ಮನಸ್ಸಿನಲ್ಲಿ ನೌಕರಿಮಾಡುವದಿಲ್ಲ; ಆದರೆ ಪ್ರಸ್ತುತ! ಕಠಿಣಕಾಲದ ಮೂಲಕ ಯಾವ ಸ್ವತಂತ್ರ ಧಂದೆಯನ್ನೂ ತೆಗೆಯುವಹಾಗಿಲ್ಲವೆಂದೂ, ಮನೆಯಲ್ಲಿ ಬಬ್ಬೊಂಟಿಗನಾದ್ದರಿಂದ ಯಾವ ಉದ್ಯೋಗವನ್ನೂ ಕೈಕೊಳ್ಳಲಾರೆನೆಂತಲೂ, ಏನು ಮಾಡುವಿರಿ ನನಗೆ ದುಡ್ಡಿನ ಕೊಂತೆಯೊಂದಿಲ್ಲದಿದ್ದರೆ ನಾನು ಇಂಥ ಹಲವು ಉದ್ಯೋಗಗಳನ್ನು ಸಾಗಿಸುತ್ತಿದ್ದೆನೆಂತಲೂ, ನನ್ನ ಪ್ರಕೃತಿ ಸರಿಯಾಗಿಲ್ಲ, ಆದ್ದರಿಂದ ನಾನು ಕಮತಮಾಡುವಹಾಗಿಲ್ಲವೆಂತಲೂ, ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿರುವದರಿಂದ ಪ್ರಕೃತದ ಯುದ್ಧದಕ್ಕೆ ಸ್ವಯಂಸೇವಕನಾಗಿ ಯುದ್ಧಮಾಡುವದು ನನಗೆ ಸಾಧಿಸದೆಂತಲೂ ಹಲವರು ಹಲವು ವಿಧವಾಗಿಹೊರಪಡಿಸುವ ಉದ್ಗಾರಗಳನ್ನು ಪೂರ್ವಕವಾಗಿ ಕೇಳಿದರೆ, ಆ ಎಲ್ಲರ ಕಾರ್ಯಸಾಧನೆಗೂ ಒಂದೇ ಒಂದು ಸಂಗತಿಯ ಅಭಾವವು ವ್ಯಕ್ತವಾಗುವದು. ಆ ಸಂಗತಿ ಯಾವದೆಂದರೆ ಸಾಧನಾಭಾವವು. ಕೆಲವರಿಗೆ ಸಮಯದ ಅಭಾವ, ಕೆಲವರಿಗೆ ಮನುಷ್ಯರ ಅಭಾವ, ಕೆಲವರಿಗೆ ದುಡ್ಡಿನ ಅಭಾವ, ಕೆಲವರಿಗೆ ಆರೋಗ್ಯದ ಅಭಾವ; ಹೀಗೆ ಎಲ್ಲಿ ನೋಡಿದರೂ ಸಾಧನಾಭಾವವೇ ಸಾಧನಾಭಾವವು.
“ಯಾವ ಪವಿತ್ರ ಭರತಭೂಮಿಯಲ್ಲಿ ನನ್ನ ಜನ್ಮವಾಗಿರುವದೋ ಆ ದೇಶದ ಸಲುವಾಗಿಯೂ, ನನ್ನ ಸ್ವಂತದ ಸಲುವಾಗಿಯೂ, ಹಾಗು ನನ್ನ ದೇಶಬಾಂಧವರ ಸಲುವಾಗಿಯೂ ಕೆಲಮಟ್ಟಿಗಾದರೂ ಹಿತದ ಕಾರ್ಯವನ್ನು ಮಾಡಬೇಕೆಂದು ನಾನು ಬಯಸುವೆನು.” ಹಾಗು ಅದಕ್ಕಾಗಿ ನಾನು ಯಥಾಶಕ್ತಿವರ್ತಿಸುತ್ತಿರುವೆನು” ಎಂಬಸಂಕ್ಷಿಪ್ತವೃತ್ತಾಂತದಿಂದ ಕೈ, ನಾಮದಾರ ಗೋಖಲೆಯವರು ಒಂದು ಪ್ರಸಂಗದಲ್ಲಿ ವಿದ್ಯಾರ್ಥಿಗಳ ಮುಂದೆ ಆತ್ಮನಿವೇದನ ಮಾಡಿಕೊಂಡಿರುವರು. ದಾರಿದ್ರ್ಯಾವಸ್ಥೆಯೆಲ್ಲಿ ಹುಟ್ಟಿ, ಕೇವಲ ಬಡತನದಲ್ಲಿ ಬೆಳೆದು, ಸಂಕಟ ಪರಂಪರೆಗಳಿಂದ ವೇಸ್ಟಿತರಾಗಿ, ಪ್ರಗತಿಮಾರ್ಗದಲ್ಲಿ ಕೇವಲ ನಿರಾಧಾರರಾಗಿದ್ದ ಈ ಗೋಖಲೆಯವರು ಅತ್ಯಂತ ಪ್ರಗತಿಯನ್ನು ಹೊಂದಿ, ಹಿಂದೂಮಾತೆಯ ಸುಪುತ್ರರ ಮಾಲಿಕೆಯಲ್ಲಿ ಶೋಭಿಸುತ್ತಿರುವರು. ದೃಢನಿಶ್ಚಯದವನಿಗೆ ಪ್ರಗತಿಮಾರ್ಗವನ್ನು ತೋರಿಸಲಿಕ್ಕೆ ಸೃಷ್ಟಿಯು ಹ್ಯಾಗೆ ತತ್ಪರವಾಗಿರುತ್ತದೆಂಬದನ್ನೂ ಯಶಃಪ್ರಾಪ್ತಿಯು ಕೇವಲ ಸಾಧನಗಳಲ್ಲಿರದೆ, ಮನುಷ್ಯನು ಪ್ರಯತ್ನದಿಂದ ಅದನ್ನು ಹ್ಯಾಗೆ ಸಾಧಿಸಬಹುದೆಂಬದನ್ನೂ ಗೋಪಾಳರಾವ ಗೋಖಲೆಯವರ ಉದಾಹರಣೆಯಿಂದ ತಿಳಿದುಕೊಳ್ಳಬಹುದಾಗಿದೆ. ಆ ಕಾಲಕ್ಕೆ ಪುಣೆಯಲ್ಲಿ ಗೋಪಾಳರಾಯರ ಸಮವಯಸ್ಕರಾದ ಎಷ್ಟೋ ಜನ ವಿದ್ಯಾರ್ಥಿಗಳು ಸಾಧನಾಭಾವದ ಸಲುವಾಗಿ ಅಳುತ್ತ ಕೂತಿದ್ದರು. ಆದರೆ ಗೋಪಾಳರಾಯರು ಆವರಂತೆ ಅಳಬುರಕರಾಗದ್ದರಿಂದ ಅವರು ಪ್ರತಿಯೊಂದು ಪ್ರತಿಕೂಲ ಪ್ರಸಂಗಕ್ಕೂ ಧೈರ್ಯದಿಂದ ಎದೆಗೊಟ್ಟು ಇಷ್ಟಕಾರ್‍ಯ ಸಾಧಿಸಿದರು; ಅವರ ಧ್ಯೇಯವು ನಿಶ್ಚಿತವಾದ್ದರಿಂದ ಎಂಥ ಇಕ್ಕಟ್ಟಿನಪ್ರಸಂಗಗಳ ಪರಿಯು ಅವರ ಕಣ್ಣಿಗೆ ಬಂದರೂ ಅದರೊಳಗಿಂದ ಧ್ಯೇಯವು ಅವರಿಗೆ ಸ್ಪಷ್ಟವಾಗಿ ಕಾಣದೆ ಇರುತ್ತಿದ್ದಿಲ್ಲ. ಕೇವಲ ಸಾಧನಾಭಾವಸ್ಥಿತಿಯಲ್ಲಿ ಸಹ ಅವರಿಗೆ ತಮ್ಮ ಅಲೌಕಿಕ ಕಾರ್ಯದ ಹಲವು ಅನುಪಮ ಸಾಧನಗಳು ಗೋಚರವಾಗುತ್ತಿದ್ದವು. ಮಾರ್ಗದಲ್ಲಿ ಬರಬಹುದಾದ ಪ್ರತಿಯೊಂದು ಎಡರುಗಳಿಗೆ ಎದೆಗೊಡಲು ತಾನು ಸಮರ್ಥನಿದ್ದೇನೆಂದು ಗೋಪಾಳರಾಯರಿಗೆ ತೋರುತ್ತಿದ್ದದರಿಂದ ಅವರು ಸಂಕಟಗಳಿಗೆ ಹೆಡರುತ್ತಿದ್ದಿಲ್ಲ; ಜೀವಿತಸಾಫಲ್ಯ ಮಾಡಿಕೊಳ್ಳುವ ಕಾರ್‍ಯದಲ್ಲಿ ಯಾವಾಗಲೂ ಮುಂದುವರಿಯುತ್ತಿದ್ದರು. ಗೋಪಾಳರಾಯರಿಗೆ ಹಲವು ಸಾಧನಗಳು ಬೇಕಾಗಿದ್ದವು. ಆದರೆ ಅವುಗಳ ಸಲುವಾಗಿ ಅವರು ತಮ್ಮ, ಪ್ರಗತಿಯನ್ನು ನಿಲ್ಲಿಸಲಿಲ್ಲ: ಆ ಸಾಧನಗಳನ್ನು ಅವರು ತಮ್ಮ ಪುಯತ್ನದಿಂದ ಕೈವಶ ಮಾಡಿಕೊಂಡರು.
ದೃಢನಿಶ್ಚಯವುಳ್ಳವರು ಕಾರಣಗಳನ್ನು ಹೇಳುತ್ತ ಕೂಡುವದಿಲ್ಲ. ಅವರ ಓಟವು ಸದಾ ಕೆಲಸದಕಡೆಗೆ ಇರುತ್ತದೆ. ಈ ಸ್ವಾವಲಂಬಿಗಳು ಮಂದಿಯಸಹಾಯದ ಅಪೇಕ್ಷೆಯನ್ನು ಸಹಸಾಬಯಸುವುದಿಲ್ಲ ಅನುಕೂಲಸಮಯದ ನಿರೀಕ್ಷಣಮಾಡುತ್ತ ಕೂಡ್ರದೆ, ಇಶ್ಠಕಾರ್ಯ ಸಾಧಿಸುವದಕ್ಕಾಗಿ ಒಂದೊಂದು ಹೆಜ್ಚೆ ಮುಂದಿಕುತ್ತಿರುತ್ತಾರೆ ಅವರ ಈ ಸಾಹಸದಿಂದ ಸಾಧನಗಳು ಅವರಿಗೆ ತಾವಾಗಿಯೇ ದೊರಕಹತ್ತುವವು. ಯಾರು ತಮಗೆ ಸಾಧನಾಭಾವವೆಂದು ಹೇಳುವರೋ ಅವರು ತಮ್ಮ ಬಾಯಿಂದಲೇ ತಾವು ದುರ್ಬಲರಿರುತ್ತೇವೆಂದು ಒಪ್ಪಿಕೊಂಡಹಾಗಾಗುತ್ತದೆ.
‘ಸಾಧನಾಭಾವ’ವು ಪರಾಜಯ ಹೊಂದಿದ ಜನರ ನಿಶ್ಚಿತ ಉತ್ತರವಾಗಿದೆ. ಈ ಜನರು ಮೇಲೆ ಹೇಳಿದಂತೆ ತಮಗೆ ಧನಸಹಾಯ. ಇಲ್ಲವೆ ಜನಸಹಾಯ ಇಲ್ಲವೆ ಬುದ್ಧಿಸಹಾಯ ಮೊದಲಾದ ಸಾಧನಗಳು ಯೋಗ್ಯವಾಗಿ ದೊರಕದ್ದರಿಂದ ಪೃಗತಿಮಾರ್ಗದಲ್ಲಿ ಪರಾಜಯ ಹೂಂದಿರುವೆವೆಂದು ಭಾವಿಸುತ್ತಾರೆ. ಆದರೆ ಬಾಲ್ಯಾವಸ್ಥೆಯಲ್ಲಿ ತಂದೆಯ ಅಕಾಲಿಕ ಮರಣದಿಂದಲೂ ಬಡವೆಯಾದ ತಾಯಿಯು ಪಲ್ಲೆ ಕಾಯಿಮಾರಿ ಸಂಪಾದಿಸುವ ಪ್ರಾಪ್ತಿಯಲ್ಲಿ ಹೊಟ್ಟೆ ತುಂಬದ್ದರಿಂದಲೂ, ಕೇವಲ ಊಪಜೀವಿಕೆಗಾಗಿ ಎರಡು ರೂಪಾಯಿ ಪಗಾರಕ್ಕೆ ದುಡಿಯುತ್ತಿದ್ದ ಜಾವಜೀದಾದಾಜಿಗೆ ನಿರ್ಣಯ ಸಾಗರದಂಥ ಜಗತ್ಪ್ರಸಿದ್ಧ ಪ್ರೆಸ್ಸಿನ ಉತ್ಪಾದಕನಾಗಲಿಕ್ಕೆ ಸಾಧನಗಳೆಸ್ಟು ಅನುಕೂಲವಾಗಿದ್ದವು? ಈ ವಿಪರೀತ ಪರಿಸ್ಥಿತಿಯಲ್ಲಿಯೇ ದೃಢನಿಶ್ಚಯದಿಂದ ಧ್ಯೇಯವನ್ನು ಸಾಧಿಸಿದ್ದರಿಂದ ಅವನು ಅಜರಾಮರ ಕೀರ್ತಿಗೆ ಪಾತ್ರನಾದನಲ್ಲದೆ, ನೂರಾರುಜನರ ಪಾಲನಕರ್ತನೂ, ಕೋಟ್ಯಾಧೀಶನೂ ಆದನು. “ಜಸ್ಟಿಸ್ ಆಫ್‌ದಿಪೀಸ”ವನ್ನು ನಿರೀಕ್ಷಿಸುತ್ತ ಕೂಡ್ರದೆ ಸಾಧನಾಭಾವವೆಂದು ಹೇಳದೆ, ಎಂಥ ಕಠಿಣ ಪರಿಸ್ಥಿತಿಯಲ್ಲಿಯೂ ಕಾರ್ಯ ಮಾಡಿ ತೋರಿಸುವ ಇಂಥ ಸಾವಿರಾರು ಜಾವಜಿಗಳು ನಮ್ಮ ಹಿಂದೂಸ್ತಾನದಲ್ಲಿ ಬೇಕಾಗಿದ್ದಾರೆ. ಆದರೆ ಆ ಜಾವಜಿಗಳು ಪೇಟೆಯಲ್ಲಿ ಮಾರಲಿಕ್ಕೆ ದೊರೆಯೆದೆ, ಕೇವಲ ಪ್ರಯತ್ನದಿಂದ ಅಗಬಹುದಾದ್ದರಿಂದ ಪ್ರಗತಿಗಾಮೇಚ್ಛುಗಳು ಜಾವಜಿಯ ಉದಾಹರಣೆಯನ್ನು ಮುಂದಿಟ್ಟುಕೊಂಡು ಸತತವಾಗಿ ಪರಿಶ್ರಮಪಟ್ಟು ಪ್ರಗತಿಯನ್ನು ಹೊಂದಬೇಕು.
ಸಾಧನಗಳ ಸಲುವಾಗಿ ತಡೆದು ನಿಲ್ಲುವದು ಬಹಳ ಘಾತಕವಾಗಿದೆ. ಹೀಗೆ ತಡೆದುನಿಲ್ಲುವದರಿಂದ ನಮ್ಮ ಉತ್ಸಾಹದ ಹಾಗು ಕೆಲಸಮಾಡುವ ಪ್ರವೃತ್ತಿಯು ನಾಶವಾಗುವದು. ಯಾವ ಕೆಲಸಮಾಡಲೂ ಇಚ್ಛೆಯಿಲ್ಲದವನಿಗೂ ಸಾಧನಗಳ ಸಲುವಾಗಿ ತಡೆದು ನಿಲ್ಲುವವನಿಗೂ ಸುಸಂಧಿಗಳು ಅದೃಶ್ಯವಾಗುವವು. ಎಂಥ ಅನುಕೂಲಪರಿಸ್ಥಿತಿಯು ಪ್ರಾಪ್ತವಾದರೂ ಎಂಥ ಸುಸಾಧನಗಳು ಹಸ್ತಗತನಾಗಿದ್ದರೂ ಈ ಹೇಡಿಜನರ ದೃಷ್ಟಿಯಿಂದ ಅದು ತಕ್ಕ ಸಮಯವೇ ಆಗಿರುವದಿಲ್ಲ. ಯೋಗ್ಯ ಸಾಧನವಾಗಿಯೂ ಕಂಡುಬರುವದಿಲ್ಲ. ಇಂಥ ಜನರನ್ನು ಬಂಗಾರರತ್ನ್ನಗಳ ಖಣಿಗಳಲ್ಲಿ ತಿರುಗಾಡಿಸಿದರೆ ಕೂಡ ಇವರಿಗೆ ಮೌಲ್ಯವಾದ ವಸ್ತುಗಳು ದೊರೆಯದಾಗುವವು. ಆದರೆ ದೃಢನಿಶ್ಚೆಯದ ಧ್ಯೇಯವನ್ನು ಗೊತ್ತುಮಾಡಿಕೊಂಡ, ಅಪೂರ್‍ವತೆಯ ಗುಣವುಳ್ಳ ಹಾಗು ಸ್ವಾತಂತ್ರ್ಯ ಪ್ರೀತಿಯುಳ್ಳ, ಮನುಷ್ಯನನ್ನು ಎಂಥ ರುಕ್ಷ ಹಾಗು ಕಾಡುಪ್ರದೇಶದಲ್ಲಿ ಬಿಚ್ಚರೂ ಅವನಿಗೆ ತನ್ನ ಸುತ್ತು ಮುತ್ತು ಸಾಧನಗಳ ಸಂಗ್ರಹಾಲಯವೇ ಇದ್ದಂತೆ ಕಾಣುವದು.
ಲೋ. ಟಿಳಕರು “ಗೀತಾರೆಹಸ್ಯ”ದಂಥ ಕರ್ಮಯೋಗಶಾತ್ರದ ಸರ್ವಮಾನ್ಯವಾದ ಉದ್ಗ್ರ್‍ಅಂಥವನ್ನು ಜೀಲಿನಲ್ಲಿದ್ದಾಗ ಬರೆದು ಮುಗಿಸಿದರು. ಅವರ ಆಗಿನ ಮನಸ್ಥಿತಿ, ಅನುಕೂಲತೆ ಪರಿಸ್ಥಿತಿಗಳನ್ನ ಅವಲೋಕಿಸಿದರೆ ದೃಢನಿಶ್ಚಯವೇ ಅವರಿಂದ ಈ ಪ್ರಚಂಡ ಕೆಲಸವನ್ನು ಮಾಡಿಸಿತೆನ್ನ ಬೇಕಾಗುವದು. ಲೋ. ಟಿಳಕರಂತೆ ಪ್ರಗತಿಗಾಮಿಗಳಾದ ಅನೇಕರು ಕಠಿಣ ಪ್ರಸಂಗದಲ್ಲಿ ಆಲೌಕಿಕ ಕೃತಿಗಳನ್ನು ಮಾಡಿ ಕೀರ್ತಿಶೇಷರಾಗಿರುವರು. ಆದರೆ ತಮ್ಮ ಎಲ್ಲ ವೇಳೆಯನ್ನು ಕಾರ್ಯಸಾಧನದಲ್ಲಿ ಕಳೆಯುವವರು ವಿರಳ, ಕೆಲವರಿಗೆ ಕಾರ್‍ಯ ಸಾಧನದಲ್ಲಿ ಇಡಿದಿವಸದಲ್ಲಿ ತಾಸು ಅರ್ಧ ತಾಸು ಕೂಡ ವಿರಾಮಹೊಂದಲು ವೇಳೆ ಸಿಗದಿರುವಾಗ, ಬೇರೆ ಕೆಲವರು ಏನು ಕೆಲಸವಿಲ್ಲದೆ ಯಾವ ಮೋಜಿನ ಆಜಗಳಲ್ಲಿ ಕಾಲಕಳೆಯಬೇಕೆಂಬ ಆಲೋಚನೆಯೆಲ್ಲಿ ಮಗ್ನರಾಗಿರುವರು: ಇದರಂತೆ ಯೂರು ನಿರೋಗಿಗಳಾಗಿರುವರೋ ಅವರು ಹೆಚ್ಚು ಆರೋಗ್ಯವನ್ನು ಹೊಂದುವದಕ್ಕಾಗಿಯೂ ದೇಹದ ಬಲವನ್ನು ಬೆಳಿಸುವದಕ್ಕಾಗಿಯೂ ವ್ಯಾಯಾಮಾದಿಗಳ ಅವಲಂಬನ ಮಾಡುತ್ತಿರಲು, ಬೇರೆ ಕೆಲವು ಶ್ರೀಮಂತ ರೋಗಿಗಳು ರೋಗನಿವಾರಣಕ್ಕಾಗಿ ಆರೋಗ್ಯ ವಿಷಯದ ಯಾವ ಮಾರ್‍ಗವನ್ನೂ ಅವಲಂಬಿಸಲಾರದೆ ಕೇವಲ ಆಲಸ್ಯದಲ್ಲಿಯೂ, ತಿನಿಸುಗೂಳಿತನದಲ್ಲಿಯೊ ಕಾಲಕಳೆದು ಹೆಚ್ಚು ಹೆಚ್ಚು ರೋಗಗ್ರಸ್ತರಾಗುತ್ತಿರುವರು. ಪ್ರಗತಿಹೊಂದುವ ಇಚ್ಛೆಯು ಪ್ರಾಪ್ತವಾದಹೊರ್ತು ಮನುಷ್ಯನಿಗೆ ಸರಿಯಾಗಿ ಹೊಟ್ಟೆ ಹಸಿಯದಿದ್ದಾಗ ಮಧುರವಾದ ಫಲಗಳೂ ಸ್ವಾದವಾಗಿ ತೋರದಿರುವಂತೆ, ಎಂಥ ಉತ್ಕೃಷ್ಟ ಸಾಧನಗಳೂ ಸಾಧನಗಳಾಗಿ ತೋರುವದಿಲ್ಲ. ಆದ್ದರಿಂದ ಪ್ರಗತಿಹೊಂದಬೇಕೆನ್ನುವ ಮನುಷ್ಯನು ಮೊದಲು ತನ್ನ ದೃಸ್ಟಿಯನ್ನು ತಿದ್ದಿಕೊಳ್ಳಬೇಕು. ಅಂದರೆ ಅವನಿಗೆ ಪ್ರಗತಿಯ ಇಚ್ಛಾಪ್ರಾಪ್ತವಾಗಿ ಪ್ರತಿಯೊಂದು ಸ್ಥಿತಿಯೂ ಅನುಕೂಲವುಗಿಯೇ ಕುಣುವದು.
ಪುಗತಿಯ ಇಚ್ಜೆಯೊಂದು ಪ್ರಾಪ್ರವಾಯಿತೆಂದರೆ, ಜಾವಜಿ, ಗೋಖಲೆ ಇವರಂತೆ ಮತ್ತಾರಾದರೂ ಅಪೂರ್ವ ಕಾರ್‍ಯವನ್ನು ಮಾಡಿ ತೋರಿಸಹತ್ತುವರು. ಇಷ್ಟೇ ಅಲ್ಲ ಅತ್ಯಂತ ರೋಗಿಯಾದ ಮಹಾ ವ್ಯಂಗವುಳ್ಳ ಮನುಷ್ಯನು ಕೂಡ ಅಲೌಕಿಕ ಕೆಲಸಮಾಡಿ ತೋರಿಸುವನು. ಈಗಿದ್ದ “ಬೀಜಗಣಿತ”ವನ್ನು ಯಾವನೋ ಜನ್ಮಾಂಥ ನೊಬ್ಬನು ತನ್ನ ಅಪೂರ್ವವಾದ ಕಲ್ಪಕತೆಯಿಂದ ರಚಿಸಿರುವನೆಂಬ ದಂತಕಥೆಯು ಕೇಳಿಕೆಯಲ್ಲಿದೆ. ನಮ್ಮ ಆರ್ಯಾವರ್ತದಲ್ಲಿ ಇಂಥ ಗುಣಗಳುಳ್ಳ ಆದರಣೀಯರಾದ ಹಲವರು ಸ್ತ್ರೀ ಪುರುಷರು ಆಗಿಹೋದರು. ಸದ್ಯಃಕಾಲದಲ್ಲಿಯೂ ಇರುಮು. ತೀರ ಸ್ವಲ್ಪ ಅಪವಾದಗಳನ್ನು ಬಿಟ್ಟುಕೊಟ್ಟರೆ, ಜಗತ್ತಿನೊಳಗಿನ ಉಳಿದ ಎಲ್ಲ ಆಲೌಕಿಕ ಶಾರ್ಯಗಳು ಕೇವಲ ಪ್ರತಿಕೂಲಸ್ಥಿತಿಯಲ್ಲಿದ್ದ ಬಡಹುಡುಗರಿಂದಲೇ ಆಗಿವೆಯೆಂದು ಹೇಳಲಿಕ್ಕೆ ಅಡ್ಡಿಯಲ್ಲ.
ಆತ್ಮೋನ್ನತಿಯ ದೃಢನಿಶ್ಚಯದಿಂದ ಪ್ರೇರಿತನಾದ ಮನುಷ್ಯನ ಎದುರಿನಲ್ಲಿ ಯಾವ ವಿಘ್ನಗಳೂ ಬಹಳ ಹೊತ್ತಿನವರೆಗೆ ನಿಲ್ಲಲಾರವು. ಯಾವ ವಿಘ್ನಗಳು ಸಾಮಾನ್ಯರನ್ನು ಕ್ಷುದ್ರ ವಸ್ಥೆಯಲ್ಲಿರಿಸಲು ಕಾರಣಗಳಾಗುವವೋ ಆ ವಿಘ್ನಗಳನ್ನು ದೃಢನಿಶ್ಚಯದ ಮನುಷ್ಯನು ಸಹಜವಾಗಿ ಛೇದಿಸುವನು. ಕಾರ್ಯದಲ್ಲಿ ಆಸಕ್ತಿಯು ಹೆಚ್ಚಿದ ಮಾನದಿಂದ ಕಾರ್ಯಸಾಧಿಸುವ ಸಂಭವವು ಹೆಚ್ಚು; ಕಡಿಮೆತರದ ಆಸಕ್ತಿಯಿಂದ ಯಾವ ಕುರ್ಯವೂ ಸಾಧಿಸಲಾರದು. ಸಾಧಾರವಾದ ಬೆಚ್ಚಗಿನ ನೀರಿನಿಂದ ಉಗಿಯು ಉತ್ಪನ್ನವಾಗದ್ದರಿಂದ ಎಂಜಿನವು ನಡೆಯುವದಿಲ್ಲ. ಅದೇ ಸಳಮಳ ಸುದಿಯುವ ನೀರಿನಿಂದ ಆಗಲೇ ಇಂಜನಿಗೆ ಗತಿಯು ಉಂಟಾಗುವದು. ಈ ನಿಯಮವೇ ಪ್ರಗತಿಪರ ಮನುಷ್ಯನಿಗೆ ಹತ್ತುವದು. ಯೆಶಃಪ್ರಾಪ್ತಿಯ ಗುಹ್ಯವು ಹೆಚ್ಚಾದ ಆಸಕ್ತಿಯಲ್ಲಿರುವದು. ಪ್ರತಿಬಂಧಗಳನ್ನು ಛೇದಿಸುವ ಶಕ್ತಿಯು ಮಿತಿಮೀರಿದ ಆಸಕ್ತಿಯಿಂದ ಉಂಟಾಗುವದು. ಪ್ರತಿಬಂಧಗಳಿಗೆ, ವಿಘ್ನಗಳಿಗೆ ಹೆದರುವವರು ಅವುಗಳ ವರ್ಚಸ್ಸನ್ನು ಒಪ್ಪಿಕೊಂಡಂತಾಗುವದು. ಆದರೆ ಕಾರ್ಯಾಸಕ್ತಿಯನ್ನು ಬೆಳಿಸಿ ದೃಢನಿಶ್ಚಯದಿಂದ ಕೆಲಸ ಮಾಡಹತ್ತಿದರೆ ಧ್ಯೇಯವನ್ನು ಬಹುಬೇಗ ಸಾಧಿಸಲಿಕ್ಕೆ ಬರುತ್ತದೆ.
ತಮ್ಮ ಊರ ಭೂಮಿಗಿಂತ ಬೇಕೆ ಊರ ಭೂಮಿಗಳು ಹೆಚ್ಚು ಫಲಕಾರಿಗಳೆಂದು ತಿಳಿಯುವ ಮೂಢಒಕ್ಕಲಿಗನಂತೆ, ಎಷ್ಟೋ ಜನರು ಕಾರ್ಯೆನಾಧನಕ್ಕಾಗಿ ಸ್ಥಳಾಂತರ ಮಾಡುವದು ಅವಶ್ಯವೆಂದು ತಿಳಿಯುತ್ತಾರೆ. ಆದರೆ ಜಾಣರೈತನು ಕಾಡುಭೂಮಿಯನ್ನೇ ಗೊಬ್ಬರ ಹಾಕಿ ಫಲದ್ರೂಪವಾಗಮಾಡಿಕೊಳ್ಳುವಂತೆ, ಬುದ್ಧಿ ವಂತ ಹಾಗು ದೃಢ ನಿಶ್ಚಯದ ಮನುಷ್ಯನು ಕಾರ್ಯಸಾಧನಕ್ಕಾಗಿ ಸ್ಥಳಾಂತರಮಾಡದೆ ಇದ್ದ ಊರಲ್ಲಿಯೇ ಇದ್ದ ಸ್ಥಿತಿಯಲ್ಲಿಯೇ ಇದ್ದು, ಸ್ವಂತ ಪರಿಶ್ರಮದಿಂದ ಬೇಕಾದ ಅನುಕೂಲತೆಗಳನ್ನು ಉತ್ಪನ್ನ ಮಾಡಿಕೊಂಡು ಕಾರ್ಯ ಸಾಧಿಸಹತ್ತಿ ಪ್ರಗತಿಹೊಂದುವನು. ಆದ್ದರಿಂದ ಕಾರ್ಯದಲ್ಲಿ ಆಸಕ್ತಿಯನ್ನಿಡದೆ ದೈವಪರೀಕ್ಷೆಯನ್ನು ಕಂಡುಹಿಡಿಯುವದಕ್ಕಾಗಿ ಸ್ಥಳಾಂತರಮಾಡಿ ದೊಡ್ಡ ದೊಡ್ಡ ಪಟ್ಟಣಗಳ ಕಡೆಗೆ ಓಡಹತ್ತಬಾರದು; ಅಥವಾ ಒಂದು ಉದ್ಯೋಗವನ್ನು ಬಿಟ್ಟು ಬೇರೆ ಉದ್ಯೋಗವನ್ನು ಕೈಕೊಳ್ಳಬಾರದು. ಸಂಕಟಗಳು, ವಿಘ್ನಗಳು ಮನುಷ್ಯನಲ್ಲಿ ಆಸಕ್ತಿಯನ್ನು ಹೆಚ್ಚಿಸಲಿಕ್ಕೂ, ನಿಶ್ಚಯವನ್ನು ದೃಢಪಡಿಸಲಿಕ್ಕೂ: ಸ್ವಾತಂತ್ರ್ಯ ಪ್ರೀತಿಯೆನ್ನು ವೃದ್ಧಿಗೊಳಿಸಲಿಕ್ಕೂ, ಅಪೂರ್ವತೆಯನ್ನು ವ್ಯಕ್ತಗೊಳಿಸಲಿಕ್ಕೂ ಕಾರಣಗಳಾಗುವವು. ಯಾವನು ಸಂಕಟಪರಂಪರೆಗಳಿಗೆ ಎದೆಗೊಟ್ಟು ಕಾರ್ಯ ಸಾಗಿಸುವನೋ ಅವನು ಪುಟಕೊಟ್ಟ ಚಿಹ್ನವು ಶುದ್ಧವೂ, ಹೆಚ್ಚು ಕಾಂತಿಮಯವೂ, ವಿಶೇಷ ಬೆಲೆಯುಳ್ಳದ್ದೂ ಆಗುವಂತೆ ಮನೋದಾರ್ಢ್ಯವಿಶೇಷದಿಂದ ಪ್ರಖ್ಯ್ಯಾತನಾಗಿ ಪ್ರಗತಿಯನ್ನು ಹೊಂದುವನು.
ಅಂಥ ಇಂಥ ಕಾರ್ಯವನ್ನು ಮಾಡಿದ ಮನುಷ್ಯನೇ ಪುಗತಿ ಹೊಂದಬೇಕೆಂತಿಲ್ಲ; ಇಂಥ ಇಂಥ ಜಾತಿಯ ಇಲ್ಲವೆ ಇಂಥ ವರ್ಣದ ಜನರೇ ಪ್ರಗತಿಹೊಂದಬೇಕೆಂತಿಲ್ಲ; ಪ್ರಗತಿಹೊಂದುವ ವಿಷಯದಲ್ಲಿ ಬ್ರಾಹ್ಮಣನೂ ಅಷ್ಟೇ ಅಧಿಕಾರಿಯು; ಚಾಂಡಾಲನೂ ಅಷ್ಟೇ ಅಧಿಕಾರಿಯು; ಬಡ ಕೂಲಿಕಾರನೂ ಅಷ್ಟೇ ಅಧಿಕಾರಿಯು; ಪ್ರಗತಿಹೊಂದಲಿಚ್ಚಿಸುವ ಮನುಷ್ಯನನ್ನು ಕಂಡು ಯಾರೂ ಅಸೂಯೆ ಪಡುವಕಾರಣವಿಲ್ಲ. ಒಂದುವೇಳೆ ‘ನೆರೆಹೊರೆಯವರು ಪ್ರಗತಿಪರ ಮನುಷ್ಯನಿಗೆ ಕೇಡುಬಗೆಯಹತ್ತಿದರೂ ಸೃಷ್ಟಿಯು, ಈಶ್ವರನು ಅವನಿಗೆ ಸಂಪೂರ್ಣ ಸಹಾಯಕಾರಿಗಳಾಗಿರುವದರಿಂದ ಅವನ ಉಚ್ಪ್ರ್‍ಏಯವು ದಿನೇದಿನೇ ಅಭಿವೃದ್ಧಿಯಾಗಹತ್ತುತ್ತ.
ಆದರೆ ಬರೆಯಲಿಕ್ಕೆ ಅತ್ಯಂತ ಖೇದವೆನಿಸುವೆ ಸಂಗತಿ ಯಾವದೆಂದರೆ, ನಮ್ಮಲ್ಲಿಯ ಬಹುಜನ ಮುದುವರು ಪ್ರಗತಿಮಾರ್ಗದಲ್ಲಿ ಬರುವ ಸಂಕಟಗಳಿಗೆ ಹೆದರಿ ನಮ್ಮ ಮಕ್ಕಳಿಗೆ ಯಾವ ಹೊಸ ಉದ್ಯೋಗವನ್ನೂ ಮಾಡುವ ಅವಶ್ಯವಿಲ್ಲ. ದೇವರ ದಯೆಯಿಂದಲೂ, ಪೂರ್ವಜರ ಪ್ರಣ್ಯದಿಂದಲೂ ಅವರ ಹೊಟ್ಟೆ ಬಟ್ಟೆಗಳಿಗೆ ಕೊರತೆಯಿಲ್ಲ; ಅವರು ಕೂತುತಿಂದರೂ ಚೆಟ್ಣಿ-ಬಕ್ಕರಿಗೆ ಕೊರತೆಯಾಗಲಿಕ್ಕಿಲ್ಲ. ಆದ್ದರಿಂದ ನಮ್ಮ ಮಕ್ಕುಳು ಹೆಚ್ಚಿನ ಸಾಹಸಕ್ಕೆ ಹೋಗದೆ ಇದ್ದದ್ದನ್ನು ಸಾಗಿಸಿಕೊಂಡು ಹೋದರೆ ಸಾಕು” ಎಂದು ನಿರುತ್ಸುಹದ ಹೇಡಿತನದ, ಕರ್ತವ್ಯಪರಾಙ್ಮುಖತೆಯ, ಹೇಯವೃತ್ತಿಯ ಉದ್ಗಾರಗಳನ್ನು ಬಾಲ್ಯದಿಂದಲೇ ತಮ್ಮ ಚಿಕ್ಕಮಕ್ಕಳ ಮನಸ್ಸಿನಲ್ಲಿ ಬಿಂಬಿಸುವಂತೆ ಹೊರೆಗೆಡುವುತ್ತಿರುತ್ತಾರೆ. ಅವರ ಈ ಉದ್ಗಾರಗಳು ಸಾಮಾನ್ಯ ದೃಷ್ಟ್ರಿಯಿಂದ ಯೋಗ್ಯವಾಗಿ ತೋರಬಹುದಾಗಿದ್ದರೂ ಪ್ರಗತಿ ಗಾಮಿಯ ದೃಷ್ಟಿಯಿಂದ ಅವು ಬಹಳ ನಿಂದ್ಯವಾಗಿ ತೋರುವುವು. ಪ್ರತಿಯೊಬ್ಬನ ಜನ್ಮವೂ, ರೂಪವೂ, ಬುದ್ಧಿಯೂ, ಧ್ಯೇಯವೂ ಹಿಂದೆ ಹೇಳಿದಂತೆ ಪ್ರತ್ಯೇಕವಾಗಿರುವದರಿಂದ ಅವನು ಪೂರ್ವಜರ ಅನುಕರಣಮಾಡುವದು ಯೋಗ್ಯವಾದೀತೇ? ಹುಡುಗರಿಗೆ ತಿಳಿಯಹತ್ತಿದಾಗಿನಿಂದ ಅವರ ಒಲವು ಜಾಗ್ರತಿವಾಗಹತ್ತುತ್ತದೆ; ಕಾರ್ಯಕಾರಣಗಳಿಂದ ಚಿಕಿತ್ಸೆ ಮಾಡುವ ಅಧಿಕಾರವು ಪ್ರಾಪ್ತವಾಗುತ್ತದೆ. ಎಷ್ಟೋ ಹುಡುಗರು ಒಂದೇ ಸಾಲೆಯಲ್ಲಿ, ಒಂದೇ ವರ್ಗದಲ್ಲಿ, ಒಬ್ಬನೇ ಶಿಕ್ಷಕನಲ್ಲಿ ಕಲಿಯುತ್ತಿದ್ದರೂ, ಅವರೆಲ್ಲರ ಬುದ್ಧಿಯೂ, ವಿಚಾರ ಗಳೂ, ಶಿಕ್ಷಣವೂ ಭಿನ್ನಭಿನ್ನವಾಗುವಂತೆ, ಅವರವರ ಧ್ಯೇಯಗಳೂ ಭಿನ್ನಭಿನ್ನವಾಗುವವು. ಹೀಗಿರಲು ಹೇಡಿ ಹಾಗು ಕರ್ತವ್ಯಪರಾಙ್ಮುಖನಾದ ತಂದೆಯು ತನ್ನ ಓಜಸ್ವಿ ಹಾಗು ಕರ್ತವ್ಯನಿಷ್ಟ ಮಗನಿಗೆ ಮೇಲಿನಂತೆ ಬೋಧಿಸುವದು ಯೋಗ್ಯವೇ? ಅಪಕ್ವವಿಚಾರಗಳಿರುವ ವರೆಗೆ ಮಗನಿಗೆ ತಂದೆಯ ಬೋಧವು ಸಮ್ಮತವಾಗಿದ್ದರೂ, ಕರ್ತವ್ಯದಿಶೆಯನ್ನು ಕಂಡುಹಿಡಿದ ಮಗನಿಗೆ ತಂದೆಯ ಬೋಧದಲ್ಲಿ ಅರ್ಥವಿಲ್ಲೆಂಬದು ವ್ಯಕ್ತವಾಗುವದು, ಯಾಕಂದರೆ ಕರ್ತವ್ಯನಿಷ್ಠನು ತನ್ನ ಪೂರ್ವಜರ ಧನ-ಧಾನ್ಯಗಳನ್ನು ಉಪಯೋಗಿಸುವದರಲ್ಲಿ ಸುಖಿಯಾಗಿರುವದಿಲ್ಲ. ಅವನು ಅವುಗಳನ್ನು ಪಿತೃಗಳ ಪೂಜ್ಯತೆಯ ಮಾನದಿಂದ ಪ್ರಸಾದವೆಂದು ತಿಳಿದರೂ, ಮನುಷ್ಯತ್ವದ ದೃಷ್ಟಿಯಿಂದ ಅವನ್ನು ಅವನು ತನ್ನ ಮಾರಕ-ಆಗ್ರಾಹ್ಯಗಳೆಂದು ಭಾವಿಸುವನು. ಹಿರಿಯರ ಹೆಸರಿನ ಮೇಲೆ, ಕೀರ್ತಿಯ ಮೇಲೆ, ಪುಣ್ಯದ ಮೇಲೆ, ಆಸ್ತಿಯ ಮೇಲೆ ಉಪಜೀವಿಸುವದು ಅಲೌಕಿಕ ಮನುಷ್ಯನಿಗೆ ನರಕಪ್ರಾಯವಾಗಿ ತೋರುವದು. ಹಿರಿಯರ ಆಸ್ತಿಯ ಚೆಟ್ಣಿ-ಬಕ್ಕರಿ, ಇಲ್ಲವೆ ತರತರದ ಪಕ್ವಾನ್ನ ಇವುಗಳ ಸೇವನಕ್ಕಿಂತ ಸ್ಪಂತದ ಬೆವರು ಹನಿಯಿಂದಕ್ಕಿಸಂಪಾದಿಸಿದ ಕಾಟಿಯನ್ನು ಕುಡಿದುಜೀವಿಸುವದರಲ್ಲಿ ಹೆಚ್ಚು ಸುಖವದೆಯೆಂದು ಓಜಸ್ವಿ ಮನುಷಯನು ಭಾವಿಸಿ ಶಕ್ತಿಮೀರಿ ಹೆಣಗಿ ಆಲೌಕಿಕತೆಯನ್ನು ವ್ಯಕ್ತಗೊಳಿಸುವನು. ಆದ್ದರಿಂದ ಪ್ರಗತಿಹೊಂದ ಬಯಸುವ ಮನುಷ್ಯನು ಸಾಧನಾಭಾವಕ್ಕಾಗಿ ತಡೆಯದೆ, ಅಪೂರ್ವತೆಗೆ ಭಂಗತಂದುಕೊಳ್ಳದೆ ದೃಢನಿಶ್ಚಯಕ್ಕೆ ಚ್ಯುತಿ ಬಾರದ ಹಾಗೆ, ಸ್ವಾತಂತ್ರ್ಯಪ್ರೀತಿಗೆ ಕುಂದುತಟ್ಟದ ಹಾಗೆ ಕಾರ್ಯಮಾಡಿ ಪ್ರಗತಿಹೊಂದಬೇಕು.
*****
ಮುಂದುವರೆಯುವುದು