ನೀಲಾಕಾಶದಲ್ಲಿ ಸರ್ಪವೊಂದು ಹರಿದಂತೆ
ಅವಳು ಬುಸುಗುಡುತ್ತಾಳೆ.
ಸಂಗೀತ ದಿಕ್ಕಾಪಾಲಾಗಿ,
ಕೋಣೆ ಗೋಡೆಗಳಿಗೆ ತನ್ನ ತಲೆ ಜಜ್ಜಿಕೊಂಡು
ರಕ್ತ ಕಾರಿ, ನಿರಂತರ ಸಾಯತೊಡಗುತ್ತದೆ.
ಅಲ್ಲಿ ಚುಂಬನಗಳು ಪ್ರತಿ ಮಧ್ಯಾಹ್ನ
ಚಳಿಗಾಲದ ತಣ್ಣಗಿನ ಗಾಳಿಯಂತೆ,
ಶರತ್ಕಾಲದ ಸಂಜೆಮಳೆಯಂತೆ,
ನುಣ್ಣನೆ ಕೆಂಪು ಹೂಗೊನೆಗಳ ಬಿಡುವ ವಸಂತಮಾಸದಂತೆ;
ನಮ್ಮಿಬ್ಬರ ವಯಸ್ಸುಗಳೋ ಬೆನ್ನೆಲುಬಿಲ್ಲದ
ಆ ವೃದ್ಧನನ್ನು ದಾಟಿಕೊಂಡು ಹೋಗುತ್ತಿತ್ತು.
*****