ವಿಶ್ವಾವತಾರ

ಒಂದು ಬಿನ್ನಾಣವಿಹುದು ಸುಸಮಾಧಿ ಸುಪ್ತ ಸೂರ್‍ಯನಂತೆ.
ಹೃದಯಗುಹೆಯಲ್ಲಿ ಹಿಗ್ಗು ಹೊತ್ತಿಹುದು ಅನ್ನಿಸತ್ವದಂತೆ.
ಹೃದಯ ಹೃದಯ ಮಿಲಿತೈಕ್ಯದಂಥದಿದೆ ಒಂದೆ ಹೃದಯಲೋಕ.
ಸುಪ್ರಮೋದ ಪರ್‍ವತದ ಅಗ್ರಕಿದೆ ಭವ್ಯಮೌನ ಮೂಕ.

ಶಾಂತಿ ತೊಡೆಯ ತೊಟ್ಟಿಲದಲಾಡಿಸುವಳಲ್ಲಿ ದೈವಶಿಶುವ
ನೆಲದ ದುಗುಡ ಮುದ್ದಿಟ್ಟು ಕಳೆಯುವಳು ಕರುಣೆ ತನ್ನ ಹ
ಬಹು ರಹಸ್ಯಗಳ ಹೊಟ್ಟೆಯಲ್ಲಿ ಮನೆ ಮಾಡಿ ಇಹುದು ಸಾಕ್ಷಿ
ದೇಹ ಧರಿಸಿ ಬಂದಿರುವ ದೇವ ಏಕಾತ್ಮ ಯಕ್ಷ ಯಕ್ಷಿ.

ತೆರೆಯ ಮೇಲೆ ಉರಿ ಶಬ್ದಶಿಖೆಯು ಹಿಂದಿಹುದು ಹೃದಯಧಾವ
ಚಿತ್ರರೇಖೆಯಲಿ ಲೇಖಿಸಿಹುದು ಅದ್ಭುತ ರಹಸ್ಯನಾನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಗಿದ್ದರೆ…!
Next post ವಾಗ್ದೇವಿ – ೩೪

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…