ದೀಪವಾರಿದೆ ಹಣತೆ ಉಳಿದಿದೆ
ನಿನಗೆ ಕೋರುವೆ ಮಂಗಳ
ಬೆಟ್ಟ ಹತ್ತಿದೆ ಕಣಿವೆ ದಾಟಿದೆ
ಕಂಡೆ ಕಾಣದ ಹೊಸ ಜಗ
ಗಾಳಿಯಲ್ಲಿ ನೂರು ರಾಗ
ಎದೆಯೊಳೆಲ್ಲಾ ಝಗಮಗ
ಅದಕೆ ನಿನಗೆ ವಂದನೆ
ಬೇರೆಯಿಲ್ಲ ಚಿಂತನೆ
ಬೆಳದಿಂಗಳ ಹಾಲ ಕುಡಿದೆ
ಚಂದ್ರನ ಮೇಲೆ ಆಡಿದೆ
ತೇಲುತ ಬಂದ ಮೋಡವ ಹಿಡಿದೆ
ತಾರೆಗಳೊಡನೆ ಕುಣಿಕುಣಿದೆ
ಅದಕೆ ನಿನಗೆ ವಂದನೆ
ಬೇರೆಯಿಲ್ಲ ಚಿಂತನೆ
ನಡೆದಾಡಿದ ನೆಲ ಹಾಡಿದೆ ಶೋಕ
ಕುಣಿದಾಡಿದ ಜಲ ಸ್ತಬ್ಧ
ಗಾಳಿಯುಸಿರಿದ ನೂರು ಕವಿತೆ
ಎಲ್ಲವೂ ಧಗ್ಧ, ನಿಶ್ಶಬ್ದ
ಆದರೂ ನಿನಗೆ ವಂದನೆ
ಬೇರೆಯಿಲ್ಲ ಚಿಂತನೆ
*****