ವಾಲ್ಮೀಕಿ ಕುಮಾರವ್ಯಾಸ
ಯಾರೂ ಒದಗಿಸಲಿಲ್ಲ
ಹೆಣ್ಣಿಗೆ ನ್ಯಾಯ.
ಅದಕ್ಕೇ ತಪ್ಪಲಿಲ್ಲ
ಅವಳಿಗೆ ಸತತ ಅನ್ಯಾಯ.
ಪತಿಯೇ ಪರದೈವವೆಂದು
ಸೀತೆಯ ಶೋಷಿಸಿದರು;
ಸಹೋದರ ಭಕ್ತಿಯೆಂದು
ಊರ್ಮಿಳೆಯ ಶೋಷಿಸಿದರು;
ಮಲತಾಯಿಯೆಂದು
ಕೈಕೇಯಿಯ ಶೋಷಿಸಿದರು;
ಸೇಡು ಎಂದು
ಶೂರ್ಪನಖಿಯ ಶೋಷಿಸಿದರು;
ಸಂತಾನ ಲಕ್ಷ್ಮಿಯಾಗಿಸಲು
ಅಂಬೆ, ಅಂಬಾಲಿಕೆಯರ ಶೋಷಿಸಿದರು;
ಋಷಿ ಶಾಪವೆಂದು
ಕುಂತಿ ಮಾದ್ರಿಯರ ಶೋಷಿಸಿದರು;
ತಾಯಿ ಮಾತು ವೇದವಾಕ್ಯವೆಂದು
ದ್ರೌಪದಿಯ ಶೋಷಿದರು.
ರಾಮಾಯಣ ಮಹಾಭಾರತ ತುಂಬ
ಶೋಷಿತ ಸ್ತ್ರೀಯರೇ
ಅವರಿಗೆ ಕೊಟ್ಟರು
ಪತಿವ್ರತೆಯರ ಪಟ್ಟ
ಯಾರಿಗಾದರೂ ಬೇಕೇ
ಈ ಚಿನ್ನದ ಪಂಜರ?
*****