ಭೂಮಿ ಮತ್ತು ನೀರು | ನಮ್ಮ ಹಕ್ಕು
ಹಕ್ಕಿಗೆ ನಮ್ಮ ಗೌರವ | ಎಲ್ಲ ಕಾಲಕ್ಕೂ //ಪ//
ಭೂಮಿ ಯಾರಪ್ಪನದು ಅಲ್ಲ
ನಮ್ಮ ನಿಮ್ಮ ಸ್ವತ್ತು
ನೀರಿಗೆ ದೊಣೆನಾಯಕನಪ್ಪಣೆಯೆ?
ತೋಳ ಹಳ್ಳಕೆ ಬಿತ್ತು!
ಗತಿಸಿದ ಕಾಲ ನಿಮ್ಮದು ಏನೊ
ನಮ್ಮದು ವರ್ತಮಾನ
ಹಗಲುಗನಸು ಬೇಡವೊ ನಿಮಗೆ
ನಮ್ಮದೆ ಸಂವಿಧಾನ ||೧||
ಮಲಗಿದ್ದವರು ಕುಳಿತಿದ್ದಾಗಿದೆ
ನಿಲ್ಲುವುದಿನ್ನು ನಾಳೆಯೇ
ಓಟ ಆಟ ಎಲ್ಲಾ ನೋಟ
ಸಂವಿಧಾನದನುಸಾರವೇ
ಮಾನವೀಯತೆ ಇದ್ದರೆ ನಿಮಗೆ
ಬನ್ನಿ ನಮ್ಮ ಜೊತೆಗೆ
ಸಮಾನತೆಯೇ ನಿಮಗೂ ಮಂತ್ರವೇ
ಕಳಚಿ ವೇಷ ಜೊತೆಗೆ ||೨||
*****