ನಗು, ನಗುತ್ತ ಬಂದರು
ನರರೂಪ ರಾಕ್ಷಸರು
ಕೇಡಾಡಿ ಸುಟ್ಟು ಹಾಕಿದರು.
ಹೈನದ ಹಸು ಮಾಡಿ
ಹಲ್ಲಲ್ಲಿ ಹೀಜುತ್ತ ಹೋದರು
ಕಡೆಗೊಮ್ಮೆ,
ಕೆಚ್ಚಲು ಖಾಲಿಯಾಗೆ,
ಕೆಟ್ಟ ಕೃಷೆಯಲ್ಲಿ ಕುರುಡಾದರು-
ನಿರಾಶಯನು
ಹಿಂಸೆಯಲಿ ತಣಿಸಿಕೊಳ್ಳತೊಡಗಿದರು.
ಹೆಣ್ಣು- ಧರಿತ್ರಿ, ಪ್ರಕೃತಿ, ಶಕ್ತಿ, ದೇವತೆ
ಹಾಗೆ ಹೀಗೆಂದು ಪೂಜಿಸುವರು
ಹೆಣ್ಣು ಗೋಳು ಗುಡಿಸಲು ರಂಗ್ಳಿಸುವರು
ನಾ ಮುಂದು ತಾ ಮುಂದು ಎನ್ನುವರು.
ಮಾಡುವುದು ಅನಾಚಾರ
ಮನೆ ಮುಂದೆ ಬೃಂದಾವನ ವೆಂದಂತೆ
ತನಗಾದರೊಂದು ಅನ್ಯರಿಗಾದರಿನ್ನೊಂದೆಂಬ
ಇಬ್ಬಂದಿ ನೀತಿಯ ಪಿಶಾಚಿಗಳು
ಎಲ್ಲಕ್ಕೂ ಒಂದೊಂದು ಶ್ಲೋಕ
ಸಿದ್ಧವಾಗಿಟ್ಟಿಹರು.
ಇದು ನೋಡಿ
ಇದು! ಈ ನೆಲದ ನ್ಯಾಯ.
ಬಾಳೆಂದರೆ
ಬರಿ ಬಂಗಾರ, ಕುರುಡು ಕಾಂಚಾಣವಲ್ಲ
ಮನಸು ಮುಖ್ಯ.
ಹೆಣ್ಣು ಹೂವು,
ಅವಳನ್ನು ಪ್ರೀತಿಯಿಂದ ನಡೆಸಿಕೊಳ್ಳಬೇಕು
ಸುಖ, ಸಂತಸವ ಬಾಚಿ ಸುರಿದು ಕೊಳ್ಳಬೇಕೆಂಬ
ಸರಳ ಸೂತ್ರವೇ ಗೊತ್ತಿಲ್ಲದವರು.
*****