ಯಾರು ಏನೆಂದರೇನು?
ನಿಲ್ಲದೀ ಬಾಳ ದೋಣಿ|
ಕಡಲಾದರೇನು
ನದಿಯಾದರೇನು|
ಸಾಗುವುದೇ ಇದರ
ಪರಮ ಗುರಿಯಾಗಿರಲು ||
ಕಡಲಾದರೆ ಅನಂತ ದೂರ ಸಾಗುವೆ
ನದಿಯಾದರೆ ಅನೇಕ ಊರ ಸೊಬಗ ನೋಡುವೆ|
ಕಡಲಲಿ ಎದುರಾಗುವ
ಅಬ್ಬರದಲೆಗಳ ದಾಟಿ ಸಾಗುವೆ|
ನದಿಯಲಿ ತೊರೆಯ ಹರಿವಲಿ
ನಲಿಯುತಾ ಮುಂದೆ ಸಾಗುವೆ||
ಸಾಗುವ ಜೀವಕೆ ದಾರಿ ಹೇಗಿದ್ದರೇನು
ಜೀವಿಸುವ ಛಲ ಒಂದಿದ್ದರೆ ಸಾಕು|
ಏನೇ ಬಂದರೂ ಗುರಿ ಸೇರುವ
ಆತ್ಮವಿಸ್ವಾಸ ಗಳಿಸಿಗೊಂಡಿರಬೇಕು|
ಬದುಕುವ ದಾರಿಯಲೇನೇ
ಸ್ತುತಿ ನಿಂದನೆಗಳು ಬಂದರೆ
ಭಯವನು ಬೀಳದೆ ವಿಚಲಿತನಾಗದೆ
ಎಲ್ಲವೂ ಅವನ ಪೂರ್ವ ನಿಯೋಜಿತ
ಎನ್ನುತ ಸಾಗಿ ಅವನಿಗೆ ಸಮರ್ಪಿಸುತ್ತಿರಬೇಕು||
*****