ಭವ್ಯ ಭಾರತ ಇನ್ನು ಓಬಿರಾಯನ ಕಾಲದಲ್ಲಿದೆಯೆನಿಸುವುದು. ಇನ್ನೂ ಹಳ್ಳಿಗಳಲ್ಲಿ ಕುಗ್ರಾಮಗಳಲ್ಲಿ ಜಾತಿ, ಮತ, ಕುಲ, ಭೇದಗಳ ಜೊತೆಗೆ ಕಂದಾಚಾರ ಮೂಢನಂಬಿಕೆಗಳ ಆಚರಣೆಗಳನ್ನು ಗಮನಿಸಿದರೆ ಇನ್ನೂ ತೀರಾ ಹಿಂದುಳಿದ ದೇಶವೆಂದು ಅನಿಸುವುದು.
ದಿನಾಂಕ ೨೭-೭-೨೦೧೫ರಲ್ಲಿ ಕಲಬುರ್ಗಿ ತಾಲ್ಲೂಕಿನ ಸೋಮನಾಥ ಹಳ್ಳಿಯಲ್ಲಿ ನಿಧಿಯ ದುರಾಸೆಗಾಗಿ ಐದು ವರ್ಷದ ಜ್ಯೋತಿ ಎಂಬ ಬಾಲಕಿಯನ್ನು ಬಲಿಕೊಡಲು ಯತ್ನಿಸಿದ ಆತಂಕಕಾರಿ ಭಯಂಕರ ಘಟನೆಯೊಂದು ಜರುಗಿದೆ. ಇಡೀ ಜಿಲ್ಲೆಯೇನು ಕನ್ನಡ ನಾಡೇ ತಲ್ಲಣಗೊಂಡಿದೆ.
ಸೋಮನಾಥ ಹಳ್ಳಿಯಲ್ಲಿ ಮಹಾ ಮಾಟಗಾರ ಬಸಣ್ಣ ಸಾಯಿಬಣ್ಣ ಡೆಂಬ್ರಿಯು ವಯಸ್ಸು ೭೨ ಆಗಿದ್ದು ಈತ ಈ ಹಿಂದೆ ದಿನಾಂಕ ೨೬-೧೧-೨೦೧೪ರಂದು ಫರಹತಾಬಾದ್ ಠಾಣೆಯ ವ್ಯಾಪ್ತಿಯಲ್ಲಿ ಈಗಾಗಲೇ ರೇಣುಕಾ ಎಂಬ ಪುಟ್ಟ ಬಾಲಕಿಯನ್ನು ಇದೇ ಬಸಣ್ಣ ಸಾಯಿಬಣ್ಣ ಡೆಂಗ್ರಿಯು ನಿಧಿಯ ದುರಾಸೆಗಾಗಿ ಬಲಿ ಕೊಟ್ಟಿದ್ದರಿಂದ ಈತನ ವಿರುದ್ಧ ಕೇವಲ ಕೊಲೆಯ ಕೇಸು ದಾಖಲಾಗಿತ್ತು ! ಈಗ ಕೊಲೆಯ ಯತ್ನದ ಪ್ರಕರಣ ದಾಖಲಾಗಿದೆ.
ಕೊಲೆ ಮಾಡಿದವನ್ನು ಬಿಟ್ಟಿದ್ದರಿಂದಲ್ಲವೇ ಇನ್ನೊಂದು ಮತ್ತೊಂದು ಮಗದೊಂದು ಕೊಲೆಗೆ ಯತ್ನ ನಡೆಸಿರುವುದೆಂದು ಇಡೀ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿರುವರು.
ದಿನಾಂಕ ೨೭-೦೭-೨೦೧೫ರಂದು ಮಂಗಳವಾರದ ದಿನದಂದು ಜ್ಯೋತಿ ಎಂಬ ಬಾಲಕಿಗೆ “ನನ್ನ ಮನೆಯ ಬಳಿ ನಿಧಿ ಇದೆ. ನಿನ್ನನ್ನು ಬಲಿ ಕೊಟ್ಟರೆ ನನಗೆ ನಿಧಿಯು ಸಿಗುವುದು. ನಿನಗೆ ಸ್ವರ್ಗ ಲಭಿಸುವುದು” ಎಂದು ಏನೇನೋ ಆಮಿಷವೊಡ್ಡಿ ಬಾಲಕಿಯನ್ನು ಉಪಾಯವಾಗಿ ತನ್ನ ಮನೆಗೆ ಈ ಮಾಟಗಾರ ಕರೆದುಕೊಂಡು ಹೋಗಿದ್ದ! ಅಂದು ಮಾಟದ ವಿಧಿ ವಿಧಾನ ಯಂತ್ರ, ಮಂತ್ರ, ತಂತ್ರ ಎಲ್ಲಾ ವಿದ್ಯೆ ಪೂರೈಸಿ ಇನ್ನೇನು ಬಲಿ ನೀಡಬೇಕು.
ಅಷ್ಟರಲ್ಲಿ- ಈ ಸುದ್ದಿ ಮಹಿಳೆಯೊಬ್ಬರಿಗೆ ಈ ವಿಷಯ ತಿಳಿದಿದೆ ಆಕೆ ಜನರಿಗೆ ತಿಳಿಸಿದ್ದಾಳೆ ಅವರೆಲ್ಲಾ ಆತನ ಮನೆಗೆ ನುಗ್ಗಿ ದಾಂಧಲೆ ನಡೆಸಿದಾಗ ಬಾಲಕಿ ಅವನಿಂದ ತಪ್ಪಿಸಿಕೊಂಡಳು. ಜನರು ಕುಪಿತಗೊಂಡು ಅವನನ್ನು ಹಿಗ್ಗಾಮುಗ್ಗಾ ಬಡಿದಿದ್ದಾರೆ! ಪೊಲೀಸ್‌ನವರಿಗೆ ಬಾಲಕಿಯ ತಂದೆ ದೇವೇಂದ್ರ ಅವರು ದೂರು ಸಲ್ಲಿಸಿರುವರು ಮಾಟಗಾರನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈಗ ಈ ಹಳ್ಳಿಯಲ್ಲಿ ಏನು? ಸುತ್ತ ೧೮ ಹಳ್ಳಿಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ! ಚಿಕ್ಕಚಿಕ್ಕ ಹೆಣ್ಣು ಮಕ್ಕಳನ್ನು ಬಲಿಕೊಡುವರೆಂದು… ಇದರ ನಿವಾರಣೆ ಹೆಣ್ಣುಮಕ್ಕಳ ರಕ್ಷಣೆ ಎಲ್ಲರ ಕೆಲಸವಲ್ಲವೇ??
*****