ಬನ್ನಿ, ಮಕ್ಕಳೆ

ಬನ್ನಿ ಬನ್ನಿ | ಬನ್ನಿ ಬನ್ನಿ | ಬನ್ನಿ ಮಕ್ಕಳೇ |
ಕೂಡಿ ಆಡಿ ಕೂಡಿ ನಲಿವ | ಬನ್ನಿ ಮಕ್ಕಳೇ||

ವಿದ್ಯೆ ಬುದ್ದಿ | ಎಲ್ಲ ಕಲಿತು | ಮುಂದೆ ನಡೆಯುವಾ |
ರೀತಿ ನೀತಿ | ನಡತೆ ಕಲಿತು | ಬಾಳ ನಡೆಸುವಾ ||

ಕುಂಟ ಕುರುಡ | ಮೂಗ ಕಿವುಡ | ಬನ್ನಿ ಎನ್ನುವಾ |
ನಾವು ನೀವು | ಒಂದೇ ಎಂದು | ಧೈರ್ಯ ತುಂಬುವಾ ||

ದೀನ ದಲಿತ | ಬಡ ಜನರ | ಸೇವೆ ಮಾಡುವಾ |
ಸ್ನೇಹ ಹಸ್ತ | ನೀಡಿ ಅವರ | ನೋವ ಮರೆಸುವಾ ||

ಮರ ಬೆಳೆಸಿ | ಜಲ ಉಳಿಸಿ | ಕಾಡು ಬೆಳೆಸುವಾ |
ನೆಲ ಕೊಟ್ಟ | ಸಿರಿ ಬಳಸಿ | ಸ್ವರ್ಗ ಕಾಣುವಾ ||

ಜಾತಿ ಭೇಧ | ಎಲ್ಲ ಮರೆತು | ಕೂಡಿ ದುಡಿಯುವಾ |
ಅಂಧಕಾರ | ದೂರ ಮಾಡಿ | ನಾಡ ಕಟ್ಟುವಾ ||
*****
೧೩-೦೬-೧೯೯೨

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನ ಮಂಥನ ಸಿರಿ – ೨
Next post ಅಹಲ್ಯೆ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…