ಹೇಳಿಕೊಳ್ಳುವೆವು ಎದೆ ತಟ್ಟಿ

ಹೇಳಿಕೊಳ್ಳುವೆವು ಎದೆ ತಟ್ಟಿ
ಕನ್ನಡಿಗರು ನಾವು
ನಮಗೆ ಯಾರಿಗೂ ಬೇಡ
ಕನ್ನಡ ಮಾಧ್ಯಮವು
ಆದರೂ ಕನ್ನಡಿಗರು ನಾವು
ಯಾರಿಗೆ ಕಡಿಮೆ ನಾವು!

ಮಾಸ್ತಿ ಕುವೆಂಪು ಬಿ.ಎಂ.ಶ್ರೀ
ಯಾರಾದರೆ ಏನು?
ಗೋಕಾಕ್, ಮಹಿಷಿ ವರದಿ
ಏನು ಹೇಳಿದರೆ ಏನು?
ವಿವೇಕ ನಮಗೆ ಅಪಥ್ಯವು!
ಕಾನ್ವೆಂಟ್ ನಮಗೆ ಪಥ್ಯವು!

ರಾಜ್ಯೋತ್ಸವ ನಮ್ಮ ಹಬ್ಬ
ಅದಕೆ ಜೈಕಾರ
ತಿಂಗಳು ಪೂರ್ತಿ ಕನ್ನಡವು
ಇನ್ನೆಂಥ ಮಮಕಾರ?
ಉಳಿದ ತಿಂಗಳು ಹನ್ನೊಂದು
ಬರುವುದು ನವೆಂಬರ್ ಇನ್ನೊಂದು!

ಕೂಗಿ ಕೂಗಿ ಕನ್ನಡವ
ಕುಡಿದೆವು ಬಿಸ್ಲೆರಿ ನೀರು
ಜೊತೆಗೆ ಸಿಕ್ಕಿತು ಪುರಸ್ಕಾರ
ಮತ್ತೆ ಹೋರಾಟ ಬೋರು
ಇನ್ನು ಕನ್ನಡದ ಗತಿ ಏನು?
ಅದರ ಕತೆ…. ಯಾಕಿನ್ನು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಟ್ಟಿ
Next post ತೊರೆಯಲಿ ಹೇಗೆ? ಮರೆಯಲಿ ಹೇಗೆ?

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…