ಆಡಿಯೋ ವಿಡಿಯೋವನ್ನು ಹೊಂದಿದ ಸಂಪರ್ಕ ಸಾಧನ!

ಆಡಿಯೋ ವಿಡಿಯೋವನ್ನು ಹೊಂದಿದ ಸಂಪರ್ಕ ಸಾಧನ!

ಏಕಕಾಲಕ್ಕೆ ಧ್ವನಿಯನ್ನು ದೃಷ್ಯವನ್ನು ಕಾಣುವ ಟಿ.ವಿ. ಮಾಧ್ಯಮಗಳು ಬಂದಿದ್ದರೂ ಅವು ಸಂಪರ್ಕ ಮಾಧ್ಯಮವಾಗಲಾರದೇ ರೂಪಿತ ಕಾರ್ಯಕ್ರಮಗಳನ್ನು ಬಿತ್ತರಿಸುವ ಮಾಧ್ಯಮಗಳಾಗಿವೆ. ಆಡಿಯೋ ವಿಡಿಯೋದ ಮೂಲಕ ಸಂಪರ್ಕ ಸಾಧನದ ವ್ಯವಸ್ಥೆ ಹಾಗಲ್ಲ. ಏಕಕಾಲದಲ್ಲಿ ಸಾವಿರಾರು ಕಿ.ಮೀ. ದೂರದಲ್ಲಿಯ ವ್ಯಕ್ತಿಗಳೊಡನೆ, ಸಭೆಗಳೊಡನೆ, ಸಂಪರ್ಕ ಕಲ್ಪಿಸಿಕೊಂಡು ಪರಸ್ಪರ ಮಾತನಾಡುಪ “ವಿಡಿಯೋ ಕಾನ್ಫರೆನ್ಸ್” ಎಂಬ ಸಾಧನ ರೂಪುಗೊಂಡಿದೆ. ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರು, ಸಂಘ ಸಂಸ್ಥೆಗಳು, ಮತ್ತು ಬೃಹತ್ ಇಲಾಖೆಯ ಮುಖ್ಯಸ್ಥರು, ವೈದ್ಯಕೀಯ ವಿಜ್ಞಾನಿಗಳು ದೂರದ ದೇಶದೊಡನೆ ಸಂಪರ್ಕ ಕಲ್ಪಿಸಲು ‘ದೂರವಾಣಿ ಮೊಬೈಲ್’, ಇತ್ಯಾದಿ ಧ್ವನಿವಾಹಕಗಳಿದ್ದರೂ ಅವುಗಳು ಕೇಳುವುದಕ್ಕೆ. ಹೇಳುವುದಕ್ಕೆ ಮಾತ್ರ ಸೀಮಿತಗೊಂಡಿವೆ. ಸೀಮಿತ ಅವಧಿಯೊಳಗೆ ದೂರದ ನಿಶ್ಚಿತಪ್ರದೇಶಕ್ಕೆ ಪ್ರವಾಸ ಮಾಡಲು ಆಗಲಾರದು. ಮತ್ತು ದುಬಾರಿ ಖರ್ಚು ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲೆಂದೇ ಬಂದಿರುವ “ವಿಡಿಯೋ ಕಾನ್ಫರೆನ್ಸ್‌” ಗಳು ಆಯಾಕಾಲಕ್ಕೆ ಆಯಾ ವ್ಯಕ್ತಿಗಳೊಂದಿಗೆ, ಸಮೂಹದೊಂದಿಗೆ, ಪರಿಸರದೊಂದಿಗೆ ಸಂಪರ್ಕ ಮತ್ತು ದೃಷ್ಯವನ್ನು ಕಲ್ಪಿಸುತ್ತದೆ.

ಇಂದು ಹಲವು ರೀತಿಯ ತಂತ್ರಜ್ಞಾನಗಳು ಲಭ್ಯವಿದ್ದು ಕಂಪ್ಯೂಟರ್ ಆಧಾರಿತ ತಂತ್ರಜ್ಞಾನವು ಅತ್ಯಂತ ಸರಳವಾಗಿದ್ದು ಜನಪ್ರಿಯವಾಗುತ್ತಿದೆ. ಇದರಲ್ಲಿ ಬಳಸುವ ಉಪಕರಣಗಳೆಂದರೆ ಒಂದು ಮೈಕ್ರೋಫೋನ್ (ಧ್ವನಿಯನ್ನು ರವಾನಿಸಲು) ಒಂದು ಸಣ್ಣ ಕ್ಯಾಮರಾ (ಚಿತ್ರ ರವಾನಿಸಲು) ಮತ್ತು ಒಂದು ಕಂಪ್ಯೂಟರ್ ಹಾಗೂ ದೂರವಾಣಿ ಸಂಪರ್ಕ. ಈ ವ್ಯವಸ್ಥೆ ಕೇವಲ ಇಬ್ಬರು ವ್ಯಕ್ತಿಗಳ ನಡುವಣ ಸಂಪರ್ಕವಾಗಿರದೇ ಹಲವು ಜನರ ನಡುವಣ ಮೀಟಿಂಗ್‌ಗಳಿಗೂ ಅವಕಾಶವಿರುತ್ತದೆ. ಇಬ್ಬರು ವ್ಯಕ್ತಿಗಳ ಸಭೆಯಲ್ಲಿ ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತಿದೆಯೋ ಅದೇ ರೀತಿಯಲ್ಲಿ ಇಬ್ಬರಿಗಿಂತ ಹೆಚ್ಚು ಜನ ಸಭೆ ಸೇರಿದ್ದಲ್ಲಿ ಒಂದು ಕಡೆಯಿಂದ ಧ್ವನಿ ಚಿತ್ರಗಳನ್ನು ಉಳಿದ ಎರಡು ಕಡೆಗಳಿಗೆ ಸಾಗಿಸುತ್ತದೆ.

ಈ ದೃಷ್ಯ ಸಂಪರ್ಕ ಸಭೆಗಳು ಸಮಯದ ಅಭಾವವನ್ನು ಎದುರಿಸುತ್ತಿರುವ ವಾಣಿಜ್ಯೋದ್ಯಮಿಗಳಿಗೆ ಅತ್ಯಂತ ಉಪಯುಕ್ತವಾಗಿವೆ. ಇವುಗಳ ಪ್ರಯಾಣದ ಶ್ರಮವನ್ನು ನಿವಾರಿಸುವುದಲ್ಲದೇ ಅತಿ ಮುಖ್ಯ ವ್ಯಕ್ತಿಗಳು ತಮಗೆ ಬೇಕೆನಿಸಿದಾಗ ಸಂಪರ್ಕಿಸಿ ವಿಚಾರ ವಿನಿಮಯ ನಡೆಸಬಹುದು. ಒಂದು ದೇಶದ ಮಾರುಕಟ್ಟೆಯ ಬೆಳವಣಿಗೆಗಳ ಬಗೆಗೆ ಅತಿ ಶೀಘ್ರದಲಿಯೇ ಬೇರೆ ಬೇರೆ ದೇಶಗಳಲ್ಲಿಯ ಪಾಲುದಾರರಿಗೆ ತಿಳಿಸಬಹುದು. ಪದೆ ಪದೆ ಮುಖಾಮುಖಿಯಾಗಿ ಭೇಟಿಯಾಗುತ್ತಿದ್ದರೆ ಪರಸ್ಪರರ ಬಗೆಗೆ ತಿಳುವಳಿಕೆ ಹೆಚ್ಚುತ್ತದೆ ಮತ್ತು ತೀರ್ಮಾನಗಳನ್ನು ಕೈಕೊಳ್ಳಲು ಸಹಾಯವಾಗುತ್ತದೆ.

ಈ ವ್ಯವಸ್ಥೆಯ ಶಿಕ್ಷಣ ರಂಗಕ್ಕೂ ಉಪಕಾರವನ್ನು ಮಾಡುತ್ತದೆ. ಅತ್ಯಂತ ಕ್ಲಿಷ್ಟಕರ ಸಮಸ್ಯೆ, ಪ್ರಮೇಯ, ಸಂಶೋಧನೆಗಳಿದ್ದರೆ ವಿದ್ಯಾರ್ಥಿಯಾಗಿದ್ದವನು ಕುಳಿತಲ್ಲಿಂದಲೇ ದೂರದೇಶದ ತನ್ನ ಗುರುವಿನೊಂದಿಗೆ ಸಂಪರ್ಕಿಸಿ ಆಡಿಯೋ, ವಿಡಿಯೋ ಮೂಲಕ ತನ್ನ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಿಕೊಳ್ಳಬಹುದು. ಸಂವಾದ ಹೆಚ್ಚಿದಂತೆ ಪರಿಹಾರಗಳು ಆಗುತ್ತವೆ. ಮುಕ್ತವಾದ ವಿಚಾರ ವಿನಿಮಯಕ್ಕೆ ಈ ವಿಡಿಯೋ ಸಭೆಗಳು ಉಪಯುಕ್ತವಾಗಿವೆ. ದೇಶದ ಮೂಲೆ ಮೂಲೆಗಳಲ್ಲಿ ಕಾಲೇಜುಗಳನ್ನು ಸ್ಥಾಪಿಸಿ ಅದಕ್ಕೆ ಅಧ್ಯಾಪಕರನ್ನು ನೇಮಿಸಿ ಅವರನ್ನು ನಿಭಾಯಿಸಲು ಇಲಾಖೆಯನ್ನು ಸೃಷ್ಟಿಸುವ ಬದಲು “ದೃಷ್ಯ ಸಂಪರ್ಕಶಾಲೆ” ಸ್ಥಾಪಿಸುವುದು ಸೂಕ್ತ. ಇಂತಹ ಕಾಲವೂ ಕೂಡ ಬರಲಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಸಿದಡುಗೆ ಇದು ಕಾಸಿದ್ದು ಸರಿ ಇದೆಯಾ ?
Next post ಏನೆಂದು ಬಣ್ಣಿಸಲಿ ನಾನು

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…