ನಾನು, ನೀನು
ಬಾಳಿನಲ್ಲಿ
ಒಬ್ಬರನ್ನೊಬ್ಬರು
ನಂಬದಿದ್ದರೆ
ಇರುವುದೇನು ಹೊಂದಿಕೆ?
ಹೆಜ್ಜೆ, ಹೆಜ್ಜೆಗೆ
ಅನುಮಾನಿಸುತ್ತ
ನಡೆದರೆ
ಕಾಣ ಬಹುದೇನು ನೆಮ್ಮದಿ?
ತಪ್ಪು, ಒಪ್ಪು ಸಹಜ
ಅನುಸರಿಸಿ ಕೊಂಡು
ಹೋಗದಿದ್ದರೆ
ಆಗುವವೇನು ಊರ್ಜಿತ?
ದಿನ, ದಿನಕೆ ಕಷ್ಟಗಳು
ಏರುತಿರುವಾಗ
ಒಳಗೂ, ಹೊರಗೂ
ಸಮಸ್ಯೆಗಳು ಬೆಳೆದು ನಿಂತರೆ
ಬಾಳು ಮುರಿಯದಿರುವುದೆ?
ಅದಕ್ಕೆಂತಲಲ್ಲವೆ?
ಗಂಡು, ಹೆಣ್ಣು
ಬೇರೆ, ಬೇರೆ ವ್ಯಕ್ತಿಯಾದರೂ
ಉದ್ದೇಶ ಒಂದೇ ಅಂತಲಲ್ಲವೆ
ಸಮಾಗಮಕೆ ಮನಸು ಕೊಡುವುದು
ನಂಬಿಕೆಯ ಸೂತ್ರ ಹರಿದರೆ
ದಾಂಪತ್ಯವೇಕೆ?
ಇಡೀ ಲೋಕದ ಜೀವನವೇ ಮುರಿದು ಬೀಳುವ
ಸಂಭವವೇ ಜಾಸ್ತಿ
*****