ಜರ್ಮನಿಯ ಕೃಷಿ ವಿಜ್ಞಾನಿಗಳು ಕೃಷಿಲೋಕಕ್ಕೆ ಏನಾದರೊಂದು ಕೊಡುಗೆ ಕೊಡುತ್ತಲೇ ಇರುತ್ತಾರೆ. ಟೊಮ್ಯಾಟೋ ಗಿಡದ ಒಂದು ಹೊಸ ತಳಿಯನ್ನೇ ಕಂಡುಹಿಡಿದ ವಿಜ್ಞಾನಿಗಳು ಫಲವತ್ತಾದ ಭೂಮಿಯಲ್ಲಿ ಪ್ರಯೋಗಿಸಿದರು. ಆಗ ಈ ಗಿಡದಲ್ಲಿ ಕಲ್ಲಂಗಡಿ ಗಾತ್ರದ ಅಂದರೆ ಸು. ೨ ಕೆ.ಜಿ. ಗಾತ್ರದ ಒಂದೊಂದು ಟೊಮ್ಯಾಟೋಗಳು ಬಿಟ್ಟವು. ಒಂದೇ ಒಂದು ಟೊಮ್ಯಾಟೋದಲ್ಲಿ ೬ ಜನರ ಒಂದು ಕುಟುಂಬಕ್ಕೆ ಸಾಂಬರ್ ಮಾಡಬಹುದು. ಅಂದರೆ ಅಷ್ಟೊಂದು ಪಿಷ್ಠ ಪದಾರ್ಥ ಅದರಲ್ಲಿರುತ್ತದೆ. ಈ ಟೊಮ್ಯಾಟೋದಲ್ಲಿ ಬಹಳಷ್ಟು ನೀರು ಇರುವುದರಿಂದ ಇದು ಚಿಪ್ಸ್ ಮಾಡುವುದಕ್ಕೆ ಸೂಕ್ತವಾಗಲಾರದೆಂದು ವಿಜ್ಞಾನಿಗಳು ಅಭಿಪ್ರಾಯ.
ಈ ಜರ್ಮನಿಯ ವಿಜ್ಞಾನಿಗಳಿಂದ ಈ ತಳಿಯ ಮರ್ಮವನ್ನು ಅರಿತು ನೀವೂ ಕೂಡಾ ನಿಮ್ಮತೋಟದಲ್ಲಿ ೨ ಕೆ. ಜಿ. ತೂಕದ ಟೊಮ್ಯಾಟೋಗಳನ್ನು ಬೆಳೆಯಬಾರದೇಕೆ?
*****