿದೆ, ಅದು ಹಾಗಿರಲಿ, ನಾನೊಂದು ವರ್ತಮಾನ ವನ್ನು ಕೇಳಿದೆನಲ್ಲಾ?
ರಮಾ___ಏನದು ?
ನಾಗು-ಸುಭದ್ರೆಗೆ ಮದುವೆಯೆಂದು ಕೇಳಿದೆ. ಯಾರಿಗೆ ಕೊಡುತ್ತೀರಿ ?
ರಮಾ– ಆದಕಾಲಕ್ಕೆ ಹೇಳುತ್ತೇನಮ್ಮ . ಪ್ರತಿವರ್ಷವೂ ಪ್ರಯತ್ನ ಮಾಡುವುದು, ನಿಂತುಹೋಗುವುದು, ಹೀ ಗೆಯೆ ಆಗುತ್ತಿದೆ.
ನಾಗು–(ತಾನು ಪ್ರತ್ನೆ ಗೆ ಉತ್ತರ ಬರದಿರಲು ) ಆದಕ್ಕಲ್ಲವಮ್ಮ , ನಿನ್ನೆ ಒಬ್ಬ ಮುದುಕನು ನಿಮ್ಮ ಮನೆ ಯನ್ನು ಹುಡುಕಿಕೊಂಡು ಬಂದಿದ್ದನು. ಅವನ ಪಟಾಟೋಪವನ್ನು ನೋಡಿ ಭಯವುಂಟಾಗಿದ್ದಿತು.
ರಮಾ.__ಸರಿ! ಸರಿ! . ಮುದುಕರೆ? . ಯಾರಂದರು? ಅವರಿ ಗಿನ್ನೂ ನಲವತ್ತೊಂಬತ್ತು ವರ್ಷ ತುಂಬಿ ಐವತ್ತನೆಯ ವರ್ಷ ನಡೆಯುತ್ತಿದೆ.
ನಾಗು– ಓಹೊ ! ಹಾಗಾದರೆ ನನ್ನ ಊಹೆಯು ಸರಿಯಾ ಯಿತು. ರಮಾಬಾಯಿ ! ಆ ಮುದಿಗೃದ್ಧ್ರನಿಗೆ ಕೊಡುವುದಕ್ಕಿಂತ ಹುಡುಗಿಯನ್ನು ಮಡುವಿನಲ್ಲಾ ದರೂ ಹಾಕಿಬಿಡಬಾರದೆ?
ರಮಾ -ಇದೇನ್ರಮ್ಮ ! ಹೀಗೆಹೇಳುತ್ತೀರಿ? ನಮ್ಮ ಮನೆಯ ಸುದ್ದಿಯನ್ನು ಕಟ್ಟಿಕೊಂಡು ನಿಮಗೇನು? ಸುಮ್ಮನಿರಿ.
ನಾಗು-(ಗಮನಕೊಡದೆ) ನಾನು ನಿಮಗೆ ಒಳ್ಳೇದಕ್ಕೋ ಸ್ಕರವೆ ಹೇಳುವುದು. ದಾರಿಯಲ್ಲಿ ಹೋಗುವ ಯಾವ ನಾದರೂ ಬ್ರಹ್ಮಚಾರಿಯನ್ನು ಕರೆದು ಕನ್ಯಾದಾನ ಮಾಡಿ. ನಿಮಗೆ ಪುಣ್ಯವುಂಟು. ಅನ್ಯಾಯವಾಗಿ ಆ ಹುಡುಗಿಯ ತಲೆಯಮೇಲೆ ಕಲ್ಲು ಹಾಕಬೇಡಿ. ನನ್ನನ್ನು ನೋಡಿದರೆ ನಿಮಗೆ….
ರಮಾಬಾಯಿಗೆ ರೇಗಿಹೋಯಿತು . “ಸಾಕಮ್ಮ –ನಿಮ್ಮ ಧರ್ಮ, ಏನಾದರೂ. ನುಡಿಯಬೇಡಿ“ ಎಂದು ಬಹು ವೇಗವಾಗಿ ಹೋದಳು.
ನಾಗೂಬಾಯಿಯ ತಂದೆತಾಯಿಗಳು ಆಕೆಯನ್ನು ಹಣದ ಆಶೆಗೋಸ್ಕರ ಒಬ್ಬ ಮುದುಕನಿಗೆ ಕೊಟ್ಟು ಮದುವೆಮಾಡಿದ್ದರು . ಮದುವೆಯಾದ ಮೂರುವರ್ಷಗಳೊಳಗೆ ಆಕೆ ವಿತಂತುವಾಗಿ ತಿನ್ನು ವುದಕ್ಕೂ ಗತಿಯಿಲ್ಲದೆ ತಂದೆಯ ಮನೆಯಲ್ಲಿ ಸೇರಿಕೊಂಡಿದ್ದಳು. ಆದುದರಿಂದಲೇ ಆಕೆ ತನ್ನ ಸಾಮತಿಯನ್ನು ಹೇಳುವುದಕ್ಕೆ ಪ್ರಾರಂ ಭಸಿದೊಡನೆಯೆ ರಮಾಬಾಯಿಗೆ ಶಿಟ್ಟುಬಂದುದು.
ರಮಾಬಾಯ್ದಿ ಹೋಗುವುದನ್ನು. ನೋಡುತ್ತಾ ನಾಗೂ ಬಾಯಿ ತನ್ನೊಳಗೆ ತಾನು, “ಕೆಟ್ಟ ಮೇಲೆ ಬುದ್ಧಿ ಬರಬೇಕಾದುದು ಲೋಕಧರ್ಮ. ನೀವೇನು ಮಾಡೀರಿ? ` ಎಂದಂದುಕೊಂಡು ಮನೆಗೆ ಹೊರಟುಹೋದಳು.
*****
ಮುಂದುವರೆಯುವುದು