ಪ್ರಗತಿ ಅಥವಾ ದಾಸ್ಯವಿಮೋಚನೆ – ೫ನೆಯ ಖಂಡ – ಪ್ರತಿಕೂಲತೆ

ಪ್ರಗತಿ ಅಥವಾ ದಾಸ್ಯವಿಮೋಚನೆ – ೫ನೆಯ ಖಂಡ – ಪ್ರತಿಕೂಲತೆ

“ಮಹಾರಾಜಾ, ಈ ಘಟಕ್ಕೆ ಬಂದಷ್ಟು ಪ್ರತಿಕೂಲಪ್ರಸಂಗಗಳು ನಿಮಗೆ ಬಂದಿದ್ದರೆ, ಮಹಾರಾಜಾ ನಿಮ್ಮ ಸ್ಥಿತಿಯು ಏನಾಗುತಿತ್ತೋ ಹೇಳಲಾಗದು ಮಹಾರಾಜಾ! ಮಹುರಾಜಾ ಮನೆಯಲ್ಲಿ ರಾಮಭಟ್ಟ ತಂದೆಯವರ ತ್ರಾಸ ಅಣ್ಣ-ತಮ್ಮಂದಿರ ತ್ರಾಸ, ಜಾಜ್ವಲ್ಯ ಸ್ವಭಾವದ ಹೆಂಡತಿಯತ್ರಾಸ ಅಲ್ಲದೆ ಆಪ್ತೇಷ್ಟರ ಹಾಗು ನೆರೆ ಹೊರೆಯವರ ನಿಂದಾ ಛೇಷ್ಟೆ, ಅಪಮಾನಗಳ ತ್ರಾಸ ಇಷ್ಟೆಲ್ಲ ತ್ರಾಸಗಳನ್ನು ಸಹಿಸಿ ಸಹಿಸಿ ಮಹಾರಾಜಾ, ‘ಸಾಧು’ಎಂಬ ಎರಡು ಅಕ್ಷರಗಳನ್ನು ಕಾಯ್ದುಕೊಳ್ಳಬೇಕಾದರೆ ಈ ದೇಹವು ಎಷ್ಟು ಕಷ್ಟಾಪಟ್ಟಿರುವದೆಂಬದನ್ನು ನೀವೇನು ತಿಳಿದೀರಿ ಮಹಾರಾಜಾ!” ಎಂಬ ಶ್ರೀ ಶೇಷಾಚಲ ಸದ್ಗುರು ಮಹಾರಾಜರವರ ಉಪದೇಶವು ಸ್ಮರಣವಾಯಿತೆಂದರೆ ನಮ್ಮ ಹೃದಯವು ಕಂಪಿಸಹತ್ತುತ್ತದೆ.

ಪ್ರತಿಕೂಲಸಂಗತಿಗಳಿಂದ ಶ್ರೀ ಶೇಷಾಚಲ ಗುರುವರರಲ್ಲಿ ಸಾಧುತ್ವವು ನೆಲೆಗೊಂಡದ್ದು ಹ್ಯಾಗೆಂಬದನ್ನು ವಿವೇಚಿಸುವಾ. ಭಾವಿಕರ ದೃಷ್ಟಿಯಿಂದ ಅವರು ಶ್ರೀ ಚಿದಂಬರನ ದ್ವಿತೀಯಾವತಾರಿಕರು ಆಗಿದ್ದರೂ ಪ್ರಯತ್ನವಾದಿಗಳ ದೃಷ್ಟಿಯಿಂದಲೂ, ಅವರ ಅವತಾರದ ಮಹತಿಯು ತಿಳಿದುಬರುವಂತಿದೆ. ಸದ್ಗುರುಗಳು ಸಾಧಾರಣಸ್ಥಿತಿಯ ಬ್ರಾಹ್ಮಣ ಮನೆತನದಲ್ಲಿ ಜನ್ಮತಾಳಿದರು; ಅವರು ಸ್ವಭಾವತಃ ಕುಶಾಗ್ರ ಬುದ್ಧಿಯವರಾಗಿರದೆ, ಮಂದಬುದ್ಧಿಯವರಾಗಿದ್ದರು. ಬಾಲ್ಯದಲ್ಲಿ ಬಹಳದಿವಸಗಳವರೆಗೆ ಅಭ್ಯಾಸದಕಡೆ ಲಕ್ಕು ಇರದ್ದರಿಂದ ಕೇವಲ ಆಟನೋಟಗಳಲ್ಲಿ ಹೊತ್ತುಗಳೆಯುತ್ತಿದ್ದರು. ಉಪನಯನ, ಸಂಸ್ಕಾರವಾದಮೇಲೆ ಅವರ ವೈದಿಕ ಶಿಕ್ಷಣಕ್ಕೆ ಪ್ರಾರಂಭವಾಯಿತು. ಆದರೆ ದಡ್ಡತನದ ಮೂಲಕ ಅವರು ಅದರಲ್ಲಿ ಆಗ ಪೃಗತಿಯನು ಹೊಂದಲಿಲ್ಲ. ಹಿರಿಯರು ಲಗ್ನಮಾಡಿದರು. ಆಗಿನಿಂದ ಅವರ ಸಾಧುತ್ವದ ಪ್ರಗತಿಗೆ ಆರಂಭವಾಯಿತು: ಮನೆತನದ ಕೆಲಸದಲ್ಲಿ ಬೀಳದೆ, ಇವರು ಸದಾ ದೇವರ ಪೂಜೆ-ಪುನಸ್ಕಾರ, ಮೊದಲಾದವುಗಳಲ್ಲಿ ಹೊತ್ತುಗಳೆಯತೊಡಗಿದರು. ಇದರಿಂದ ಮನೆಯವರಿಗೂ ಇವರಿಗೂ ಸರಿಬೀಳಲಿಲ್ಲ. ಅಪ್ತೇಷ್ಟರು ನಿಂದೆಯನ್ನು ಮಾಡತೊಡೆಗಿದರು. ನೆರೆಹೊರೆಯವರೂ, ಮಿತ್ರರೂ ಇವರ ಭಾವಿಕತನವನ್ನು ಕುರಿತು ಚೇಷ್ಟೆಯನ್ನೂ, ಉಪಹಾಸವನ್ನೂ ಮಾಡಹತ್ತಿದರು. ಆದರೂ ಪ್ರಗತಿಯ ಕಡೆಗೇ ಲಕ್ಷ್ಯವಿದ್ದ ಆ ಸಾಧುಶ್ರೇಷ್ಠನು ಯಾರನ್ನೂ ವಿರೋಧಿಸಹೋಗಲಿಲ್ಲ. ಇಷ್ಟೇ ಅಲ್ಲ… ಅವರ ಕ್ರಿಯೆಗೆ ಕಾಯಾ-ವಾಚಾ-ಮನಸಾತಡೆಹಾಕಲು ಯೆತ್ಮಿಸದೆ ನೆಟ್ಟಗೆ ತನ್ನ ಧ್ಯೇಯದ ಕಡೆಗೇ ಸಾಗಿದ್ದನು. ಸಾಧುಗಳ ಈ ಕೃತಿಯಿಂದ ವಿವೇಕಿಗಳಾದ ಪ್ರತಿಸ್ಪರ್ಧಿಗಳು ಹಿಂಜರಿದರು. ದುರಭಿಮಾನಿಗಳು ಮಾತ್ರ ರೊಚ್ಚಿಗೆದ್ದರು. ಅವರು ಹ್ಯಾಗಾದರೂ ಮಾಡಿ ಅವನನ್ನು ಆಂಣತಮ್ಮಂದಿರಿಂದ ವಿಂಗಡಿಸಿದರೆ, ಇವನ ಈ ಢೋಂಗೀ ಸಾಧುತ್ವವು ಇಲ್ಲದಂತಾಗಿ ಹತ್ತುಜನರಂತೆ ಮನೆಮಾರುಸಾಗಿಸಿಕೊಳ್ಳುವನೆಂದು ಭಾವಿಸಿ, ಗುರುಗಳನ್ನು ಬೇರೆ ಇರಲು ಹಚ್ಚಿದರು. ಬೇರೆ ಇರಹತ್ತಿದಾಗಿನಿಂದ ಕುಹಕರ ದೃಷ್ಟಿಯಂತೆ ಗುರುಗಳ ಸಾಧನವು ಕಡಿಮೆಯಾಗದೆ, ಅದು ಮತ್ತಷ್ಟು ಶೀಘ್ರವಾಗಿಯೂ, ಸ್ವಲ್ಪಮಟ್ಟಿಗೆ ಯಾಕಾಗಲೊಲ್ಲದು. ತ್ರಾಸರಹಿತವಾಗಿಯೂ ಸಾಗಹತ್ತಿತು. ಗುರು ಪತ್ನಿಯವರು ಅತ್ಯಂತ ಉಜ್ವಲವೃತ್ತಿಯ ಶೀಡಕಸ್ವಭಾವದವರಿದ್ದರು. ಅವರು ತಮ್ಮ ಪತಿದೈವನಿಗೆ ತೊಂದರೆಕೊಡುವದಕ್ಕಾಗಿ (ಹೀಗೆನ್ನುವದಕ್ಕಿಂತ ಅವನಲ್ಲಿ ಸಾಧುತ್ವವು ತೀವ್ರವಾಗಿ ಸ್ಥಿರಗೊಳ್ಳುವದಕ್ಕೆಂದರೆ ಹೆಚ್ಚು ಸಮಂಜಸವಾಗಿ ತೋರುವದು.) ಬಹುಪರಿಯ ಕಷ್ಟಗಳನ್ನು ಕೊಟ್ಟರು. ಅವರು ತಮ್ಮ ಪತಿಯೆಂದು ಉಜರು ಇಡದೆ ಸಾಧುಗಳವರಿಂದ ಕುಟ್ಟುವದು, ಬೀಸುವದು. ಮುಸುರಿತಿಕ್ಕುವದು ಮೊದಲಾದ ನೀಚ ಕೆಲಸಗಳನ್ನು ಮಾಡಿಸಿದರು. ಮಂದಿಯ ಯೆದುರಿಗೆ ಅವರನ್ನು ಸಿಕ್ಕ ಸಿಕ್ಕ ಹಾಗೆ ಅಂದುಕೊಂಡರು. ಇವೆಲ್ಲ ಪರೀಕ್ಷೆಗಳಲ್ಲಿ ಸಾಧುಗಳು ಉತ್ತೀರ್ಣರಾಗಲಿಕ್ಕೆ ಅವರಲ್ಲಿದ್ದ ದೃಢ ನಿಶ್ಚಯ, ಅಲೌಕಿಕತೆ ಮೊದಲಾದ ಗುಣಗಳ ಸಹಾಯವಾಯಿತು. ಎಂಥ ಪ್ರತಿಕೂಲಪ್ರಸಂಗದಲ್ಲಿಯೂ ಅವರಿಗೆ ಸಾಧನದಮಾರ್ಗವು ಸುಗಮವಾಗಿ ತೋರುತ್ತಿತ್ತು, ಅಂತೇ ಅವರು ಅಲೌಕಿಕರೂ, ಕರ್ತೃ ಮಾಕರ್ತೃಮಶಕ್ತಿಯುಳ್ಳವರೂ ಆಗಿ ಲೋಕದಲ್ಲಿ ವಿಖ್ಯಾತರಾದರು.

ಪ್ರತಿಕೂಲತೆಯಲ್ಲಿ ಪ್ರಗತಿಯನ್ನು ಹೊಂದಬೇಕಾದರೆ, ಸೌಜನ್ಯ, ಸಹನಶೀಲತೆ, ಶ್ರಮಸಹಿಷ್ಣುತೆ, ದೀರ್‍ಗಪರಿಶ್ರಮ ಈ ಗುಣಗಳು ಸಾಧಕನಲ್ಲಿರಬೇಕಾಗುತ್ತವೆ. ಒಂದೇ ಕಾರಖಾನೆಯೊಳಗಿನ ಸರಿ ಜೋಡಿಯಿಂದ ಕೆಲಸಮಾಡುವ ಇಬ್ಬರು ಕೆಲಸಗಾರರಲ್ಲಿ ಒಬ್ಬನ ಲಕ್ಷ್ಯವು ತನ್ನ ಪಗಾರವು ಎಷ್ಟು ಬೇಗೆ ಹೆಚ್ಚೀತೆಂಬದರ ಕಡೆಗೆ ಇದ್ದರೆ, ಇನ್ನೊಬ್ಬನ ಲಕ್ಷ್ಯವು ತಾನು ಎಷ್ಟುಬೇಗ ಕಾರಖಾನೆಯ ಎಲ್ಲ ಕೆಲಸಗಳಲ್ಲಿ ಪಾರಂಗತನಾದೇನೆನ್ನುವದರ ಕಡೆಗೆ ಇರುತ್ತದೆ. ಮೊದಲನೆಯವನಿಗೆ ವರ್ಷಾರುತಿಂಗಳುಗಳಲ್ಲಿ ಬಡತಿ ಸಿಗದಾಗಲು, ಅವನು ಮನಸ್ಸುಗೊಟ್ಟು ಕೆಲಸಮಾಡದಾಗುವನು. ಅದರೆ ಇದಕ್ಕೆ ವಿರುದ್ಧವಾಗಿ ಎರಡನೆಯವನು ಬಡತಿಯ ಆಶೆಗೆ ಬೀಳದೆ ಕಾರಖಾನೆಯನ್ನು ನಡೆಸುವ ಕಾರಖಾನದಾರೆನ ಗುಹ್ಯಗಳನ್ನು ತಿಳಿದುಕೊಳ್ಳುವದರಲ್ಲಿ ಸತತವಾಗಿ ಶ್ರಮಪಡುವನು. ಆಕಸ್ಮಿಕ ಪ್ರಸಂಗದಿಂದ ಕಾರಖಾನೆಯು ಬಂದುಮಾಡಲಪಟ್ಟರೆ ಮೊದಲನೆಯವನು ನಿರಾಧಾರನಾಗಿ, ನೌಕರಿಗಾಗಿ ಕಂಡಕಂಡವರನ್ನು ಯಾಚಿಸಹತ್ತುವನು. ಎರಡನೆಯವನು ಕೂಡಲೇ ಚಿಕ್ಕದೇ ಯಾಕಾಗಲೊಲ್ಲದು ಸ್ವಂತದ ಉದ್ಯೋಗವನ್ನು ಪ್ರಾರಂಭಿಸಿ ಉತ್ಸಾಹದಿಂದಲೂ, ಜಾಗ್ರತೆಯಿಂದಲೂ ನಡೆಯಿಸಹತ್ತುವನು. ಆದ್ದರಿಂದ ಪ್ರಗತಿಯ ನಿಜವಾದ ತತ್ವಗಳನ್ನು-ಪ್ರತಿಕೂಲ ಸಂಧಿಯನ್ನೇ ಅನುಕೂಲ ಮಾಡಿಕೊಳ್ಳುವ ರಹಸ್ಯವನ್ನು-ಬಲ್ಲಥ ಮನುಷ್ಯನನ್ನು ಪ್ರಗತಿಮಾರ್ಗದಿಂದ ಪರಾ ವೃತ್ತರನ್ನಾಗಮಾಡಲಿಕ್ಕೆ ಯಾರೂ ಶಕ್ತರಾಗಲಿಕ್ಕಿಲ್ಲ. ಒಮ್ಮೊಮ್ಮೆ ಒಂದೆರಡು ಪ್ರತಿಕೂಲ ಪ್ರಸಂಗಗಳಲ್ಲಿ ನಮ್ಮ ಸಾಧನವು ಸ್ವಲ್ಪ ಕುಂಠಿತವಾದಂತೆ ತೋರಿದರೂ, ನಿಜವಾಗಿ ಅದು ಕುಂಠಿತವಾಗಿರುವದಿಲ್ಲ. ಚಳಿಗಾಲದ ಮೂಡಣಗಾಳಿಂದ ಎಲೆಗಳುದುರಿ ಆಮ್ರವೃಕ್ಷವು ಬಾಡಿದಹಾಗೆ ತೋರಿದರೂ, ಮುಂದೆ ಬರುವ ವಸಂತಋತುವಿನಲ್ಲಿ ಜಿಗಿತು ಆದು ಮನೋಲ್ಲಾಸಕ್ಕೆ ಕಾರಣೀಭೂತವಾಗುವಂತೆ, ಆ ಸಂದಿ ಹೋದ ಪ್ರತಿಕೂಲ ಪ್ರಸಂಗಗಳೇ ಪ್ರಗತಿಗೆ ಕಾರಣವಾದದ್ದೆಂದು ಕಂಡುಬರುವದು.

ಉನ್ನತಿಯು (ಪ್ರಗತಿಯು) ನಮ್ಮಲ್ಲಿ ದೃಢನಿಶ್ಚಯವಿದ್ದ ಮಾನದಿಂದ ಬೆಳೆಯುವದು, ಹೊರತು ಅದಕ್ಕಿಂತ ಮಿತಿಮೀರಿ ಆಗಲಾರದು. “ನಮ್ಮ ದೈವದಲ್ಲಿ ಸಾಯುವವರೆಗೆ ಶಿಪಾಯಿಯೊಗುವದೇ ಇರುವದೆಂದು” ನಂಬಿರುವ ಮನುಷ್ಯನು ಬಹುಶಃ ಶಿಪಾಯಿತನಬಿಟ್ಟು ಜಮಾದಾರ ನಾಗಲಾರನು. “ಕಾರಕೂನಿಕಿ ಒಂದು ಸಿಕ್ಕರೆ ಸಾಕು, ನಮಗೆ ಹೆಚ್ಚಿನ ಹುದ್ದೆ ಯಾತಕ್ಕೆ ಬೇಕೆ”ಂದು ಭಾವಿಸಿರುವವನಿಗೆ ಕಾರಕೂನಿಕಿ ಸಿಗುವದೇ ದುರ್ಲಭವಾಗುವದು. ಯಾಕೆಂದರೆ ಈ ಜನರು ಕಲ್ಪನಾಶ್ರುಷ್ಟಿಯಲ್ಲಿ ಸಹ ಹೆಚ್ಚಿನ ಪದವಿಗೇರುವಾಗ ತೋರಬಹುದಾದ ಪ್ರತಿಕೂಲಸಂಗತಿಗಳಿಗೇ ಅಂಜುತ್ತಿದ್ದದರಿಂದ ಇವರು ನಿಜವಾದ ಪ್ರಗತಿಗೆ ಸ್ವಾಭಾವಿಕವಾಗಿ ಆಯೋಗ್ಯರಾಗುವರು. ಆತ್ಮತ್ರದ್ಧೆ, ದೃಢನಿಶ್ಚಯಗಳಿದ್ದ ಹೊರತು ಪ್ರತಿಕೂಲಪ್ರಸಂಗಗಳಿಗೆ ಎದೆಗೊಡುವ ಧೈರ್ಯವುಂಟಾಗುವದಿಲ್ಲ. ಈ ಗುಣಗಳು ಇರದ್ದರಿಂದಲೇ ಶಿಪಾಯಿಯು ಕಡೆತನಕ ಶಿಪಾಯಿಯಾಗಿಯೂ, ಕಾರಕೂನನು ಸಾಯುವವರೆಗೆ ಕಾರಕೂನನೇ ಆಗಿಯೂ ಇರಬೇಕಾಗುತ್ತದೆ.

ಆಕಾಶದಲ್ಲಿ ತೂರಿದ ಚೆಂಡು ಮರಳಿ ನೆಲಕ್ಕೆ ಬೀಳುವದು ಹ್ಯಾಗೆ ಸಂಭವವೋ, ನೀರಲ್ಲಿ ಚಲ್ಲಿದ ಕಲ್ಲು ಮಣುಗುವದು ಹ್ಯಾಗೆ ಸಂಭವವೋ ಹಾಗೆಯೆ ದೃಢನಿಶ್ಚಯದಿಂದ ಮಾಡಿದ ಪ್ರಯತ್ನದಿಂದ ಪ್ರಗತಿಯಾಗುವದು ಸಂಭವವಾಗಿರುತ್ತದೆ. ಇದರಲ್ಲಿ ಅಭ್ಯಂತರವೇನೂ ಇರುವದಿಲ್ಲ. ಸ್ವಾತಂತ್ರ್ಯ ಪ್ರೀತಿ, ದೃಢನಿಶ್ಚಯ ಅಪೂರ್ವತೆ, ಮಹತ್ವಾಕಾಂಕ್ಷೆ, ಸ್ವಾವಲಂಬನ ಮೊದಲಾದ ಗುಣಗಳಲ್ಲಿಯಾದರೂ ಗುರುತ್ವಾಕರ್ಷಣಧರ್ಮದಂತೆ ಈ ಪ್ಸಿತಸಾಧನವನ್ನು ತಪ್ಪದೆ ದೊರಕಿಸಿಕೊಡುವ ಶಕ್ತಿಯಿರುತ್ತದೆ. ಈ ಮಾರ್ಗದಿಂದ ಪ್ರಗತಿಯು ಬೇಗನೆ ಆಗುವದಿಲ್ಲೆಂದು ಭಾವಿಸಿ ಅತಂತ್ರವಿಚಾರದ ಮನುಷ್ಯನು ಬೇರೆ ದುರ್‍ಮಾರ್ಗದಿಂದ ತೀವ್ರ ಪ್ರಗತಿಹೊಂದಲು ಯತ್ನಿಸಿದರೆ, ಅವನ ಪ್ರಗತಿಯಾಗುವದೊತ್ತಟ್ಟಿಗೇ ಉಳಿದು ಗೌಳಿಗನು ಕೆಚ್ಚಲ ಕೊಯ್ದು ಎಮ್ಮೆಯ ಎಲ್ಲ ಹಾಲನ್ನು ಒಂದೇದಿವಸ ಕರೆಯಲಿಚ್ಚಿಸಿ, ಹತಭಾಗಿಯಾದಂತೆ, ಹತಾಶನಾಗುವನು.

ಸಂಪತ್ತಿಯಾಗಲಿ, ಸೌಖ್ಯವಾಗಲಿ ತಾವಾಗಿ ನಮ್ಮನ್ನು ಹುಡುಕಿಕೊಂಡು ಬರುವದಿಲ್ಲ. ನಾವು ಅದನ್ನು ಎದುರುಗೊಳ್ಳಲು ಹೋದರೆ ಮಾತ್ರ ಅವು ನಮ್ಮೆಡೆಗೆ ಬರಹತ್ತುವವು. ಯೆಶೋಮಂದಿರದ ಬಾಗಿಲವು ಸದಾ ತೆರೆಯಲ್ಪಟ್ಟಿರುತ್ತದೆ. ಆದರೆ ಬಾಗಿಲವನ್ನು ಪ್ರವೇಶಿಸುವ ಮಾರ್ಗವನ್ನು ಕಂಡುಹಿಡಿಯುವದು ಮಾತ್ರ ಎಲ್ಲರಿಂದಲೂ ಆಗುವದಿಲ್ಲ. ಇಷ್ಟೇ ಅಲ್ಲ. ಆ ದ್ವಾರವನ್ನು ಪ್ರವೇಶಿಸುವ ಪ್ರತಿಯೊಬ್ಬನ ಮಾರ್ಗವು ಬೇರೆ ಬೇರೆಯಾಗಿರುವದರಿಂದ ತಂದೆಯಮಾರ್ಗವು ಮಗನಿಗೂ, ತಾಯಿಯಮಾರ್ಗವು ಮಗಳಿಗೂ ಅರಸನಮಾರ್ಗವು ಪ್ರಜೆಗಳಿಗೂ ಗುರುವಿನಮಾರ್‍ಗವು ಶಿಷ್ಯನಿಗೂ ಯಶಃಪ್ರಾಪ್ತಿಗೆ ಪ್ರಗತಿಗೆ ಸುಗಮವಾಗಲಿಕ್ಕಿಲ್ಲ; ಆದ್ದರಿಂದ ಪ್ರಗತಿಪರನು ಹಿಂದೆ ಹೇಳಿದಂತೆ ಲೋ. ಟಿಳಕರಂತೆ ವ್ಯಾಖ್ಯಾನಕೊಟ್ಟು, ಶ್ರೀಯುತ ಶಿವ ರಾಮಪಂತ ಪರಾಂಜಪೆಯವರಂತೆ ಲೇಖಬರೆದು, ಪ್ರೊ. ಕರ್ವೆಯೆವರಂತೆ ಸಾಹಸಪಟ್ಟು, ವೈ ವೇಂಕಟೆ ರಂಗೋ ಕಟ್ಟಿಯೆವರಂತೆ ಭಾಷೆಯ ಏಳ್ಗೆಯನ್ನು ಮಾಡಿ ಇಲ್ಲವೆ ಪ್ರಸಿದ್ಧ ಕಳ್ಳನಾದ ಕಟ್ಟಿ ಚೆನ್ನನಂತೆ ಕಳುವುಮಾಡಿ ತಲೆಹೊಡಕ ವಾಲ್ಮಿಕನಂತೆ ತಲೆಹೊಡೆದು ಪ್ರಸಿದ್ಧ ರಾಗಲು ಯತ್ನಿಸುವದು ದಡ್ಡತನವು. ಪ್ರಗತಿಗಾಮಿಯು ದೃಢನಿಶ್ಚಯದ ಬಲದಿಂದ ಪ್ರತಿಕೂಲಪ್ರಸಂಗಗಳ ಮುಂದೆ ಸೆಡ್ಡು ಹೊಡೆಹೊಡೆದು ನಿಲ್ಲಹತ್ತಿದಂತೆ ಆ ಪ್ರಸಂಗಗಳು ಹೋಗಿ ಇಲ್ಲವೇ ಅವೇ ಅನುಕೂಲಗಳಾಗಿ ಪರಿಣಮಿಸಿ ಅವನ ಪ್ರಗತಿಗೆ ಕಾರಣವಾಗುವವು
*****

ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನು ಕಾಲ!
Next post ನಲುಗುವ ಹೂವು

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…