ತ್ಯಾಗಮಯಿ ನೀ ಪೂರ್ಣಮಯಿ
ನಿನ್ನ ಅಮರ ಭಾವನ ಅಮರಮಯಿ ||
ಜನಕನಲ್ಲಿ ಜನಿಸಿ ನೀ ಜಾನಕಿಯಾದೆ
ರಾಜಕುವರಿ ಎನಿಸಿ ನೀ ತೊಟ್ಟಿಲ ತೂಗಿದೆ
ರಾಮ ರಾಮ ಎಂದೊಲಿದು ರಾಮನ ವರಿಸಿದೆ ||
ದಶರಥನ ಸೊಸೆ ಎನಿಸಿ ಕುಲವಂತಿಯಾದೆ
ರಾಮ ವನವಾಸದಿ ನೀ ಬಲು ನೊಂದೆ
ರಾಮ ರಾಮ ಎಂದೊಲಿದು ಆದರ್ಶ ಸತಿಯಾದೆ ||
ತ್ರೇತ ದ್ವಾಪರ ಕಲಿಯುಗವೆ ಹೋದರು
ರಾಮ ರಾಜ್ಯವ ಯಾರು ಮರೆಯರು
ಸೀತಾಮಾತೆಯೆ ನಿನ್ನ ಕರುಣೆಯೆ ಒಲವು ||
ಮನೆಮನೆಯಲ್ಲಿ ಬೆಳಗಲು ಆರತಿ ನಿನ್ನ
ಗರತಿಯರ ಸೌಭಾಗ್ಯವೆ ಆಯಿತು ಚೆನ್ನ
ಧನ್ಯವಾಯ್ತು ಇದುವೆ ಧರೆಯು ಜಗತ್‍ಜನನಿ ||
*****