ಮರಗಳು ಮಾತಾಡುತ್ತವೆ
ಮನುಷ್ಯರಲ್ಲ
ಎಲೆಗಳು ಅಲೆದಾಡುತ್ತವೆ
ನೆಮ್ಮದಿಯಿಲ್ಲ.
ನಾಲಗೆ ನಂಬದ ನೆಲದಲ್ಲಿ
ತೆನೆಗಳು ತುಂಬಿದ ತಲೆಯಲ್ಲಿ
ಹೂಗಳು ಅರಳದ ಎದೆಯಲ್ಲಿ
ಸತ್ತವು ಮಾತು ಮನುಷ್ಯರಲ್ಲಿ.
ಮರುಕ ಹುಟ್ಟಿತು ಮರಗಳಿಗೆ
ಕೊಂಬೆ ಚಾಚಿದವು ನಂಬಿ ನಕ್ಕವು
ಅರಳಿತು ಮೈ ಹೂವಾಗಿ
ಎದೆ ತುಂಬಿದ ಹಾಡಾಗಿ.
*****