ಬಾಳು… ಬರಿ ಗೋಳು
ನಿರಾಶೆಯ… ಮಡುವು
ಬರಿ ನೋವಿನ ತಿರುವು
ಹಲವು ಮುಖಗಳಲಿ ನೋವು
ನಡೆದಿದೆ ವಿಧ-ವಿಧದಲಿ ಗೋಳು
ಮೇಲು ಕೀಳು-ರೋಗದಲಿ
ಹಣವಂತರ ಅಬ್ಬರದಲಿ
ಆಧುನಿಕತೆಯ ಹೆಸರಿನಲಿ
ಕಳೆದು ಹೋಗುತಿದೆ ಈ ಬಾಳು
ನೀತಿಯ ನೆಲೆ ಕಳಚಿ
ಪ್ರೀತಿಯ ಸೆಲೆ ಒಣಗಿ
ಬಾಂಧವ್ಯದ ಬಳ್ಳಿ ಕಡಿದು
ಬವಣೆಯಲಿ ಬಳಲುತಿದೆ ಈ ಬಾಳು
ಹಸಿವೆಯ ಹಾವು
ನೀರಿನ… ದಾಹವು
ಜಾತಿಯ ವಿಷವು
ಕೊಲೆ-ಮಾಡುತಿಹವು
ನರಕಯಾತನೆ ನೀಡುತಿಹವು
ಕನಸು ಕಂಡು…
ಬಯಸಿದ ಈ ಬದುಕಲಿ
ಸಮಾಜ, ಬಾಳು, ಹಾಳಾಗುತಿಹದು.
***