ಸಂಸಾರ ಪರಮಾತ್ಮ

ನಿನಗೇಕೆ ಅಹಂಕಾರ ಮಮಕಾರಗಳು
ಅವು ನಿನ್ನ ಸ್ವಾರ್‍ಥದೆಡೆ ಎಳೆದೊಯ್ಯುವವು
ಆಸೆ ದುರಾಸೆಗಳ ಹುಟ್ಟಿಸಿ ನಿನಗೆ
ಪ್ರಪಾತಕ್ಕೆ ನಿನ್ನನ್ನು ತಳ್ಳಿ ಬಿಡುವವು

ಸಂಸಾರಿಗಳೂ ಮನದಲ್ಲಿ ಸನ್ಮಾಸಿರಬಹುದು
ಅದಕ್ಕಾಗಿ ಎಲ್ಲವೂ ವರ್‍ಜಿಸಬೇಕು
ಮನದಲ್ಲಿ ಲೋಭವಿಟ್ಟು ಧ್ಯಾನಿಸಿದರೆ
ಹದ್ದು ಗಗನಕ್ಕೆ ಹಾರಿ ಬುವಿಯತ್ತ ಕಾಕು ದೃಷ್ಟಿ

ಪರಮಾತ್ಮನ ವಿಶ್ವ ಅರಿಯವದೆಂದರೆ
ಉಪ್ಪಿನ ಬೊಂಬೆ ನೀರಾಳ ಅಳೆದಂತೆ
ಸಾಧನೆ ಮಾಡಿದ ಮೇಲೆ ಸಂಸಾರದಲ್ಲಿರಬೇಕು
ಪಂಕದಲಿ ನಲಿದಾಡುವ ಕಮಲದಂತೆ

ತೂಗುವ ತಕ್ಕಡಿಗೆ ಮುಳ್ಳುಗಳೆರಡು
ಕೆಳಗಿನ ಮುಳ್ಳು ಮನಸು ಮೇಲಿನದು ದೇವ
ಪಾಪ ಪುಣ್ಯಗಳೆರಡು ದುರಸರಿದಾಗ
ಮಾಣಿಕ್ಯ ವಿಠಲನಲಿ ಒಂದಾದಂತೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೫೭
Next post ಬನ್ನಿ ಬನ್ನಿ ಮಕ್ಕಳೆ

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…