ಬರಬೇಕು ದೇವ ಬರಬೇಕು
ಎನ್ನ ಧ್ಯಾನದಲಿ ಮೊಗ ತೋರಬೇಕು
ನಿನ್ನ ತೇಜೋ ರಾಶಿಯ ಅಂದಕ್ಕೆ
ನನ್ನನ್ನು ನಾನು ನಿತ್ಯ ಮರೆಯಬೇಕು
ಕ್ಷಣಿಕ ದೇಹ ಮೋಹಕ್ಕೆ ನಾನೆಂದೂ
ಹಪ ಹಪಿಸಿ ಇಲ್ಲಿ ಬಾಳಿರ ಬಾರದು
ನನ್ನದೆಲ್ಲವೂ ಅವನಿಗೆ ಧಾರೆ ಎರೆದಾಗ
ಆನಂದ ವಿರಬೇಕು ಸಂಕಟ ಪಡಬಾರದು
ದೈವತ್ವವನ್ನೆ ನಾವು ಧ್ಯಾನಿಸಿದ ಮೇಲೆ
ತುಚ್ಛ ದೇಹ ಭಾವ ಮರೆಯಬೇಕು
ಇನ್ನೊಂದು ಕ್ಷಣಕ್ಕೆ ಪರಿವರ್ತನೆಗೊಂಡು
ಲೌಕಿಕ ಭಾವಗಳಿಗೆ ದೂಡಬೇಕು
ಕರ್‍ಮಗಳು ಮಾಡುವಾಗ ಲಕ್ಷವಿರಬೇಕು
ಪವಿತ್ಯದ ಮನ ಕೂಡಿರಬೇಕು
ಎಲ್ಲವೂ ಕಲ್ಯಾಣಮಾಯವೆಂದೆನಿಸಿ
ಮಾಣಿಕ್ಯ ವಿಠಲನಾಗಿ ಮೆರೆಬೇಕು
*****