ಹೆತ್ತು ಹೊತ್ತಾದರೂ
ಮಕ್ಕಳು ಮಕ್ಕಳಲ್ಲವೇ
ತಾಯಿ ನಿನಗೇ ||
ಪ್ರಪಂಚವು ನಿನದು
ನೀನು ಹುಟ್ಟಿಸಿದ್ದಿ ಅಲ್ವೆ
ಸ್ವಾರ್ಥ ಮನಸ್ಸು ನಿಸ್ವಾರ್ಥ
ಮನಸ್ಸು ಉಡಿಸಿದ ತುಂಡು
ತುಂಡು ಹೊದಿಕೆ ನಿನ್ನದು ||
ಮಕ್ಕಳು ಎಲ್ಲಾ ಒಂದೇ
ಮಕ್ಕಳಿಲ್ಲದ ತಾಯಿ ತಂದೆ
ಬಂಜೆರೆದೆಯ ಬಲಿಯಾಗುವ
ಬಲಿಪಶುಗಳು ಹತ್ತರೇನೆ
ಹೆಣ್ಣು ಗಂಡು ಮಕ್ಕಳ ||
ಹುಟ್ಟಿಸಿದ್ದಿ ನೀನು ಸಾಯುವ
ತನಕ ಕಂಡರೇನೆ ಹಾಲು ಉಂಡವರು
ಬೇವಿನ ರಸ ಹಿಂಡುವ ನಿನ್ನ
ಒಡಲ ದನಿಗಳು
ಯಾರಿಗೆ ಯಾರು ಋಣ….. ||
ಪ್ರೀತಿ ಬಂಧನಕೆ ಜನುಮ
ಜನುಮ ಸ್ಪಂದನ ತಾಯಿ
ನಿನ್ನ ಸ್ಥಾನ ವಿಶ್ವಕೆ ಸಾತ್ವನ
ಹೆತ್ತು ಹೊತ್ತಾದರೂ ತಾಯಿ
ನೀನು ನಮ್ಮ ತಾಯಿ ನೀನು
ನಿನಗೆ ನನ್ನ ನಮನ ||
*****