ಏಕೆ ಹುಟ್ಟಿಸಿದೆ ನನ್ನನು?
ಎಂದು ಪ್ರಶ್ನೆಯ ಕೇಳದೆ
ಇಲ್ಲಿ ಹುಟ್ಟಿಸಿ
ನಿನ್ನಯ ಕರ್‍ಮವ ಕಳೆಯೆ
ಅವಕಾಶಕಲ್ಪಿಸಿದಕೆ ಕೃತಜ್ಞನಾಗಿರು||
ಏಕೆ ನನಗೆ ಈ ಸ್ಥಿತಿಯ
ನೀಡಿದೆ ಎನ್ನುವುದಕಿಂತ
ಇದಕಿಂತ ಕೆಳಗಿನ ಪರಿಸ್ಥಿತಿಯ
ಅವಲೋಕಿಸಿ, ಇದೇ ನನಗೆ
ಉತ್ತಮವೆಂದು ಸಂತೋಷಪಡು||
ಕಣ್ಣ ಮುಂದಿರುವುದನು ಸ್ವೀಕರಿಸು
ಹಿಂದಿನದನು, ನಾಳೆ ಕಾಣದಿಹನು ನೆನೆದು
ತಟ್ಟೆಯಲ್ಲಿರುವುದನು ತಿರಸ್ಕರಿಸದಿರು|
ಇಂದು ದುಡಿದು ಪುಣ್ಯಸೇರಿಸಿ ನಾಳೆಯ
ಏಳಿಗೆಯ ಭಾಗ್ಯವ ಗಳಿಸು||
ಅನ್ಯರ ಪುಣ್ಯವ ನೋಡಿ ಕೊರಗದಿರು
ಅವರ ಹಿಂದಿನ ಪುಣ್ಯ, ಶ್ರಮ,
ಧರ್ಮನಿಷ್ಠೆಯ ಅನುಸರಿಸಿ
ತಿಳಿದು ಅವರಂತೆ ನೀನಾಗಲು
ಪ್ರಾಮಾಣಿಕ ಸತ್ಯ ಪ್ರಯತ್ನವ ಮಾಡು||
*****