ಕಾಲನು ಮುರಿಯದಿರಿ

ಕಾಲನು ಮುರಿಯದಿರಿ – ಕೋಳಿಯ
ಕಾಲನು ಮುರಿಯದಿರಿ ||ಪ||

ತನ್ನಯ ಪಾಡಿಗೆ ತಾನು ಎಲ್ಲೋ
ಆಯ್ಕೊಂಡ್ ತಿನ್ಕೊಂಡ್ ಇರುವಾಗ ||ಅ.ಪ||

ಅನ್ನವನ್ನು ಕೇಳುವುದೇ?
ಕುಡಿಯಲು ನೀರನು ಕೇಳುವುದೇ?
ಶಿಕ್ಷಣ ಕೊಡಿ ಎಂದು ಕೇಳುವುದೆ?
ಆರೋಗ್ಯವನ್ನು ಕೇಳುವುದೆ?
ಏನನು ಕೇಳದೆ ತನ್ನಯ ಪಾಡಿಗೆ
ಆಯ್ಕೊಂಡ್ ತಿನ್ಕೊಂಡ್ ಇರುವಾಗ . . . .
|| ಕಾಲನು ಮುರಿಯದಿರಿ ||

ಬಟ್ಟೆಯನ್ನು ಕೇಳುವುದೇ?
ತಟ್ಟೆಗೆ ಕೈಯನು ಹಾಕುವುದೆ?
ಸೊಟ್ಟಗೆ ಮೂತಿ ಮಾಡುವುದೆ?
ರಟ್ಟೆಯನ್ನು ತಟ್ಟುವುದೆ?
ಏನನು ಮಾಡದೆ ತನ್ನಯ ಪಾಡಿಗೆ
ಆಯ್ಕೊಂಡ್ ತಿನ್ಕೊಂಡ್ ಇರುವಾಗ . . . .
|| ಕಾಲನು ಮುರಿಯದಿರಿ ||

ಚಿನ್ನವನ್ನು ಕೇಳುವುದೇ?
ರನ್ನ ತಾವು ಎನ್ನುವುದೇ?
ಸಣ್ಣಗೆ ಮಾತನು ಆಡುವುದೆ?
ತಣ್ಣಗೆ ಚೂರಿಯ ಹಾಕುವುದೆ?
ಎಲ್ಲೊ ಏನೊ ತನ್ನಯ ಪಾಡಿಗೆ
ಆಯ್ಕೊಂಡ್ ತಿನ್ಕೊಂಡ್ ಇರುವಾಗ . . .
|| ಕಾಲನು ಮುರಿಯದಿರಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹನುಮಂತನ ಕಥೆ
Next post ಕಣ್ಣೀರು

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…