ಕಿಟ್ಟು-ಪುಟ್ಟು ಗೆಳೆಯರು
ಒಂದು ಬೆಳಗು ಹೊರಟರು
ಟಾಮಿ ಮೋತಿ, ಅವರನ್ನು
ನಡೆದವು ಬಿಡದೆ ಬೆನ್ನನ್ನು
ಇಬ್ಬರೂ ಬೆಟ್ಟವ ಏರಿದರು
ಕವಳಿ ಕಾರಿಯ ನೋಡಿದರು
ಹಿಂದಿನ ರಾತ್ರಿ ಮಳೆ ಬಂದಿತ್ತು
ಗಿಡಗಳ ತುಂಬ ಹಣ್ಣಾಗಿತ್ತು
ಗೆಳೆಯರು ಹಣ್ಣು ಬಿಡಿಸುತ್ತ
ಬಾಯಿಗೆ ಎಸೆದುಕೊಳ್ಳುತ್ತ
ಆಹಾ ಆಹಾ ಚಪ್ಪರಿಸುತ್ತ
ಮೈಮರೆತಿದ್ದರು ಮೆಲ್ಲುತ್ತ
ನಾಯಿ ಮಾಡಿದ ಗಲಾಟೆಗೆ
ಮೆಟ್ಟಿ ಬಿದ್ದರು ಹೆದರಿಕೆಗೆ
ಮೋತಿ ಟಾಮಿಯ ನೋಡಿದರು
ತೋಳವ ನೋಡಿ ಬೆದರಿದರು
ತೋಳವು ನಾಯಿಗೆ ಹೆದರಿತ್ತು
ಬಾಲವ ಮುದುರಿ ಓಡಿತ್ತು
ತಮ್ಮನು ತಿನ್ನಲು ಬಂದಿತ್ತು
ತಿಳಿದರು ದೂರಾಯಿತು ಆಪತ್ತು
ಓಡಿಸಿ ಬಂದ ನಾಯಿಗಳನ್ನು
ಅಪ್ಪುತ ಕೊಟ್ಟರು ಹಣ್ಣನ್ನು
ತಿನ್ನುತ ಬಾಲವನಾಡಿಸುತ
ನಡೆದವು ಗೌರವ ತೋರಿಸುತ
*****