ಚಿಂತಿಸದಿರು ಮನವೇ

ಚಿಂತಿಸದಿರು ಮನವೇ
ಜನರ ವಿಪರೀತವ ಕಂಡು
ಕುಗ್ಗದಿರು ಜೀವವೆ
ಈ ಜಗತ್ತು ವೇಗದಲಿ
ಬದಲಾಗುವುದಕೆ ನೊಂದು||

ಜಗ ಓಡುತಿಹುದು ನಾಗಾಲೋಟದಲಿ
ಹೊಸ ಹೊಸ ತಂತ್ರಜ್ಞಾನದ ಜೊತೆಯಲಿ|
ಜನರೋಡುತಿರುವರು
ಕಾಲಸಮಯದಿಂದೆ
ಹಣಗಳಿಸುವ ಭರಾಟೆಯಲಿ|
ಮರೀಚಿಕೆಯ ಕಂಡು
ನಿಜವೆಂದುಕೊಂಡು|
ಇರುವುದು ಬಿಟ್ಟು ಇಲ್ಲದುದ
ಬಯಸುತಲಿ, ಮುಂದಿರುವುದ
ಅನುಭವಿಸುವುದಬಿಟ್ಟು||

ಬದಲಾವಣೆ ಬೇಕು, ಆದರದು
ಸಮಾಜ ಸಂಸ್ಕೃತಿಯ
ಪೂರಕವಾಗಿರಲುಬೇಕು|
ನವೀನತೆ ನಾಜೂಕು ಬೇಕು, ಆದರದು
ನಾಟಕೀಯತೆ ಎಂದೆನಿಸಬಾರದು|
ಚೆನ್ನಾಗಿರುವುದ ಮುರಿದು ಹಾಕಿ
ನವೀನ ಮಾಡುವುದಲ್ಲ|
ಶಿಥಿಲವಾದುದ ತೆಗೆದು
ಹೊಸದನು ಮಾಡುವುದು ಅರ್‍ಥ
ಕದವ ಮುರಿದು ಅಗಳಿ ಮಾಡುವುದಲ್ಲ||

ಒಂದೆಡೆ ಜಾದುತರದಲಿ ಬದಲಾವಣೆ
ಇನ್ನೊಂದೆಡೆ ತಿನ್ನಲು ಇರದ ಬವಣೆ|
ಇರುವವರಿಗೇ ಹೆಚ್ಚು ಲಾಭ
ಇಲ್ಲದವರು ನೋಡುತಿಹರು ಬರಿಯ ನಭ|
ಒಂದೆಡೆ ಹಾಹಾಕಾರ ಇನ್ನೊಂದೆಡೆ
ಸ್ವೇಚ್ಚಾಚಾರವ ಕಂಡು ವಿಚಲಿತನಾಗದಿರು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರಗಳು ಮಾತಾಡುತ್ತವೆ
Next post ಕನ್ನಡಿಗರ ಹಾಡು!

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…