Home / ಕವನ / ಕವಿತೆ / ಜೋಗುಳ

ಜೋಗುಳ

ಚಂದ್ರ ಬಿಂಬದ ಮೇಲೆ ಕಂದು ಕಾಣುತಲಿಹುದು,
ಕಂದ ಮುದ್ದನ ಅಚ್ಚ ನಿಡು ಹಣೆಗೆ ಜೋ!
ಕಂದ ಮುದ್ದನ ಅಚ್ಚ ನಿಡು ಹಣೆಗೆ ತಾಯ್ತರಳೆ
ಚಂದದಿಂ ಬೊಟ್ಟಿಟ್ಟ ಕತ್ತುರಿಗೆ, ಜೋ!

ಹೂವು ಹೆಚ್ಚಿನದಾಯ್ತು, ಮಾವು ಮೆಚ್ಚಿನದಾಯ್ತು,
ಬೇವು ಬೆಲ್ಲದ ಸವಿಗೆ ಸರಿಯಾಯ್ತು, ಜೋ!
ಬೇವು ಬೆಲ್ಲದ ಸವಿಯ ಪಡೆಯಿತುದಿಸಲು, ಮುದ್ದು
ಆ ಒಂದು ಗೊಡ್ಡು ಹೊಸ ಹಸುವಾಯ್ತು, ಜೋ!

ಜೊಲ್ಲ ಸೂಸುವ ಬಾಯನಲ್ಲಲ್ಲಿ ತಗಲಿಸುವ-
ನಲ್ಲಲ್ಲಿ ಅಮೃತಾಂಕ ಮೂಡಿತ್ತು, ಜೋ!
ಅಲ್ಲಲ್ಲಿ ಅಮೃತ ಮುದ್ರೆಯು ಮೂಡಿ, ಮೈಯೆಲ್ಲ
ಜಲ್ಲನೇ ನವಿರೆದ್ದು ನಿಂತಿತ್ತು, ಜೋ!

ಬಾಲನಾ ಲೀಲೆಯನು ಹೇಳಲಿನ್ನೇನು ನಾ
ಲೋಲ ಹಿಡಿ ಹಿಡಿದೆಳೆವ ಮುಂಗುರುಳ, ಜೋ!
ಲೋಲ ಹಿಡಿಹಿಡಿದಳೆವ ಮುಂಗುರುಳ ಬಾಯೊಳಗೆ
ಲೀಲೆಯಿಂದಿಡುವ ಕಾಲ್ತುದಿ ಬೆರಳ, ಜೋ!

ನಿದ್ದೆ ಇಲ್ಲದೆ ಕಂದನೆದ್ದೆದ್ದು ಕುಳಿತಿಹನು,
ಗದ್ದರಿಸಿ ಗರ್‍ಜಿಪನು ಮನೆತುಂಬ, ಜೋ!
ಗದ್ದರಿಸಿ ಗರ್‍ಜಿಪನು ಮನೆತುಂಬ, ಕುಲಕೋಟಿ
ಉದ್ಧರಿಸುವನು ತನ್ನುದಯದಿಂದ, ಜೋ!

ಪುಂಡನಾಟವ ನೋಡಿ ನಿಂದೆ ನಾ ಮರುಳಾಗಿ,
ಗಂಡನೂಟವು ಹೋಯ್ತು ಹಾಳಾಗಿ, ಜೋ!
ಗಂಡನೂಟವು ಹೋಯ್ತು ಹಾಳಾಗಿ, ಸಂಸಾರ
ಕಂಡು ಬಂತೀಗ ಬಲು ಸವಿಯಾಗಿ, ಜೋ!

ನಗುವುದೇತಕೆ ಕಂದ? ನಗಲು ಕಾಣುವೆ ಚಂದ,
ಬಗಡ! ಮಾತಾಡು ಹೃದಯಾನಂದ, ಜೋ!
ಬಗಡ ಮಾತಾಡಲಾ ಮುಗಿಯದೈ, ನಿನ್ನನ್ನು
ಅಗಿದವರು ಯಾರು ನುಡಿ, ಸುಖ ಕಂದ, ಜೋ!
*****
(ಜೋಗುಳ ಹಾಡು)

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...