ಅರಳುತಿದ್ದ ಮೊಗ್ಗು

ಅರಳುತ್ತಿದ್ದ ಮೊಗ್ಗು
ಮುದುಡಿ ಹೋಯಿತಲ್ಲ
ಕಾಣುತಿದ್ದ ಕನಸು
ಕರಗಿ ಹೋಯಿತಲ್ಲ /ಪ//

ಪುಟ್ಟ ಬೆರಳುಗಳು ಬಿಡಿಸುತ್ತಿದ್ದ
ಅಕ್ಷರಗಳ ರಂಗೋಲಿ
ಅರವಿನ ಬಣ್ಣವ ಪಡೆಯುವ ಮೊದಲೆ
ಕದಡಿ ಹೋಯಿತಿಲ್ಲಿ
ಕದಡಿ ಹೋಯಿತಿಲ್ಲಿ – ತಾಳಿಯ
ನೊಗದ ಭಾರದಲ್ಲಿ

ಮುತ್ತೈದೆ ಎಂದರೆ ಏನೆಂದು
ತಿಳಿವುದಕ್ಕೆ ಮೊದಲೆ
ಮುತ್ತೈದೆ ತಾನಾಗಿ ಹೋಗಿರೆ
ಏನು ಇದಕೆ ಅರ್ಥ
ಏನು ಇದಕೆ ಅರ್ಥ – ಹೇಳಿ
ಇದು ಯಾರ ಸ್ವಾರ್ಥ?

ಕುಣಿದಾಡುವ ಹೆಜ್ಜೆಗಳು ತುಳಿದಿರೆ
ಅಗ್ನಿ ಸುತ್ತಲಿನ ಸಪ್ತಪದಿ
ಹಾರಿದ ಕಿಡಿಗಳು ಅವರನು ಸೋಕಿ
ಹೊರ ಹಾಕದೆ ಒಳ ಬೇಗುದಿ
ಹೊರ ಹಾಕದೆ ಒಳ ಬೇಗುದಿ
ಅರಿಯಿರಿ ಇದರ ಎಲ್ಲ ಬದಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೈಥಿಲೀ
Next post ಆಗ್ರಹ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…