ಮಿಂಡಾನು ಬಂದಾನೆ ಗಂಡಿಲ್ಲ ಅಡವ್ಯಾಳೆ
ಅಡ್ಡುಣುಗಿ ಊಟಕ್ಕ ಹಾಕ ಗೆಳತಿ ||ಪಲ್ಲ||
ತುಂಬೀದ ತತರಾಣಿ ಚಿತ್ತಾರ ಅತರಾಣಿ
ಬಾರೆನಕೆ ಚಾರೆನಕೆ ಜಾರ ಜಾಣೆ
ಚದುರಂಗ ಚಿತರಾಣಿ ಪದುಮಾದ ಉತರಾಣಿ
ಚಾಚನಕೆ ಚುಂಬನದ ಚತುರರಾಣೆ ||೧||
ವ್ಯಾಳ್ಯಾಕ ಬಂದಾವಾ ಆಳಾಕ ಬಂದಾವ
ಇವನ್ಯಾಕ ಹುಚಮಾವ ಹೊಕ್ಕುಬಿಟ್ಟಾ
ಜಾತರಿ ಪಿರಿಪಿರಿ ಪೀತಾಂಬ್ರ ಜರಿಜರಿ
ಖಾತರಿ ಪೀರೂತಿ ಕಾಡಿ ಕೊಟ್ಟಾ ||೨||
ಗಂಡಾನು ಗೋಸುಂಬಿ ಮಿಂಡಾನು ಮೋಸುಂಬಿ
ಆಗುಂಬಿ ಹೋಗುಂಬಿ ನೀನ ಗೊಂಬಿ
ರತುನಾದ ನೀರ್ಕೊಡ ನೀರೆ ಸುಂದರಿ ಕೂಡ
ಕುತನೀಯ ಪಲ್ಲಂಗ ಹಾಕೆ ರಂಬಿ ||೩||
ಬೋಗೂಣಿ ಮುತ್ತಾವ ಈ ಮಾವ ತಂದಾನೆ
ಬಾಗೂಣಿ ಆಗೂಣಿ ಬೇಗ ಬಾರೆ
ಗುಣನೂರು ಪರಭಾರೆ ಇವನೂರು ಸಿವನಾರೆ
ಹಸನಾರೆ ಜಸನಾರೆ ಜೀಕಿ ಬಾರೆ ||೪||
*****
ಮಿಂಡ=ಪರಮಾತ್ಮ: ಗಂಡ-ಭೋಗಗಳು