ನರಜನ್ಮ ದೇವರು ಕೊಟ್ಟ ಸದವಕಾಶ
ಬಹಳ ಎಚ್ಚರದಿಂದ ಇದನ್ನು ಅನುಸರಿಸು
ಬೆಳ್ಳಗಿದ್ದುದೆಲ್ಲ ಹಾಲಲ್ಲ ಮನುಜ
ನಿತ್ಯ ನಿನ್ನ ಹೋರಾಟದಲ್ಲಿ ಪಾಪ ಬೀಜ
ಮನಸ್ಸು ಒಂದು ಕ್ಷೀರಾಮೃತ ಹಾಗೆ
ಅದರಲ್ಲಿ ಶರೀರವೆಂಬ ಮಧು ಬೆರೆಸು
ಪರಮಾತ್ಮನೈವೇದ್ಯಕ್ಕೆ ಅರ್ಪಿಸಬೇಕು
ನಿನ್ನ ನೀನು ಸಮರ್‍ಪಿಸಿಕೊಳ್ಳಬೇಕು
ಶರೀರವದು ಗಾಜಿನ ಮನೆಯ ಹಾಗೆ
ಅದರಲ್ಲಿ ಆತ್ಮ ವಜ್ರಹೊಳಪಿನ ಹಾಗೆ
ರಕ್ಷಣಿ ಗೈಯುವುದು ತನು ಸಹಜ ಧರ್‍ಮ
ಅದರ ಹೊಳಪನ್ನು ಕಾಯ್ದುದೇ ಜೀವಧರ್‍ಮ
ಬೇಡ ನಿನ್ನ ಶರೀರ ಢಂಭಭಿಮಾನ
ಎಷ್ಟೊತ್ತಿನ ವರೆಗೆ ಈ ದೇಹಮಾನ
ನೀನು ಶರೀರವಲ್ಲ ಮನಸ್ಸಲ್ಲ ಭಾಮನಲ್ಲ
ನೀನು ಮಾಣಿಕ್ಯ ವಿಠಲನ ದಾಸನು
*****