ತುಂಬಿ ಬಂದ ಕಡಲಿಗೆ
ಎಲ್ಲಿ ಅಂಕುಶ
ಕಟ್ಟೆಯೊಡೆದ ಭಾವಕೆ
ಇಹುದೆ ಕಲ್ಮಶ? ||
ಕಣ್ಣ ಕಣ್ಣ ಸೆಳೆತ
ಅದಕೆ ಹೃದಯ ಮಿಡಿತ
ತಡೆವರಾರು ಇಲ್ಲಿ?
ಜೀವ ಸಹಜ ತುಡಿತ
ಭಾವ ಸಹಜ ಯಾನ
ಅದಕೆ ಯಾವ ನಿಯಮ?
ಅದರ ದಿಕ್ಕು ಅದಕೆ
ನಮ್ಮ ದಿಕ್ಕು ನಮಗೆ
ತುಟಿಯ ಮೇಲೆ ನವಿಲು
ಕಣ್ಣ ತುಂಬ ಹೊನಲು
ಕೆನ್ನೆಯಲ್ಲಿ ಕವಿತೆ
ಯಾವ ಮಧುರ ಗೀತೆ?
ಹೃದಯ ಹೃದಯ ಮಿಲನ
ಗೌಣ ಜಗದ ಕದನ
ಹತ್ತಿ ಭಾವ ಬಂಡಿ
ಯಾವ ಕಡೆಗೆ ಪಯಣ?
*****