ದೇಹವೆಂಬ ಹಣತೆಯಲ್ಲಿ

ದೇಹವೆಂಬ ಹಣತೆಯಲ್ಲಿ
ಎಣ್ಣೆ ಎಂಬ ಚೇತನದಲಿ
ಬತ್ತಿ ಎಂಬ ಭಕ್ತಿ ಇಟ್ಟು
ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ ||

ಸತ್ಯ ಧರ್ಮ ಬೆಳಕಿಗಾಗಿ
ನಿತ್ಯ ಶಾಂತಿ ತೃಪ್ತಿಗಾಗಿ
ಬಾಳ ಬದುಕು, ಸುಗಮಕ್ಕಾಗಿ
ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ ||

ಹಲವು ಮೌಢ್ಯ ಸಂಪ್ರದಾಯ
ಭೂತ ಪ್ರೇತ ಮಂತ್ರ ಮಾಟ
ತೊರೆದು ವಿದ್ಯೆ ಕಲಿಕೆಗಾಗಿ
ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ ||

ಸತ್ಯ ಧರ್ಮ ಬೆಳಗುವಂಥ
ನ್ಯಾಯ ನೀತಿ ನೀಡುವಂಥ
ಮನುಜ ಬಾಳ್ವೆ ನಡೆಸುವಂಥ
ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ ||

ಪ್ರೀತಿ ಪ್ರೇಮ ಸ್ನೇಹ ಬೆಸೆವ
ಎಲ್ಲರೊಂದಿಗೆ ಬಾಳುವಂಥ
ಸುಜನರಾಗಿ ಬಾಳುವಂಥ
ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ಉಪೋದ್ಘಾತ
Next post ಮಂದಸ್ಮಿತ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…