ಹೊಕ್ಕೆ ನಾನು ಅಚಲಪ್ರಸನ್ನ ಪ್ರಾಸಾದಸೌಧ ಒಂದು.
ಸ್ಪಟಿಕಮುಕುರ ಪ್ರತಿಬಿಂಬ ಎಂಬ ತೆರ ಕಂಡೆ ದಿನ್ಯ ಅಂದು.
ನಾಗಮೋಡಿಯಲಿ ಏರುತಿತ್ತು ಏನೋ ಪುರಾಣಶಕ್ತಿ,
ಯುಗದಜುಗದ ತಿರುಪಣಿಯ ದಾರಿಯನು ಸಾವಕಾಶ ಹತ್ತಿ.
ಜನ್ಮಮರಣದಜ್ಞಾನಬಂಧ ಬೆಳಕಾಗಿ ಬಿಡಿಸಿಕೊಂಡು
ಮುಕ್ತಮನವು ಈಸಾಡುತಿತ್ತು ಹಿರಿ ಬೆಳಕುಕಡಲ ಕಂಡು.
ಕ್ಲಿಷ್ಟ ಕೃಷ್ಣಗತಿ ತೊರೆದು ಹೊರಟಿತ್ತು ಪ್ರಾಣಜೀವರೀತಿ.
ನಿಶಾ-ಗರ್ಭವನು ಬೆಳಗಿಸಿತ್ತು ನಾ ಕಂಡೆ ಜಡ-ಜ್ಯೋತಿ.
ಜೀವನನುಭವಿಸುತಿತ್ತು ಆನಂತ್ಯದೊಂದು ಅಚ್ಚುಕಟ್ಟು
ಭಕ್ತಿಹೃದಯ ಪಡೆದಿತ್ತು ಭಗದದಾನಂದ ಹೊತ್ತ ಬಿಟ್ಟು.
*****